ಸಿಂಧನೂರಿನಲ್ಲಿ “ದಿಟ್ಟ, ನಿರ್ಭೀತ, ಹೋರಾಟಗಾರ್ತಿ, ಹುತಾತ್ಮೆ ,ಪತ್ರಕರ್ತೆ” ಗೌರಿ ಲಂಕೇಶರವರ 4ನೇ ವರ್ಷದ ಸ್ಮರಣ ಸಭೆಯನ್ನು ಆಚರಿಸಲಾಯಿತು..
ಸಿಂಧನೂರು ಎಪಿಎಂಸಿಯ ಶ್ರಮಿಕ ಭವನದ ಮುಂದೆ “ದಿಟ್ಟ, ನಿರ್ಭೀತ, ಹೋರಾಟಗಾರ್ತಿ, ಹುತಾತ್ಮೆ,ಪತ್ರಕರ್ತೆ” ಗೌರಿ ಲಂಕೇಶರವರ ಹತ್ಯೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಆ ಭಾಗವಾಗಿ ಸಿಪಿಐ-ಎಂಎಲ್ ರೆಡ್ ಸ್ಟಾರ್ ಪಕ್ಷ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ-ಟಿಯುಸಿಐ ಜಂಟಿ ನೇತೃತ್ವದಲ್ಲಿ ಗೌರಿ ಲಂಕೇಶ್ ರವರ ಸ್ಮರಣ ಸಭೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಐಎಂಎಲ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಗೌರಿ ಲಂಕೇಶರವರ ದಿಟ್ಟ ಹೋರಾಟದ ಕುರಿತು ಮಾತನಾಡಿ, ಗೌರಿಯವರು ರಾಜಿ ರಹಿತವಾಗಿ ಆಳುವ ವರ್ಗದ ವಿರುದ್ಧ ಶೋಷಿತರ ಪರವಾಗಿ ಪತ್ರಿಕೆ ಮೂಲಕ ನಿರ್ಭೀತವಾಗಿ ಬರೆದು ಸಮಸ್ತ ದುಡಿಯುವ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಇದನ್ನು ಸಹಿಸದ ಕೋಮುವಾದಿ, ಮನುವಾದಿ, ಹಿಂದೂತ್ವ ಶಕ್ತಿಗಳು ಗೌರಿಯನ್ನು ಸೆಪ್ಟೆಂಬರ್ 5-2017ರಂದು ಗುಂಡಿಟ್ಟು ಹತ್ಯೆ ಮಾಡುವುದರ ಮೂಲಕ ಅಟ್ಟಹಾಸ ಮೆರೆದಿದ್ದು ಹೇಡಿತನದ ಹೇಯ ಕೃತ್ಯವಾಗಿದೆ. ಇದನ್ನು ನಾಡಿನ ಪ್ರಜ್ಞಾವಂತ ನಾಗರೀಕರು, ಚಳುವಳಿಗಾರರು ಈ ಮನುವಾದಿ, ಸನಾತನವಾದಿ ಫ್ಯಾಸಿಸ್ಟ್ ಸರಕಾರದ ವಿರುದ್ಧ ಬಲಾಢ್ಯ ಆಂದೋಲನವನ್ನು ರೂಪಿಸಿ ಗೌರಿ ಲಂಕೇಶ್ ರವರ ಆಶಯಗಳನ್ನು ಈಡೇರಿಸಲು ಪಣತೊಡಬೇಕೆಂದು ಕರೆ ನೀಡಿದರು. ಮೊದಲಿಗೆ ಗೌರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜನಕವಿ ಸಿ.ದಾನಪ್ಪನವರು ರಚಿಸಿದ “ಅಕ್ಕ ಗೌರಮ್ಮ ಗೌರಿ ಲಂಕೇಶ್ ನೀನಮ್ಮ” ಎಂಬುವ ಕ್ರಾಂತಿಕಾರಿ ಹಾಡನ್ನು ಹಾಡಿ, ಗೌರಿ ಲಂಕೇಶ ಅಮರ್ ರಹೇ ! ನಾನು ಗೌರಿ ! ನಾವೇಲ್ಲಾ ಗೌರಿ ! ಗೌರಿಯವರ ಆಶಯಗಳನ್ನು ಈಡೇರಿಸೋಣ ! ಇನ್ ಕ್ವಿಲಾಬ್ ಜಿಂದಾಬಾದ್ ! ಎಂಬ ಘೋಷಣೆಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಕಾರ್ಯದರ್ಶಿ ಹೆಚ್.ಆರ್.ಹೊಸಮನಿ, ಖಜಾಂಚಿಯಾದ ತಿಮ್ಮಣ್ಣ ಯಾದವ್, ವಿದ್ಯಾರ್ಥಿಗಳಾದ, ಪ್ರಗತಿ, ಸಮರ, ರಮೇಶ ಸುಕಾಲಪೇಟೆ, ಹಮಾಲರ ಸಂಘದ ಸದಸ್ಯರಾದ, ಗವಿಸಿದ್ದಪ್ಪ, ರಾಮಣ್ಣ, ಹನುಮಂತ, ವೀರೇಶ, ಬಸವರಾಜ ಸೇರಿದಂತೆ ಇತರರು ಗೌರಿಯವರ ಸ್ಮರಣೆ ಸಭೆಯಲ್ಲಿ ಭಾಗವಹಿಸಿದ್ದರು. ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ ಸಿಪಿಐ-ಎಂಎಲ್ ಸಿಂಧನೂರು.
ವರದಿ – ಸಂಪಾದಕೀಯ