ಜ್ಞಾನದ ದೀವಿಗೆ ಹಂಚುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು….

Spread the love

ಜ್ಞಾನದ ದೀವಿಗೆ ಹಂಚುವ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು….

ಅನಾದಿ ಕಾಲದಿಂದಲೂ ಗುರು ಎನ್ನುವುದು ನಮ್ಮ ದೇಶದ ಹಿರಿಮೆಯನ್ನು ಎತ್ತಿ ತೋರಿಸುತ್ತದೆ.  ನಿಸ್ವಾರ್ಥ ಸೇವೆ ಪ್ರತಿಭೆಯನ್ನು ಗುರುತಿಸಿ ಅವರ ಜೊತೆ ಜೊತೆಗೆ ಆತ್ಮೀಯ ಸ್ನೇಹಿತ ತರ ಬೆರೆತು ಸಾಗುವ ವ್ಯಕ್ತಿ ತನ್ನ ಕೆಲಸ ಎಂದು ತಿಳಿಯದೇ ಹೃದಯ ತುಂಬಿ ಮಾಡುವ ವಿಧಾನ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಲ್ಲಿ ತುರ್ತಾಗಿ ಬೇಕಾಗಿರುವರು ಎನ್ನುವುದು ಸುಳ್ಳಲ್ಲ. ಒಂದು ದೊಡ್ಡ ಪ್ರಮಾಣದ ದೇಶ ಕಟ್ಟುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ಅಪಾರ ಪ್ರೀತಿ ವಿಶ್ವಾಸ ತುಂಬಿ ವಿದ್ಯಾರ್ಥಿಗಳಿಗೆ ಹುರುದುಂಬಿಸುವ ಮಹತ್ತರವಾದ ಹೊಣೆಗಾರಿಕೆ ಎಲ್ಲಾ ಶಿಕ್ಷಕರ ಮೇಲೇ ನಿಂತಿದೆ.  ಶಿಕ್ಷೆ ವಿಧಿಸುವ ಬದಲು ಆತ್ಮೀಯ ಗೆಳೆಯ ಪಾತ್ರ ಬಹಳ ದೊಡ್ಡ ಮಟ್ಟದ ಬದಲಾವಣೆ ತರಲು ಸಾಧ್ಯ ಎಂಬುದನ್ನು ಗಮನಿಸಬೇಕು… 1.   ಸಮಾನ ಅವಕಾಶ ನೀಡಬೇಕು ವಿದ್ಯಾರ್ಥಿಗಳ ನಡುವೆ ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು 2. ವ್ಯವಸ್ಥೆ ಮತ್ತು ಅದರ ಜೊತೆಗೆ ವ್ಯಕ್ತಿಯ ನಡವಳಿಕೆ ತುಂಬಾ ಪ್ರಭಾವ ಬೀರುತ್ತದೆ. ಹೀಗಾಗಿಯೇ ಶಿಕ್ಷಕರು (ಗುರುವಿನ ಜಾಗದಲ್ಲಿ ಇದ್ದವರು) ತಕ್ಕ ಮಟ್ಟಿಗೆ ನಡೆ ನುಡಿಗಳಲ್ಲಿ ಯಾವ ಅಂತರ ಬೆಳೆಯಲು ಬಿಡಬೇಡಿ. ಗುರುಶಿಷ್ಯಸಂಬಂಧವನೇನೆಂದುಪಮಿಸುವೆ ? ಜ್ಯೋತಿಯಲೊದಗಿದ ಜ್ಯೋತಿಯಂತಿರಬೇಕು, ದರ್ಪಣದೊಳಡಗಿದ ಪ್ರತಿಬಿಂಬದಂತಿರಬೇಕು, ಸ್ಫಟಿಕದೊಳಗಿರಿಸಿದ ರತ್ನದಂತಿರಬೇಕು, ರೂಪಿನ ನೆಳಲಿನ ಅಂತರಂಗದಂತಿರಬೇಕು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ದರ್ಪಣವ ದರ್ಪಣಕ್ಕೆ ತೋರಿದಂತಿರಬೇಕು ಚೆನ್ನ ಬಸವಣ್ಣನವರ ವಚನ  ಸಮಯೋಚಿತ ಹಾಗೂ ಅದರ ಜೊತೆಗೆ ಗುರು ಹೇಗೆ ಶಿಷ್ಯ ಕೂಡ ಹಾಗೆಯೇ ಎಂಬುದನ್ನು ಸಾದರ ಪಡಿಸುತ್ತದೆ. 3. ಗುರು ಶಿಷ್ಯರ ಬಂಧನ ತುಂಬಾ ಅಮೂಲ್ಯವಾದ ಬಂಧ. ಏನೂ ಅರಿವು ಇಲ್ಲದ ಕಲಿಕೆ ವ್ಯರ್ಥ ಶ್ರಮ. ಹೀಗಾಗಿ ಅದಕ್ಕೆ ಮಹತ್ವದ ಸ್ಥಾನ ಇರಲೇ ಬೇಕು 4.  ಶಿಕ್ಷಣದ ಜೊತೆಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಹಲವಾರು ರೀತಿಯ ಮಾಹಿತಿಗಳ ವಿದ್ಯಾರ್ಥಿಗಳಿಗೆ ತಿಳಿಸಲು ಹಿಂದೆ ಮುಂದೆ ನೋಡಲೇ ಬೇಡಿ. 5. ದೇಶದ ವಿವಿಧ ರೀತಿಯ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ಸಂಸ್ಕೃತಿ ಬಿಂಬಿಸುವ ಪ್ರಮುಖ ಪಾತ್ರವನ್ನು ಒಪ್ಪಿಕೊಂಡ. ಜ್ಞಾನದ ಬಲವು ಎಲ್ರಿಗೂ ಸಮವಾಗಿ ಹಂಚುವ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಶಾಲೆ ಶಿಕ್ಷಕರ ದಿನಾಚರಣೆ ಅಷ್ಟೇ ಅಲ್ಲದೇ ಜೀವನದ ಹತ್ತಾರು ಅರ್ಥಗಳನ್ನು ಬಿಂಬಿಸುವ ಗುರುವಾಗಿ ಬಂದ ಅನೇಕರಿಗೆ ಅನಂತ ಧನ್ಯವಾದಗಳು ✍️ಕವಿತಾ ಮಳಗಿ ಕಲಬುರಗಿ ಕವಿದ್ವನಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾ ನ Kavi Dhwani Kalaburagi.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *