ಬೈಕ್ ಪ್ರವಾಸ ಹೊರಟ ಡಾರ್ಕ್ ರೈಡರ್ಸ್ ತಂಡ ಕ್ಕೆ ಕಾದಿತ್ತು ಜವರಾಯ ಆತಿಥ್ಯ.

Spread the love

ಬೈಕ್ ಪ್ರವಾಸ ಹೊರಟ ಡಾರ್ಕ್ ರೈಡರ್ಸ್ ತಂಡ ಕ್ಕೆ ಕಾದಿತ್ತು ಜವರಾಯ ಆತಿಥ್ಯ.

ಓಡಡೋದಕ್ಕೊಂದು ಬೈಕ್ ಬೇಕು, ಜೊತೆಯಲ್ಲಿ ನಾಲ್ಕು ಜನ ಸ್ನೇಹಿತರಿದ್ದರೆ ಸಾಕು, ತಂದೆ ತಾಯಿಯ ಮಾತುಗಳನ್ನು ಗಾಳಿಗೆ ತೂರಿ ಬಿಡುತ್ತಾರೆ ಈಗಿನ ಕೆಲವು ಯುವಕರು.  ಬೈಕ್ ನಲ್ಲಿ ರೈಡ್ ಮಾಡೋದೇನು, ಮೋಜು ಮಸ್ತಿ ಆಟ ಏನು, ಹತ್ತೆವರ ಬುದ್ದಿ ಮಾತಿಗೆ ಕ್ಯಾರೆ ಅನ್ನಲ್ಲ. ಜೀವನದಲ್ಲಿ ಎಲ್ಲವೂ ಬೇಕು ಎಲ್ಲವೂ ಚೆನ್ನಾಗಿರಬೇಕು ಎಂಬ ನಿಯತ್ತಿರಬೇಕು, ಅದಕ್ಕೆ ತಕ್ಕಾಗಿ ಬದುಕಿ ಬಾಳಬೇಕು, ಹಿರಿಯರ ಮಾತನ್ನು ಕೇಳಬೇಕು. ಇಲ್ಲವೆಂದರೆ ಅಪಾಯ ಅನ್ನೋದು ಕಟ್ಟಿಟ್ಟ ಬುತ್ತಿ. ಜಾಲಿ ರೈಡ್  ಯುವಕ.. ಸೇರಿದ್ದು ಯಮ ಲೋಕ…. ನಿನ್ನೆ ಪುತ್ತೂರು ತಾಲೂಕಿನ ಕೌಡಿಚ್ಚಾರು, ಕುಂಬ್ರ ಸೇರಿದಂತೆ ತಾಲೂಕಿನ ಆಸು ಪಾಸಿನ 15 ಜನ ಯುವಕರು ಚಿಕ್ಕಮಗಳೂರಿನತ್ತ ಜೋಲಿ ರೈಡ್ ಪ್ರವಾಸ ಹೊರಟ್ಟಿದ್ದರು ನೆಲ್ಯಾಡಿಯ ಎಂಜಿರದಲ್ಲಿ ಭೀಕರ ಅಪಘಾತಗೊಂಡು 21 ವರ್ಷ ಪ್ರಾಯದ ಕೌಡಿಚ್ಚಾರು ಸಿ ಆರ್ ಸಿ ಕಾಲೊನಿಯ ರಾಜೇಂದ್ರನ್ ಎಂಬವರ ಮಗ ಮನೋಜ್ ಎಂಬವನು ಮೃತ ಪಟ್ಟಿದ್ದಾನೆ. ಪುತ್ತೂರು ತಾಲೂಕಿನ ಕುಂಬ್ರದಿಂದ ಹಾಸನ ಹೊಸಲ್ಲಿ ಗುಡ್ಡಕ್ಕೆ ಬೈಕ್ ಗಳ ಮೂಲಕ ಪ್ರವಾಸ  ಹೊರಟ್ಟಿದ್ದರು.  ಬೈಕ್ ರ್ಯಾಲಿಗೆ ಆರಂಭದಲ್ಲೆ ಯಮ ಸೂಚನೆ ಕೊಟ್ಟಿದ್ದು, ರ್ಯಾಲಿ ಉದ್ಘಾಟನೆಗೊಳ್ಳುತ್ತಿದ್ದಂತೆ 3 ಮೂರು ಬೈಕ್ ಮಗುಚಿ ಬಿದ್ದಿದ್ದು ಡಾರ್ಕ್ ರೈಡ್ ಬೈಕ್ ರ್ಯಾಲಿಗೆ ಮುಂದೆ ಜವರಾಯ ಕಾದಿದ್ದಾನೆಂಬ ಸೂಚನೆ ಸ್ಪಷ್ಟವಾಗಿ ನೀಡಿದಂತೆ ಕಂಡು ಬಂದಿತ್ತು. ಬೈಕ್ ಗಳ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಡಾರ್ಕ್ ರೈಡರ್ಸ್ ಎಂಬ ಹೆಸರನ್ನು ಇಟ್ಟು ಹಿಂದು-ಮುಸ್ಲಿಂ ಎರಡು ಧರ್ಮದವರು ಸೌಹಾರ್ದ ಟೂರ್ ಗೆ 15 ಕ್ಕೂ ಅಧಿಕ ಮಂದಿ ಬೈಕ್ ರೈಡರ್ಸ್ ಗಳು ನಿನ್ನೆ ಹೊಸಲ್ಲಿಗೆ ಪ್ರವಾಸ ಹೊರಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಎಂಜಿರದಲ್ಲಿ ಜವರಾಯನಾಗಿ ಬಂದ ಕಂಟೈನರ್ ಲಾರಿಯೊಂದು ಮನೋಜ್ ರವರು ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಮನೋಜ್ ರಸ್ತೆಗೆ ಎಸೆಲ್ಪಟ್ಟಿದ್ದು ಮಾತ್ರವಲ್ಲದೆ ಸ್ಥಳದಲ್ಲೆ ಉಸಿರು ಚೆಲ್ಲಿದ್ದಾನೆ.

ಸಚಿನ್ ಎಂಬವರು ಗಂಭೀರ ಗಾಯಗೊಂಡು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಕೂಡಲೆ ಈ ಸುದ್ದಿ ತಿಳಿಯುತ್ತಿದ್ದಂತೆ ಆ ವೇಳೆ ಮುಂದೆ ಹೋಗಿದ್ದ ಅದೇ ತಂಡದ ಬೈಕ್ ಸವಾರರು ಅಪಘಾತದ ಸ್ಥಳಕ್ಕೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಚೇತನ್ ಕುಮಾರ್ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸೇರಿದ್ದಾರೆ. ಬೈಕ್ ರ್ಯಾಲಿ ಉದ್ಘಾಟಿಸಿ ಮಾತನಾಡಿದ ಜೆಡಿಎಸ್  ಮುಖಂಡ ಐ.ಸಿ ಕೈಲಾಸ್ ಎಂಬವರು ನಿಧಾನಕ್ಕೆ ಹೋಗಿ ಬನ್ನಿ ಆತುರ ಪಡಬೇಡಿ ತಂಡದಲ್ಲಿದ್ದವರೆಲ್ಲ ಯುವಕರೆ ಆದ ಕಾರಣ ಓವರ್ ಸ್ಪೀಡ್ ಬೇಡವೆಂದು ಹೇಳಿದ್ದು ನಿಮ್ಮನ್ನು ಮನೆಯಲ್ಲಿ ಕಾಯುವವರಿದ್ದಾರೆ ಒಳ್ಳೆಯ ರೀತಿ ಹೋಗಿ ಬನ್ನಿ ಯಾವುದೇ ಕಾರಣಕ್ಕೂ ಗಡಿಬಿಡಿ ಬೇಡ ಗಾಡಿ ನಿಮ್ಮ ನಿಯಂತ್ರಣದಲ್ಲಿರಲಿ ಎಂದು ತಂಡಕ್ಕೆ ಸಲಹೆ ನೀಡಿದ್ದರು. ಮನೋಜ್ ರಬ್ಬರ್ ಟಾಪಿಂಗ್ ಕೆಲಸ ಮಾಡುತ್ತಿದ್ದು ಕಳೆದೆರಡು ದಿನಗಳಿಂದ ಕೆಲಸಕ್ಕೆ ಹೋಗಿರಲ್ಲಿಲ್ಲ, ನನ್ನಲ್ಲಿ ಹಣ ಇಲ್ಲ ನಾನು ಪ್ರವಾಸಕ್ಕೆ ಬರೋದಿಲ್ಲವೆಂದು ಹೇಳಿದರು ಒತ್ತಾಯ ಪೂರ್ವಕವಾಗಿ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಮಗ ಪ್ರವಾಸ ಹೋಗುವ ಬಗ್ಗೆಯೂ ಮನೆಯಲ್ಲಿ ಹೇಳಿಲ್ಲ , ಘಟನೆ ನಡೆದ ಬಳಿಕವಷ್ಟೆ ಮಗ ಪ್ರವಾಸ ಹೋಗಿರುವ ಬಗ್ಗೆ ತಿಳಿದಿದ್ದು ಎಂದು ಮೃತ ಮನೋಜ್ ನ ತಂದೆ ಹೇಳಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *