ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕನ್ನಾಳ ಗ್ರಾಮದಲ್ಲಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ…
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿ ಸಂಗನಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕನ್ನಾಳ ಗ್ರಾಮದಲ್ಲಿ ಶ್ರೀ ಗುಡ್ಡದ ಮಲ್ಲಯ್ಯ ಜಾತ್ರೆ ಮಹೋತ್ಸವ ಅಂಗವಾಗಿ ಕನ್ನಾಳ ಗ್ರಾಮದಲ್ಲಿ ಗುರು ಹಿರಿಯರು ನಿಮಿತ್ಯವಾಗಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಗ್ರಾಣಿ ಕಲ್ಲು ಎತ್ತುವ ಆಸೆ ಎಲ್ಲರಿಗೂ ಇರುತ್ತೆ, ಆದ್ರೆ ಇದರಲ್ಲಿ ಒಂದು ವಿಶೇಷತೆ ಇದೆ, ಅದು ಇದರ ಬಗ್ಗೆ ಮೊದಲು ವಿಚಾರ ಮಾಡಬೇಕು ಅದಕ್ಕೆ ತಕ್ಕತೆ ರೆಡಿ ಇರಬೇಕು ಇದರ ತೂಕ 25 ರಿಂದ 100 ಕೆಜಿ ಸಂಗ್ರಾಣಿ ಕಲ್ಲು ಇರುತ್ತವೆ. ಈ ಸ್ಪರ್ದೇಗೆ ಮೊದಲನೇ ಬಹುಮಾನ ವಿಜೇತರಾದ ಜಿ.ಆಂಜನೇಯ ನಾಯಕ. ಮತ್ತು ಎರಡನೇಯ ಬಹುಮಾನ ಶಂಕರ್ ನಾಯಕ ದೋರೆ ಹಾಗೂ ಮೂರನೇ ಬಹುಮಾನ ವಿಜೇತರಾದ ಹನುಮಂತ ತುರ್ವಿಹಾಳ, ಬಸವರಾಜ ಮಸ್ಕಿ. ಇವರು ಈ ಸ್ಫರ್ಧೆಯಲ್ಲಿ ಭಾಗಿಯಾಗಿ ವಿಜೇತರಾದರು. ಈ ಸ್ಫರ್ದೆಯಲ್ಲಿ ಊರಿನ ಗಣ್ಯರು ಹಾಗೂ ಸಾರ್ವಜನಿಕರು ಪಾಲುಗೊಂಡು ಈ ಕಾರ್ಯಕ್ರಮವನ್ನು ಸರಳವಾಗಿ ನೆರೆವರಿಸಿಕೊಟ್ಟರು.
ವರದಿ – ಸೋಮನಾಥ ಹೆಚ್ ಎಮ್