ಡಿಜಿಟಲ್ ಪಾವಗಡ ಉದ್ಘಾಟನೆಗೆ ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರು ಹಾಗೂ ಬೆಂಗಳೂರು ಚಿಕ್ಕ ಜಾಲ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಸ್. ಆರ್.ರಾಘವೇಂದ್ರ ರವರು…..
ಡಿಜಿಟಲ್ ಪಾವಗಡ ಉದ್ಘಾಟನೆಗೆ ಪಾವಗಡ ಸಮಗ್ರ ಸೇವಾ ಅಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರು ಹಾಗೂ ಬೆಂಗಳೂರು ಚಿಕ್ಕ ಜಾಲ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಸ್. ಆರ್.ರಾಘವೇಂದ್ರ ರವರು ಆಂಧ್ರ ಪ್ರದೇಶದ ಪೆನುಗೊಂಡ ಮಾರ್ಗವಾಗಿ ಪಾವಗಡ ಕ್ಕೆ ಹೋಗುವ ಸಂದರ್ಭದಲ್ಲಿ ಕೊಡಮಡಗು ಗ್ರಾಮ ಬರುವುದನ್ನು ಗಮನಿಸಿ ರಾಘವೇಂದ್ರ ರವರ ಅಪಟ್ಟ ಅಭಿಮಾನಿ ಆಗಿರುವ ಶಿವಪ್ಪ ಮನೆಗೆ ಬೆಳ್ಳಂ ಬೆಳಗ್ಗೆ ಭೇಟಿ ನೀಡಿದ್ದರು ಶಿವಪ್ಪ ಮಾತನಾಡಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪಾವಗಡ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುತ್ತಿದರೆ ಜೊತೆಗೆ ನಾನು ಒಬ್ಬ ಸಾಮಾನ್ಯ ವ್ಯಕ್ತಿ ನಮ್ಮ ಮನೆಗೆ ಭೇಟಿ ನೀಡಿದ್ದು ರಾಘವೇಂದ್ರ ಸರ್ ಅವರ ಅಭಿಮಾನಿ ಆಗಿರುವುದಕ್ಕೆ ಸಾರ್ಥಕವಾಯಿತ್ತು ಎಂದು ಸಂತೋಷ ಪಟ್ಟರು ಗ್ರಾಮೀಣ ಪ್ರದೇಶದ ಜನರ ಜೀವನದ ಬಗ್ಗೆ ,ರೈತರು ಬೆಳೆ ಬೆಳೆಯುವ ಬೇಳೆಯ ಬಗ್ಗೆ ,ಹಾಗೂ ಗಡಿಭಾಗ ವಾಗಿರುವಿದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಭಾಷೆಯ ಬಗ್ಗೆ ಮತ್ತು ಕುಟುಂಬದ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ಯಲ್ಲಿ ಆಗುತ್ತಿರುವ ಕೆಲಸ ದ ಬಗ್ಗೆ ಮಾಹಿತಿ ಪಡೆದರು ಇನ್ಸ್ಪೆಕ್ಟರ್ ಎಸ್. ಆರ್. ರಾಘವೇಂದ್ರ ಗ್ರಾಮದ ಜನರ ಜೊತೆ ಮಾತನಾಡಿ ಡಿಜಿಟಲ್ ಪಾವಗಡ ಬಹು ದಿನಗಳ ಕನಸ್ಸು ಮತ್ತು ಈ ಯೋಜನೆಯ ಅಂಗವಾಗಿ ಹಲವು ಸರ್ಕಾರಿ ಸೌಲಭ್ಯಗಳು ಪಡೆಯಲು ಅನುಕೂಲಕರ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ್ದರು ಭೇಟಿ ನೀಡಿದ ನೆನಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾ ಕುಮಾರಿ ಶಿವಪ್ಪ ಗೆ ಪುಸ್ತಕ ನೀಡಿ ನಿರ್ಗಮಿಸಿದ್ದರು..
ವರದಿ – ಮಹೇಶ ಶರ್ಮಾ