ಕಕ್ಕೇರಿ ಹಾಗೂ ಪಾರಿಶ್ವಾಡ ಗ್ರಾಮಗಳಲ್ಲಿ ಉಪ ಪೊಲೀಸ್ ಠಾಣೆಗಳನ್ನು ಆರಂಭಿಸುವಂತೆ ಕರ್ನಾಟಕ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ….
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿಗೆ ಆಗಮಿಸಿದ್ದ ಕರ್ನಾಟಕ ಸರ್ಕಾರ ದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರನ್ನು ಪತ್ರಕರ್ತ ಬಸವರಾಜುರವರು ಭೇಟಿಯಾಗಿ ಈ ಕೆಳಗಿನಂತೆ ವಿವರ ಮಾಡಿ “ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಭೌಗೋಳಿಕವಾಗಿ ಅತ್ಯಂತ ದೊಡ್ಡದಾಗಿದ್ದು ಈ ತಾಲ್ಲೂಕಿನಲ್ಲಿ ಕೇವಲ ಎರಡು ಪೊಲೀಸ್ ಠಾಣೆ ಮತ್ತು ಎರಡು ಉಪ ಪೊಲೀಸ್ ಠಾಣೆಗಳು ಇರುತ್ತವೆ, ನಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಗೆ ಯಾವುದೇ ರೀತಿಯ ಉಪ ಪೊಲೀಸ್ ಠಾಣೆ ಇಲ್ಲದ ಕಾರಣ ಜನರಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ, ಇನ್ನೂ ಖಾನಾಪುರ ಪೊಲೀಸ್ ಠಾಣೆಯಿಂದ ದೊಡ್ಡ ಗ್ರಾಮ ಪಾರಿಶ್ವಾಡ ಗ್ರಾಮವು ದೂರವಾಗಿದೆ. ಸಾರ್ವಜನಿಕರ ಮನವಿ ಮೇರೆಗೆ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ರವರು ಕಕ್ಕೇರಿ ಹಾಗೂ ಪಾರಿಶ್ವಾಡ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಉಪ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವಂತೆ ಮನವಿಯನ್ನು ಇಂದು ಸಲ್ಲಿಸಿದರು. *💐🙏ವಂದನೆಗಳು. ಶ್ರೀ ಬಸವರಾಜುರವರು. ಪತ್ರಕರ್ತರು ಹಾಗೂ ಹೋರಾಟಗಾರರು.