ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಒಟ್ಟು 375 ಆಹಾರ ಸಾಮಾಗ್ರಿಗಳ ಕಿಟ್ ಹಾಗೂ ಕಟ್ಟಡ ಕಾರ್ಮಿಕರಿಗೆ 23 ಸುರಕ್ಷತಾ ಕಿಟ್ ಗಳನ್ನು ವಿತರಣೆ…
ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಕೋವಿಡ್ -19 ಪರಿಹಾರಾರ್ಥವಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ನೆರೆ ಸಂತ್ರಸ್ಥರಿಗೆ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಸಹಾಯಕರಿಗೆ, ಅಂಗವಿಕಲರಿಗೆ, ಬೂತ್ ಕಮಿಟಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಒಟ್ಟು 375 ಆಹಾರ ಸಾಮಾಗ್ರಿಗಳ ಕಿಟ್ ಹಾಗೂ ಕಟ್ಟಡ ಕಾರ್ಮಿಕರಿಗೆ 23 ಸುರಕ್ಷತಾ ಕಿಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶ್ರೀ ಬಾಳು ಪಿಸೂತ್ರೆ, ಗ್ರಾ.ಪಂ. ಸದಸ್ಯರಾದ ಶ್ರೀ ಮಿಥುನ ಪಾಟೀಲ, ಶ್ರೀ ರಾಜು ಉಪಾಧ್ಯೆ, ಶ್ರೀಮತಿ ಶಾರದಾ ಕೋಟೆ, ಶ್ರೀಮತಿ ಸುಮಿತ್ರಾ ಟೆಲ್ವೇಕರ್, ಶ್ರೀಮತಿ ಅನುರಾಧಾ ಸದಲಗೆ, ಶ್ರೀ ಈರಗೌಡಾ ಪಾಟೀಲ, ಶ್ರೀ ಶಿವಾನಂದ ಗಿಂಡೆ, ಶ್ರೀ ರಾಜು ಪಾಟೀಲ, ಶ್ರೀ ಶ್ರೀಕಾಂತ ಬನ್ನೆ, ಶ್ರೀ ಚನಗೌಡ ಪಾಟೀಲ, ಶ್ರೀ ಸಂಜುಕುಮಾರ ಕಾಂಬಳೆ, ಶ್ರೀ ಬಾಬಾಸಾಬ ಜಾಧವ,ಹಾಗೂ ಸ್ಥಳೀಯ ಮುಖಂಡರು ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ