ವೀರಾರೆಡ್ಡಿ ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ 80 ಕ್ಕೂ ಹೆಚ್ಚು ಮಣ್ಣಿನ ಗಣೇಶ ಮೂರ್ತಿಗಳ ವಿತರಣೆ:-
ಬಾಗೇಪಲ್ಲಿ:- ತಾಲ್ಲೂಕು ವಿಧಾನ ಸಭೆ ಕ್ಷೇತ್ರದ ಸಮಾಜ ಸೇವಕ ಶ್ರೀಯುತ ವೀರಾರೆಡ್ಡಿ ಯವರು ತಮ್ಮ ವೀರಾರೆಡ್ಡಿ ಫೌಂಡೇಷನ್ ವತಿಯಿಂದ ಅವರು ಸಾರ್ವಜನಿಕರಿಗೆ ಗುರುವಾರ 80 ಕ್ಕೂ ಹೆಚ್ಚು ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸಿದರು. ಬಾಗೇಪಲ್ಲಿ ಪಟ್ಟಣದ ನಮ್ಮ ಹೊಂಡಾ ಶೋ ರೂಮ್ ಹಿಂಭಾಗದಲ್ಲಿ ಇರುವ ವೀರಾರೆಡ್ಡಿ ಯವರು ಮನೆ ಆವರಣದಲ್ಲಿ ಪರಿಸರಸ್ನೇಹಿ ಜೇಡಿಮಣ್ಣಿನಿಂದ ತಯಾರಿಸಿದ ಗೌರಿಗಣೇಶ ಮೂರ್ತಿಗಳನ್ನು ವಿತರಿಸಲಾಯಿತು. ತದನಂತರ ಮಾತನಾಡಿ‘ನಗರದಲ್ಲಿ ಎಲ್ಲರೂ ಪರಿಸರಸ್ನೇಹಿ ಹಬ್ಬ ಆಚರಿಸಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ. ಅದಕ್ಕಾಗಿ ಪರಿಸರಸ್ನೇಹಿ ಮೂರ್ತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ’ ಎಂದು ವೀರಾರೆಡ್ಡಿ ಫೌಂಡೇಷನ್ ಅದ್ಯಕ್ಷ ವೀರಾರೆಡ್ಡಿ ಹೇಳಿದರು. ‘ಪಿಒಪಿ ಗಣೇಶ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಿದಾಗ ಅವು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೆ, ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸುಲಭವಾಗಿ ಕರಗುವುದಲ್ಲದೆ, ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ’ ಆದ್ದರಿಂದ ಸಾರ್ವಜನಿಕರು ಬಾಗೇಪಲ್ಲಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಅನುಮತಿಯನ್ನು ಪಡೆದು ಹಾಗೂ ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ ಗಣೇಶ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೀರಾರೆಡ್ಡಿ ಫೌಂಡೇಷನ್ ವ್ಯವಸ್ಥಾಪಕ ರವಿಕುಮಾರ್, ಅಧ್ಯಕ್ಷ ಆನಂದ್.ಎನ್,ದಿನೇಶ್ ರೆಡ್ಡಿ, ಶಶಿಕಲಾ, ಆದಿನಾರಾಯಣ ವೆಂಕಟೇಶ್, ರಮೇಶ್ ಬಾಬು, ಜಗದೀಶ್,ಮಹೇಶ್, ಶ್ರೀನಿವಾಸ್. ಎ.ಮಂಜುಳಾ, ರಾಧಮ್ಮ, ನಯಾರಭಾನು,ಇನಾಯಿತ್ತುಲ್ಲಾ, ಹಾಗೂ ವೀರಾರೆಡ್ಡಿ ಫೌಂಡೇಷನ್ ಕಾರ್ಯಕರ್ತರು ಹಾಜರಿದ್ದರು. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
“ಮಾಹಿತಿ ಹಕ್ಕು ದರ್ಬಾರ್ ” ಮನೆಯಿಂದ ರಾಜನ ಮಹಾರಾಜರ ರಾಜ್ಯಭಾರ…. ಪುಸ್ತಕ ಮುಂಗಡ ಕಾಯ್ದಿರಿಸಿ ವಿನಾಯಿತಿ ಪಡೆಯುವ ಅವಕಾಶ………..
ಇದನ್ನು ನಿಮ್ಮ ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ಶೇರ್ ಮಾಡಿ., 1300 ರೂಪಾಯಿ Pay Tm ಅಥವಾ Google Pay 9448962082 ಗೆ ಕಳಿಸಿ
ನಿಮ್ಮ ಹೆಸರು, ಖಾಯಂ ವಿಳಾಸ ಹಾಗೂ ಮೋಬೈಲ್ ಸಂಖ್ಯೆ ಕಡ್ಡಾಯವಾಗಿ ಹಣ ಕಳಿಸಿದ snapshot ವಾಟ್ಸಪ್ ಮೂಲಕ 9448962082 ಗೇ ಕಳಿಸಿರಿ.
ಕಳಿಸುವ ವ್ಯವಸ್ಥೆ ಮಾಡುವೆ ಸರ್