ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನಕ್ಕೆ 5 ಕೋಟಿ ಬಿಡುಗಡೆ ಮಾಡಲು ಮನವಿ…
ಬೀದರ್ : ಬೀದರ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನಕ್ಕೆ 5 ಕೋಟಿ ರೂಗಳು ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ರವರಿಗೆ ಜಿಲ್ಲಾ ಜಾನಪದ ಪರಿಷತ್ತಿನ ಕಾರ್ಯದರ್ಶಿ, ಸಂಘಟಕರಾದ ರಾಜಕುಮಾರ ಹೆಬ್ಬಾಳೆಯವರು ಮನವಿ ಮಾಡಿದರು. ಹೈದರಾಬಾದ್ ನಿಂದ ಗುಲ್ಬರ್ಗ ಜಿಲ್ಲೆಗೆ ಆಗಮಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ವಿ ಸುನಿಲಕುಮಾರ್ ರವರಿಗೆ ಬೀದರ್ ಜಿಲ್ಲೆಯ ಭಂಗೂರ್ ಗಡಿ ಹತ್ತಿರ ಕರ್ನಾಟಕ ಜಾನಪದ ಪರಿಷತ್ತು ಪರವಾಗಿ ಸ್ವಾಗತಿಸಿ, ಮುಂಬರುವ ದಿನಗಳಲ್ಲಿ ಬೀದರ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಅಂತರಾಷ್ಟ್ರೀಯ ಜಾನಪದ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ 5 ಕೋಟಿ ಧನಸಹಾಯ ಮಂಜೂರು ಮಾಡಬೇಕು ಮತ್ತು ಮಾಡುವ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವುಗಳು ಪ್ರೋತ್ಸಾಹ ನೀಡಬೇಕೆಂದರು. ಅಲ್ಲದೇ ಬೀದರ ಜಿಲ್ಲೆ ಗಡಿ ರಾಜ್ಯ ತೆಲಾಂಗಣದ ಜಹೀರಾಬಾದ ಹತ್ತಿರದ ಗಡಿಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಈ ವಿಚಾರ ಈಗಾಗಲೇ ಕೇಂದ್ರ ಸಂಸ್ಕೃತಿ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಅದೇ ರೀತಿ ಈ ಯೋಜನೆಗೂ ಸಹ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಎಲ್ಲಾ ರೀತಿಯ ನೆರವು ಹಾಗೂ ಸಹಕಾರ ನೀಡುವ ಮೂಲಕ ಸಂಸ್ಕೃತಿ ಭವನ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ವಿನಂತಿಸಿಕೊಂಡು ಸಚಿವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಕುಮಾರ ಮಡಕಿ, ಬಸವರಾಜ ಹೆಗ್ಗೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ್ ಕನ್ನಾಳೆ, ಚನ್ನಬಸವ ಕಾಮಣ್ಣ ಸೇರಿದಂತೆ ಕರ್ನಾಟಕ ಜಾನಪದ ಪರಿಷತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಎನ್ ಜವಾದಿ.