ಬೆಂಗಳೂರು: ಕರ್ನಾಟಕದಲ್ಲಿ ಕಳುವಾದ ಮೊಬೈಲ್‌ಗಳಿಗೆ ತೆಲಂಗಾಣದಲ್ಲಿ ಭಾರಿ ಬೇಡಿಕೆಯಂತೆ. ಕಾರಣ ಬಹಳ ಕುತೂಹಲಕಾರಿಯಾಗಿದೆ. ಮೊಬೈಲ್‌ಗಳನ್ನು ಕಳ್ಳತನ ಮಾಡಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಅಚ್ಚರಿದಾಯಕ ಮಾಹಿತಿಯೊಂದು ಲಭ್ಯವಾಗಿದೆ. ಕರ್ನಾಟಕದಲ್ಲಿ ಕಳುವಾದ ಬಹುಪಾಲು ಮೊಬೈಲ್‌ಗಳನ್ನು ತೆಲಂಗಾಣಕ್ಕೆ ರವಾನಿಸಲಾಗುತ್ತದೆಯಂತೆ. ಅಲ್ಲಿ 2 ಸಾವಿರ ರೂ. ಹೆಚ್ಚಿನ ಲಾಭ ಸಿಗುತ್ತದೆಯಂತೆ. ಮೊಬೈಲ್‌ಗೆ ನಮ್ಮಲ್ಲಿ 2 ಸಾವಿರ ರೂ. ಇದ್ದರೆ, ಅಲ್ಲಿ 4 ಸಾವಿರ ರೂ. ಸಿಗುತ್ತದೆಯಂತೆ. ಅಷ್ಟೇ ಅಲ್ಲ, ಕಳುವಾದ ಮೊಬೈಲ್‌ಗಳು ತೆಲಂಗಾಣದಿಂದ ಅಸ್ಸಾಂಗೆ ರವಾನೆಯಾಗುತ್ತದೆ. ಅಲ್ಲಿ ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ. ಕಳುವಾದ ಮೊಬೈಲ್‌ನ ಐಡಿಂಟಿಫಿಕೇಷನ್ IMEI ನಂಬರ್ ಮೂಲಕ ಟ್ರ್ಯಾಕ್ ಮಾಡಬಹುದು. ಆದರೆ, ಅಸ್ಸಾಂಗೆ ತಲುಪುವ ಮೊಬೈಲ್‌ಗಳನ್ನು ಟ್ರ್ಯಾಕ್ ಮಾಡುವುದು ಕಷ್ಟ. ಟವರ್ ಲೊಕೇಷನ್ ಕೂಡ ಸಿಗುವುದಿಲ್ಲ. ಹೀಗಾಗಿ, ಕಳುವು ಮಾಡಿದ ಮೊಬೈಲ್‌ಗಳನ್ನು ತೆಲಂಗಾಣದ ಮೂಲಕ ಅಸ್ಸಾಂಗೆ ಸೇಫ್ ಆಗಿ ಕಳ್ಳರು ಸಾಗಿಸುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಸಂಪಾದಕೀಯ