ಶೃತಿ ಕಿವಡಿಗೆ ಅಂತರ್ ರಾಜ್ಯ ಪ್ರಶಸ್ತಿ……….
ನ್ಯಾಷನಲ್ ರೂರಲ್ ಡೆವಲಪ್ಮೆಂಟ್ ಫೌಂಡೇಶನ್ ಮತ್ತು ನೇಚರ್ ಡೆವಲಪ್ಮೆಂಟ್ ಸೊಸೈಟಿ ಬೆಳಗಾವಿ ಇವರ ವತಿಯಿಂದ ಅಥಣಿ ಪಟ್ಟಣದ ಶೃತಿ ಜಗದೀಶ್ ಕಿವಡಿ ಅವರಿಗೆ ಅಂತರ್ ರಾಜ್ಯ ಮಟ್ಟದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು. ಮಹಿಳಾ ಸಬಲೀಕರಣಕ್ಕಾಗಿ ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಸೇರಿದಂತೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಕಡಿಮೆ ದರದಲ್ಲಿ ತರಬೇತಿ ಮತ್ತು ಶಿಕ್ಷಣ ನೀಡುತ್ತಿರುವ ಶೃತಿ ಜಗದೀಶ ಕಿವಡಿ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶೃತಿ ಕಿವಡಿ ತಮಗೆ ಒಲಿದು ಬಂದಿರುವ ಪ್ರಶಸ್ತಿಯು ಮತ್ತಷ್ಟು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿದ್ದು ಯುವತಿಯರು ಮತ್ತು ಮಹಿಳೆಯರು ಉನ್ನತ ಶಿಕ್ಷಣದಿಂದ ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ ಗ್ರಾಮೀಣ ಪ್ರದೇಶಗಳಲ್ಲಿ ಹತ್ತನೆ ತರಗತಿ ಹನ್ನೆರಡನೆಯ ತರಗತಿಗೆ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಪದ್ದತಿ ಇಂದಿಗೂ ಮುಂದುವರೆದಿದ್ದು ಜಾಗತೀಕರಣವಾಗುತ್ತಿರುವ ಈ ದಿನಗಳಲ್ಲಿ ಕೌಶಲ್ಯ ಆಧಾರಿತ ತರಬೇತಿ ಮತ್ತು ಕುಶಲ ಕಲೆಗಳು ಉತ್ತಮ ಬದುಕು ರೂಪಿಸಲು ಸಹಕಾರಿ ಆಗಿರುವದನ್ನು ಅರಿತು ಸಣ್ಣ ಪ್ರಮಾಣದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ನನ್ನನ್ನು ಗುರುತಿಸಿ ಸನ್ಮಾನಿಸಿದ್ದಾರೆ.ಇದರಿಂದ ನನ್ನ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಿದ್ದು ಮುಂದೆ ಇಡುವ ಹೆಜ್ಜೆಗಳಿಗೆ ಬಲ ಬಂದಂತಾಗಿದೆ ಎಂದರು. ಈ ವೇಳೆ ಮಾಜಿ ಕೇಂದ್ರೀಯ ಮಂತ್ರಿ ರತ್ನಮಾಲಾ ಸವಣೂರು,ಮಾಜಿ ಸಂಸದರಾದ ಅಮರಸಿಂಹ ಪಾಟೀಲ, ಜಿಲ್ಲಾ ವರಿಷ್ಠ ಅಧಿಕಾರಿ ಎಸ್ ಪಿ ಮಹೇಶ್ ಮೇಘನ್ನವರ,ಸೇರಿದಂತೆ ಹಲವರು ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ವರದಿ – ಮಹೇಶ ಶರ್ಮಾ