ಬದಲಾವಣೆ ಬೇಕಿದೆ ?

Spread the love

ಬದಲಾವಣೆ ಬೇಕಿದೆ ?

ನಾವು ಬದಲಾವಣೆ ಆಗಲೇ ಇಲ್ಲ ?

ಜಾತಿ ಕೇಳಿ ಕೈಗಳಿಗೆ ನೀರು ಹಣಿಸುತ್ತಿದ್ದೇವೆ

ಧರ್ಮ ಕೇಳಿ ಹೊಟ್ಟೆಗೆ ಅನ್ನ ನೀಡುತ್ತಿದ್ದೇವೆ

ನಾವು ಬದಲಾವಣೆ ಆಗಲೇ ಇಲ್ಲ?

ಹೆಣ್ಣು ಮಕ್ಕಳನ್ನು ಕಾಮದಿಂದ ನೋಡತ್ತಿದ್ದೇವೆ

ಪರ ಸ್ತ್ರೀಯರನ್ನು ಬಿಡದೆ ಮೋಹಿಸುತ್ತಿದ್ದೇವೆ

 

ನಾವು ಬದಲಾವಣೆ ಆಗಲೇ ಇಲ್ಲ ?

ಶ್ರಮವಹಿಸದೆ ಸಂಪಾದನೆಯನ್ನು ಮಾಡುತ್ತಿದ್ದೇವೆ

ಅನ್ಯರಿಗೆ ಮೋಸ ವಂಚನೆ ಮಾಡಿ ಬದುಕುತ್ತಿದ್ದೇವೆ

ನಾವು ಬದಲಾವಣೆ ಆಗಲೇ ಇಲ್ಲ ?

ಕಲಿತ ಜ್ಞಾನದಿಂದ ಸಮಾಜ ಸುಧಾರಣೆ ಮಾಡಲಿಲ್ಲ

ವಿದ್ಯಾವಂತರಾಗಿ ಅಜ್ಞಾನಿಗಳಂತೆ ವರ್ತಿಸುತ್ತಿದ್ದೇವೆ

ನಾವು ಬದಲಾವಣೆ ಆಗಲೇ ಇಲ್ಲ ?

ಹೆಣ್ಣಿನ ಮೇಲೆಯೇ ಅತ್ಯಾಚಾರ ಮಾಡುತ್ತಿದ್ದೇವೆ

ಅಧಿಕಾರದ ಬಲದಿಂದ ಭ್ರಷ್ಟಾಚಾರ ಮಾಡುತ್ತಿದ್ದೇವೆ

 

ನಾವು ಬದಲಾವಣೆ ಆಗಲೇ ಇಲ್ಲ?

ಹೆತ್ತವರನ್ನು ನಡು ಬೀದಿಯಲ್ಲಿ ತಂದು ಬಿಟ್ಟಿದ್ದೇವೆ

ಮನೆ ಗೋಡೆಗೆ ಹೆತ್ತವರ ನೆರಳೆಂದು ಬರೆಸಿದ್ದೇವೆ

ನಾವು ಬದಲಾವಣೆ ಆಗಲೇ ಇಲ್ಲ ?

ರಾಜಕಾರಣದಿಂದ ಕೋಟಿ ಕೋಟಿ ಗಳಿಸಿಕೊಂಡಿದ್ದೇವೆ

ನಂಬಿದ ಜನರಿಗೆ ಬರೀ ಸುಳ್ಳು ಆಶ್ವಾಸನೆ ಕೊಟ್ಟಿದ್ದೇವೆ

ನಾವು ಬದಲಾವಣೆ ಆಗಲೇ ಇಲ್ಲ ?

ನಾನು ಮೇಲು ಕೀಳೆಂದು ಜಾತಿ ಜಗಳ ಮಾಡುತ್ತಿದ್ದೇವೆ

ಕಲಹದಿಂದ ಊರನ್ನೇ ಸುಟ್ಟು ಸ್ಮಶಾನ ಮಾಡಿದ್ದೇವೆ

 

ನಾವು ಬದಲಾವಣೆ ಆಗಲೇ ಇಲ್ಲ?

ನಡೆ.ನುಡಿ.ನಿಷ್ಠೆ.ನಿಯತ್ತು.ಮರೆತು ನಡೆಯುತ್ತಿದ್ದೇವೆ

ಮನುಷ್ಯತ್ವ ಮೀರಿ ರಾಕ್ಷಸರಂತೆ ವರ್ತಿಸುತ್ತಿದ್ದೇವೆ

ನಾವು ಇನ್ನಾದರೂ ಬದಲಾವಣೆ ಆಗಬೇಕು

ನಮ್ಮೊಳಗಿನ ಕೆಟ್ಟ ಗುಣಗಳನ್ನು ಸುಟ್ಟುಕೊಂಡು

ಬೆಳಿಸಿಕೊಳ್ಳಬೇಕು ನಮ್ಮಲ್ಲಿ ಒಳ್ಳೆಯ ಗುಣಗಳನ್ನು

ರಚನೆ   ಮಹಾಂತೇಶ ಬೇರಗಣ್ಣವರ

Leave a Reply

Your email address will not be published. Required fields are marked *