ತಾವರಗೇರಾ ಪಟ್ಟಣದ ಜೀವ ಜಲ ಎಂದು ಹೆಸರು ವಾಸಿಯಾಗಿರುವ ರಾಯನ ಕೆರೆಯ ನೀರು ಅಧಿಕಾರಿಗಳು ಬೇಜವಾಬ್ದಾರಿತನದಿಂದ ಪೋಲು ಆಗಿ ಚರಂಡಿ ಪಾಲುಗುತ್ತಿದೆ..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ರಾಯನ ಕೆರೆಯ ಅಭಿವೃದ್ಧಿ ಗೊಸ್ಕರ ತಾವರಗೇರಾ ಪಟ್ಟಣದ ಎಲ್ಲ ಸಂಘಟನೆಗಳು ಹಾಗೂ ಅಂದಿನ ಪಿ ಎಸ್ ಮಹಾಂತೇಶ್ ಸಜ್ಜನ ಹಾಗೂ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದ ತಾವರಗೇರಾ ಪಟ್ಟಣದ ಸರ್ವ ಜನರು ಪಣ ತೊಟ್ಟು ನಮ್ಮ ನಡೆ ಕೆರೆಯ ಅಭಿವೃದ್ಧಿ ಕಡೆ ಎಂದು ಅಂದಿನ ದಿನ ಕೆರೆಯ ಹೂಳು ತೆಗಿಸಿರುವದು ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಆ ನಿಟ್ಟಿನಲ್ಲಿ ಸಾಗಿಬಂದ ತಾವರಗೇರಾ ರಾಯನ ಕೆರೆ ಇಂದು ಕೆರೆಯ ನೀರು ಪೊಲು ಆಗಿ ಚರಂಡಿ ಮೂಲಕ ಹರಿಯುತ್ತಿರುವ ದೃಶ್ಯ ನೋಡಿದರೆ ಸಂಭಂದ ಪಟ್ಟ ಅಧಿಕಾರಿಗಳ. ಬೇಜವಾಬ್ದಾರಿತನವೆ ಕಾರಣ ಮಳೆಗಾಲಗಳು ಮುಗಿಯುತ್ತಾ ಬರುತ್ತಿವೆ ನೀರನ್ನು ಇಂದು ನಾವು ಉಳಿಸಿಕೊಳ್ಳದಿದ್ದರೆ ಮುಂದೆ ಬರುವ ಬೆಸಿಗೆ ಕಾಲದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಬರುತ್ತದೆ ಎಂದು ಪಟ್ಟಣದ ಕೆಲ ಸಾರ್ವಜನಿಕರು ಆರೋಪಿಸಿದ್ದಾರೆ .ಹಾಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಬೇಗನೆ ಹೆಚ್ಚೆತ್ತು ಪೋಲು ಆಗುತ್ತಿರುವ ನೀರನ್ನು ತಡೆದು ನೀರನ್ನು ಉಳಿಸಿಬೇಕಾಗಿದೆ ಎಂದು ಪಟ್ಟಣದ ಸಾರ್ವಜನಿಕರು ಅಗ್ರಹಿಸಿದ್ದಾರೆ.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ