ಅನಾಥನನ್ನು  ಆಶ್ರಮಕ್ಕೆ ಒಪ್ಪಿಸಿ ಆಪ್ತ ರಕ್ಷಕರಾದ ಕೂಡ್ಲಿಗಿ ಆರಕ್ಷಕರು-

Spread the love

ಅನಾಥನನ್ನು  ಆಶ್ರಮಕ್ಕೆ ಒಪ್ಪಿಸಿ ಆಪ್ತ ರಕ್ಷಕರಾದ ಕೂಡ್ಲಿಗಿ ಆರಕ್ಷಕರು

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ,ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಅನಾಥನನ್ನು.ಕೂಡ್ಲಿಗಿ ಡಿವೈಎಸ್ಪಿ ಹರೀಶ್ ನಿರ್ಧೇಶನದ ಮೇರೆಗೆ  ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಶರಥ್ ನೇತೃತ್ವದಲ್ಲಿ ಪೊಲೀಸ್ ರು,ಅನಾಥನನ್ನು ಸಂರಕ್ಷಿಸಿ ಸಿಂಧನೂರಿನ ಕರಣಾ ಆಶ್ರಮವನ್ನು ಸಂಪರ್ಕಿಸಿ ಒಪ್ಪಸಿದ್ದಾರೆ.ಪೊಲೀಸರು ನಿಯಮಾನುಸಾರ ತಮಿಳು ನಾಡು ಮೂಲದ ಸುಮಾರು50ವಯಸ್ಸಿನ ಅನಾಥ ವ್ಯಕ್ತಿಯನ್ನು ರಕ್ಷಿಸಿ ಆತನಿಗೆ ಹೊಸ ಉಡುಪುಗಳನ್ನು ನೀಡಿ ಸತ್ಕರಿಸಿ ಮಾನವೀಯತೆ ಮೆರಿದಿದ್ದಾರೆ ಮತ್ತು ಸಿಂಧನೂರಿನ ಕರುಣಾ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ.ಮೂಲಕ ಅನಾಥನನ್ನು ರಕ್ಷಣೆ ಮಾಡಿ ಆಶ್ರಯ ಕಲ್ಪಿಸುವಲ್ಲಿ ಕಾಳಜಿ ವಹಿಸಿ ಅನಾಥನ ಪಾಲಿಗೆ ಆಪ್ತ ರಕ್ಷಕರಾಗಿದ್ದಾರೆ ಪೊಲೀಸರು. ಇತ್ತೀಚೆಗೆ ಅನಾಮಧೇಯ ಶವ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು,ಅನಾಥರಿಗೆ ಅನಾಥಾಶ್ರಮದಲ್ಲಿ ಆಶ್ರಯ ಕಲ್ಪಿಸುವುದರಿಂದಾಗಿ ಪ್ರಕರಣಗಳನ್ನು ತಗ್ಗಿಸಬಹುದಾಗಿದೆ. ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು,ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ತುಂಬ‍ಮುಖ್ಯವಾಗಿದೆ ಎಂದು ಸಿಪಿಐ ವಸಂತ ಅಸೋದೆ ತಿಳಿಸಿದ್ದಾರೆ. ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ,ವಾಲ್ಮೀಕಿ ಮುಖಂಡ  ಹಾಗೂ ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ. ಎಲ್ಲಿಯಾದರೂ  ಯಾರೇ ಅನಾಥರು ಹಾಗೂ ಬುದ್ಧಿಮಾಂಧ್ಯರು  ಕಂಡು ಬಂದಲ್ಲಿ ಅಥವಾ ಅನಾಥ ವೃದ್ಧರು ಕಂಡುಬಂದಲ್ಲಿ,ಶೀಘ್ರವಾಗಿ ಹತ್ತಿರ  ಆಶ್ರಮವನ್ನು ಸಂಪರ್ಕಿಸಬಹುದಾಗಿದೆ.‍ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಿದೆ, ದೂರವಾಣಿ ಮೂಲಕ ಸಂಪರ್ಕಿಸಿ ಮಾತಿನಿ ನೀಡಿ ರಕ್ಷಿಸಬೇಕಿದೆ. ಮೂಲಕ ಹಿರಿಯ ನಾಗರೀಕರನ್ನ ಬುದ್ದಿಮಾಂಧ್ಯರನ್ನು ರಕ್ಷಿಸಬೇಕು,ಹಾಗೂ ಅಪರಾಧ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.ಸಂದರ್ಭದಲ್ಲಿ ಹೋಟೇಲ್ ಮಾಲೀಕ ಬಾಲರಾಜಪ್ಪ,ಮುಖ್ಯ ಪೊಲೀಸ್ ಪೇದೆ ಸತ್ಯಪ್ಪ,ಸಿಂಧನೂರಿನ ಕರುಣಾ ಆಶ್ರಮದ ಸ್ವಯಂ ಸೇವಕ ಪಂಪಯ್ಯಸ್ವಾಮಿ ಸೇರಿದಂತೆ ಆಸ್ರಮದ ಸಿಬ್ಬಂದಿ ಹಾಗೂ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಹಾಗೂ ನಾಗರೀಕರು ಇದ್ದರು.ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *