ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು 12ನೆಯದಿನ….
ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು 12ನೆಯದಿನದ ಹೋರಾಟವನ್ನು ಹೂರ್ತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಾಲಯ ಪಕ್ಕದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಸುಮಾರು 2000ರೈತರೋಂದಿಗೆ ಹೆದ್ದಾರಿ ತಡೆನಡಿಸಿ ಹೋರಾಟದ ತೀವ್ರತೆಯನ್ನು ರೈತರು ವ್ಯಕ್ತಪಡಿಸಿದರು. ಹೋರಾಟವನ್ನು ಉದ್ದೇಶಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಮಾತನಾಡುತ್ತಾ ಇಂದು ನಾವುಗಳು ಸುಮಾರು 12ನೆಯ ದಿನದಿಂದ ಹೋರಾಟ ಮಾಡಿದರು ಇನ್ನು ವರೆಗೆ ಸರ್ಕಾರ ಪ್ರತಿನಿಧಿಗಳು ಬಂದು ಹೋರಾಟಗಾರರ ಬೇಡಿಕೆಗಳು ಆಲಿಸಿಲ, ಮುಂದಿನ ದಿನಗಳಲ್ಲಿ ಸುಮಾರು 10000ರೈತರು ರಕ್ತದಿಂದ ಸರ್ಕಾರಕ್ಕೆ ಪತ್ರವನ್ನು ಬರೆದು ಕಿವುಡ ಹಾಗೂ ಮೂಕ ಸರ್ಕಾರಕ್ಕೆ ಎಚ್ಚರಿಕೆ ನೀಡಲು ನಾವು ನಿರ್ದರಿಸೀದ್ದವೆ. ಮತ್ತೆ ಮುಂದಿನ ದಿನಗಳಲ್ಲಿ ಇಂಡಿ ನಗರದ ವ್ಯಾಪಾರಸ್ಥರು ಹಾಗೂ ನಾಗರೀಕರು ಕೂಡಿ ಸಹಕಾರ ಪಡೆದು ಸಂಪೂರ್ಣ ಇಂಡಿ ನಗರವನ್ನು ಬಂದ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೋಂಡ ಶ್ರೀ ಶೈಲಗೌಡ ಪಾಟೀಲ ಮರೇಪ್ಪ ಗಿರಣಿವಡ್ಡರ ಹಾಗೂ ರೈತ ಸಂಘದ ಗುರುನಾಥ್ ಬಗಲಿ ಮಾತನಾಡಿದರು. ಹೋರಾಟದಲ್ಲಿ ಸಿದ್ದು ಡಂಗಾ ಶ್ರೀಮಂತ ಪೂಜಾರಿ ಶರಣಗೌಡ ಪಾಟೀಲ ಮಹಿಬೂಬ ಬೇವನೂರ ಅರವೀಂದ ಪೂಜಾರಿ, ಭೀಮ ಪೂಜಾರಿ, ಸಂತೋಷ ತಳಕೇರಿ, ಶರಣಪ್ಪ ಡಂಗಿ,ರಾಜು ಚವ್ಹಾಣ, ಬಸವರಾಜ ಕವಡಿ,ಪೀರಪ್ಪ ಹೋಟಗಾರ, ಬಸವರಾಜ ಹಂಜಗಿ,ಜಯರಾಮ ರಾಠೋಡ, ಶ್ರೀ ಶೈಲ ಪಾಯಕರ, ಪ್ರಕಾಶ ಕೋಳಿ,ಎಚ ಎಮ್ ಪೂಜಾರಿ,ಅಮಸಿದ್ದ ಪೂಜಾರಿ, ನಾಗಣ್ಣ ಪೂಜಾರಿ,ಸಂಜು ಅಡವಿ, ಲವಕುಶ ಹೂಗಾರ, ನಾರಾಯಣ ವಾಲಿಕಾರ, ಗೋಪಾಲ ಸುರಪೂರ, ಕುಮಾರ್ ಸುರ್ಗಹಳ್ಳಿ,ಎಲ್ಲಗೋಂಡ ಪೂಜಾರಿ, ಬಸವರಾಜ ಭಾವಿಕಟ್ಟಿ, ಸೂರ್ಯಕಾಂತ ಪೂಜಾರಿ,ಚನ್ನಯ್ಯ ಹಿರೇಮಠ, ಶ್ರೀಶೈಲಗೌಡ ಬಿರಾದಾರ,ಮಲ್ಲು ಬಗಲಿ,ಪರಸು ಉಕ್ಕಲಿ,ರಾಜು ಮುಲ್ಲಾ,ಶಿವು ಹಿರೇಕುರಬರ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ – ಮಹೇಶ ಶರ್ಮಾ