ಬಳ್ಳಾರಿಯ ವಿವಿಯಲ್ಲಿ ಗೊಲ್ಡ ಮೆಡಲ್ ಪಡೆದ ಕುಮಾರಿ ಶರಣಮ್ಮ ಮರಳಿ ಸಾಧಕಿ ಗೆ ಸನ್ಮಾನದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಜರುಗಿತು…..
ಗಂಗಾವತಿ ತಾಲೂಕಿನ ಶ್ರೀರಾಮನಗರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶ್ರೀಮತಿ ಪಾರ್ವತಮ್ಮ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆ (ರಿ) ತಿಪ್ಪನಾಳ ಇವರ ಸಹಯೋಗದಲ್ಲಿ ಮುರಾರ್ಜಿ, ಆದರ್ಶ ಹಾಗೂ ನವೋದಯ ಉಚಿತ ತರಬೇತಿ ಹಾಗೂ ಬಿ.ಎ ಪದವಿಯಲ್ಲಿ ಬಳ್ಳಾರಿಯ ವಿವಿಯಲ್ಲಿ ಗೊಲ್ಡ ಮೆಡಲ್ ಪಡೆದ ಕುಮಾರಿ ಶರಣಮ್ಮ ಮರಳಿ ಸಾಧಕಿ ಗೆ ಸನ್ಮಾನದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ತಾಲೂಕಿನ ಶ್ರೀಮತಿ ಇಂದಿರಾ ಗಾಂಧೀ ವಸತಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ಬಳಿಕ ಮುರಾರ್ಜಿ ಹಾಗೂ ಆದರ್ಶ , ನವೋದಯ ಪರಿಕ್ಷೆ ತೈಯಾರಿಯಲ್ಲಿರುವ ಮಕ್ಕಳಿಗೆ ಉಚಿತ ತರಬೇತಿಯನ್ನು ಆಯೊಜಿಸಲಾಗಿತ್ತು ತದನಂತರ ಬಿ.ಎ ಪದವಿಯಲ್ಲಿ ಬಳ್ಳಾರಿ ವಿವಿಗೆ ಗೊಲ್ಡ ಮೆಡಲ್ ಪಡೆದು ಕೀರ್ತಿ ತಂದ ಶರಣಮ್ಮ ತಂದೆ ಯಂಕಪ್ಪ ಮರಳಿ ಅವರಿಗೆ ಕ್ಲೀನ್ ಆಂಡ್ ಗ್ರೀನ್ ಪೋರ್ಸ ತಂಡ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ದಿಂದ ಸನ್ಮಾನಿಸಲಾಯಿತು. ಈ ವೇಳೆ ಬಿ ಮಲ್ಲಿಕಾರ್ಜುನ ಗೌಡ ಪಾಟೀಲ್ ತರಬೇತಿದಾರರು, ಶ್ರೀ ಮಹ್ಮದ್ ರಫೀ ತಾಲೂಕ ಪಂಚಾಯತಿ ಅಧ್ಯಕ್ಷರು,ಶ್ರೀಮತಿ ರೇಣುಕಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು, ಶರಣಪ್ಪ ಮುಖ್ಯ ಶಿಕ್ಷಕರು ಐ ಜಿ ಆರ್ ಎಸ್, ಕುಮಾರಿ ಶರಣಮ್ಮ ಗೋಲ್ಡ್ ಮೆಡಲಿಸ್ಟ್ ಮರಳಿ, ಶ್ರೀ ಶಂಭುಲಿಂಗಯ್ಯ ಸ್ವಾಮಿ ಸಹ ಶಿಕ್ಷಕರು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಸುಮಂಗಲ ಬಿ ಸಿಂಪಿ , ಶ್ರೀ ವಿರೇಶ ಮ್ಯಾಗೇರಿ,ಶ್ರೀ ಮಂಜುನಾಥ ಹೊಸ್ಕೆರಿ , ಶ್ರೀ ಉಮೇಶ , ಹಸಿರು ಬಳಗದ ಸದಸ್ಯರು ರಫೀ ಜಾಗಿರದಾರ್, ಶರಣಪ್ಪ ಸಹ ಶಿಕ್ಷಕರು ಸಿದ್ದಾಪುರ , ಜಗದೀಶ್ ಮುಸ್ಟೂರ್, ಅಂಬಣ್ಣ ಪೂಜಾರ್, ಹನು ಭಾವಿ, ರಘು ರಾಠೋಡ ಹಾಗೂ ಹಸಿರು ಬಳಗ ಶ್ರೀರಾಮನಗರ , ಸಿದ್ದಾಪೂರ , ಡಣಾಪೂರ, ಮೂಷ್ಟೂರ , ಮರಳಿ ಸದಸ್ಯರು , ಶಾಲಾ ಐ ಜಿ ಆರ್ ಎಸ್ ಶಾಲೆಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಭಾಗಿಯಾಗಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ