ಶಾಸಕರ ಗಮನಕ್ಕೆ ತರದೇ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ; ಗ್ರಾಮಸ್ಥರ ವಿರೋಧ ವರದಿಗೆ ಎಚ್ಚತ್ತ ಅಧಿಕಾರಿಗಳು. ಅರ್ಧಕ್ಕೆ ನಿಂತ ಕಾಮಗಾರಿ….
ಹಟ್ಟಿ ಚಿನ್ನದ ಗಣಿ : ಲಿಂಗಸಗೂರು ತಾಲೂಕಿನ ಕೊಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಿನಾಪೂರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಜಲ ಜೀವನ್ ಮಶೀನ್ (JJM) ಅಡಿಯಲ್ಲಿ ಕಾಮಗಾರಿ ತರಾತುರಿಯಲ್ಲಿ ಆರಂಭಿಸಿರುವ ಗುತ್ತೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಶಾಸಕರು ಕಾರ್ಯಕ್ಕೆ ಚಾಲನೆ ನೀಡುವ ವರೆಗೂ ಕೆಲಸ ನಿಲ್ಲಿಸಬೇಕು, ಎಂದು ತಾಕೀತು ಮಾಡಿದರು ಶಾಸಕರ ಮಾತಿಗೆ ಕಿವಗೊಡದೆ ಗುತ್ತಿಗೆದಾರರು ಕಾಮಗಾರಿಯನ್ನು ಪ್ರಾರಂಭಿಸಿದ್ದು ಸಂಬಂಧಿಸಿದ ಇಲಾಖೆಯ ಕಿರಿಯ ಅಭಿಯಂತರರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಶಾಸಕರ ಮಾತಿಗೆ ಕಿವಿಗೊಡದೆ ಕಾಮಗಾರಿ ನಡೆಸಿದ್ದು ಇಲ್ಲಿ ಅಧಿಕಾರಿಗಳ ಶಾಮೀಲು ಎದ್ದುಕಾಣುತ್ತದೆ ಎಂದು ತಾಲ್ಲೂಕ ಪಂಚಾಯ್ತಿ ಮಾಜಿ ಅಧ್ಯಕ್ಷ ಗುಂಡಪ್ಪ ಸಾಹುಕಾರ ಮೆದಿನಾಪೂರ ಆರೋಪಿಸಿದರು. ಇದೆ ಸಂಧರ್ಭದಲ್ಲಿ ಮಾತನಾಡಿದ ಅವರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಪೈಪ್ ಲೈನ್ ಅವೈಜ್ಞಾನಿಕವಾಗಿದೆ ಯಾವುದೇ ಮುಂದಾಲೋಚನೆ ಇಲ್ಲದೆ ತಗ್ಗು ದಿನ್ನೆ ಪ್ರದೇಶ ಲೆಕ್ಕಿಸದೆ ಒಂದು ಅಡಿ ಮತ್ತು ಒಂದೂವರೆ ಅಡಿ ಮಾತ್ರ ಆಳಕ್ಕೆ ಅಗೆದು ಪೈಪ್ ಹಾಕುತ್ತಿದ್ದು ಗ್ರಾಮದಲ್ಲಿ ಸಿಸಿ ರಸ್ತೆ ಸಂಪೂರ್ಣ ಹಾಳಾಗಿದ್ದು ಇದೆಲ್ಲವನ್ನೂ ಸರಿಪಡಿಸಿ ಕೊಡಬೇಕು ಎಂದು ಹೇಳಿದರು. ಗ್ರಾಮ ಪಂಚಾಯತಿ ಸದಸ್ಯರು ಒಕ್ಕೊರಲಿನಿಂದ ಕಾಮಗಾರಿ ವರ್ಕ್ ಆರ್ಡರ್ ಇಲ್ಲದೇ ಕೆಲಸ ಆರಂಭಿಸಿದ್ದು, ಸರಕಾರಕ್ಕೆ ವಂತಿಗೆ ತುಂಬದೆ ಕಾಮಗಾರಿ ಹೇಗೆ ಪ್ರಾರಂಭ ಮಾಡಿದರು,? ಗ್ರಾಮ ಪಂಚಾಯಿತಿ ಅಧ್ಯಕ್ಷರೀಗೆ ತಿಳಿಸದೆ ,ಗ್ರಾಮದ ಚುನಾಯಿತ ಸದಸ್ಯರ ಗಮನಕ್ಕೂ ತರದೆ ಏಕಾ ಏಕಿ ಕೆಲಸ ಪ್ರಾರಂಭ ಮಾಡಿದ್ದು, ಇಲ್ಲಿನ ಕಾಮಗಾರಿ ಸಮರ್ಣ ಕಳಪೆ ಆಗಿದ್ದು, ಅವೈಜ್ಞಾನಿಕ ವಾಗಿದ್ದು ಕೂಡಲೇ ಕೆಲಸ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಗುಂಡಪ್ಪ ಸಾಹುಕಾರ ಮೆದಿನಾಪುರ, ಶಿವಲಿಂಗಯ್ಯ ಸ್ವಾಮಿ, ಹನುಮಯ್ಯ ಲಿಂಗಸಗೂರು , ಬಸನಗೌಡ ಪೊಲೀಸ್ ಪಾಟೀಲ್, ಸಿದ್ದರಾಮೇಶ, ಈರಪ್ಪ,ನಾಗಪ್ಪ,ಗದ್ದೆಪ್ಪ ಹಿರೇಮನಿ , ಶರಣಪ್ಪ ಉಪ್ಪಾರ, ಸೇರಿದಂತೆ ಅನೇಕ ಗ್ರಾಮದ ಯುವಕರು ಸುದ್ದಿಗಾರರೊಂದಿಗೆ ಗ್ರಾಮದ ಸಮಸ್ಯೆ ಕುರಿತು ಹಂಚಿಕೊಂಡರು.
ವರದಿ – ಸಂಪಾದಕೀಯ