ಸೃಷ್ಟಿಕರ್ತನೇ…..ನನ್ನ ಹೆಣ್ತನ ನನ್ನ ಜೀವಕೇ ಮೂಲವಾದರೆ, ಆ ಅಂಗಗಳನ್ನೊಮ್ಮೆ ಇಂಗಿಸಿಬಿಡು….

Spread the love

ಯಾರೋ ಬರೆದ ಸಾಲುಗಳು..

ಸೃಷ್ಟಿಕರ್ತನೇ…..

ಮುಂದೊಂದು ದಿನ  ನನ್ನನ್ನು ಹೆಣ್ಣಾಗಿಯೇ

ಹುಟ್ಟಿಸುವಂತಿದ್ದರೆ..

ಕಾಮುಕರ ಕಾಮ ಪ್ರಚೋದಿಸುವ

ಆ ಅಂಗಾಂಗಳನ್ನೊಮ್ಮೆ ಇಂಗಿಸಿಬಿಡು..

 

ಕಂದನಿಗೆ ಹಾಲುಣಿಸುವ

ನನ್ನ ಮೊಲೆಕಳಶಗಳು ಅವನ ಗಂಡಸ್ತನವನ್ನ

ಕೆಣಕುತ್ತಿವೆಯಂತೆ..

ಆ ಅಂಗಾಂಗಳನ್ನೊಮ್ಮೆ ಇಂಗಿಸಿಬಿಡು..

 

ಜೀವವೊಂದಕ್ಕೆ ಜನ್ಮನೀಡುವ ಪವಿತ್ರ ಯೋನಿದ್ವಾರ

ಅವನ ಪುರುಷತನವನ್ನು ಉದ್ರೇಕಿಸುತಿವೆಯಂತೆ

ಆ ಅಂಗಾಂಗಳವನ್ನೊಮ್ಮೆ ಇಂಗಿಸಿಬಿಡು..

 

ನನಗಿಲ್ಲವೇ ಅವನಂತೆ ಸ್ಚಚ್ಛಂದವಾಗಿ

ಸರಿಹೊತ್ತಿನಲ್ಲಿ ಸಂಚರಿಸುವ ಬಯಕೆ..??

ಅದಕೆ ತೊಡಕಾಗಿರುವ

ಈ ಅಂಗಾಂಗಳನ್ನೊಮ್ಮೆ ಇಂಗಿಸಿಬಿಡು..

 

ನನಗಿಲ್ಲವೆ ಅವನಂತೆ ಕಲಿತು

ಬುದ್ಧಿವಂತಳಾಗುವ  ಬಯಕೆ..??

ಅದಕೆ ತೊಡಕಾಗಿರುವ

ಈ ಅಂಗಾಂಗಳನ್ನೊಮ್ಮೆ ಇಂಗಿಸಿಬಿಡು..

 

ನನಗಿಲ್ಲವೆ ಅವನಂತೆ ಪ್ರಕೃತಿಯ ಮಡಿಲಲ್ಲಿ

ಸುಳಿವ ತಂಗಾಳಿಗೆ ಮೈಯೊಡ್ಡಿ..

ಹರಿವ ಜಲಧಾರೆ,ನೀಲಾಕಾಶ..ಹಸಿರು ಕಾನನ ಹೀಗೆ

ನಿಸರ್ಗದ ವಿಸ್ಮಯಗಳನ್ನು ಕಣ್ತುಂಬಿ ಹಗುರಾಗುವ ಬಯಕೆ..??

ಅದಕೆ ತೊಡಗಾಗಿರುವ

ಈ ಅಂಗಾಂಗಳನ್ನೊಮ್ಮೆ ಇಂಗಿಸಿಬಿಡು..

 

ಇವನಿಗಿಂದು ನೈತಿಕತೆಯ ಗೊಡವೆಯಿಲ್ಲ..

ಹೆಣ್ತನವನು ಗೌರವಿಸುವ ಇರಾದೆಯಿಲ್ಲ..

ಅವನಿಗೀಗ ಬೇಕಿರುವುದು ಅವನೊಳಗೆ ಕುದಿಯುವ

ಕಾಮಾಗ್ನಿಯನ್ನು ತಣಿಸಿಕೊಳ್ಳಲು ಒಂದು ಹೆಣ್ಣು ದೇಹ

ಅದಕಾಗಿ ನನ್ನ ಜೀವ ತೆಗೆಯಲೂ ಹೇಸಬಲ್ಲ..

ನನ್ನ ಹೆಣ್ತನ ನನ್ನ ಜೀವಕೇ ಮೂಲವಾದರೆ,

ಆ ಅಂಗಗಳನ್ನೊಮ್ಮೆ ಇಂಗಿಸಿಬಿಡು

ಅವನಿಗಿಲ್ಲದ ಬೇಲಿ ಬಂಧನ

ವ್ಯಾಟ್ಸಾಪ್ ಕೃಫೆ

Leave a Reply

Your email address will not be published. Required fields are marked *