ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಇಂದು ಕೇಂದ್ರ ಸರಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆಯನ್ನು ವಿರೋಧಿಸಿ ಪ್ರತಿಭಟಿಸಲಾಯಿತು .
ಭಾರತ ಒಕ್ಕೂಟ ಸರಕಾರವು ಪ್ರತಿ ವರ್ಷ ಸೆಪ್ಟಂಬರ್ 14ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಣೆ ನಡೆಸುತ್ತಾ ಬಂದಿದೆ. ಅದಕ್ಕಾಗಿ ಹಿಂದಿ ಹೇರಿಕೆಯನ್ನು ಖಂಡಿಸಿ ಪ್ರತಿವರ್ಷ ಪ್ರತಿಭಟಿಸುತ್ತ ಬಂದಿದ್ದು ಅದಕ್ಕಾಗಿ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣ ಗೌಡರ ನೇತೃತ್ವದಲ್ಲಿ ಕಳೆದ 20 ವರ್ಷಗಳಿಂದ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ ಆ ಕಾರಣಕ್ಕಾಗಿ ಹುಣಸಗಿ ತಾಲೂಕು ಘಟಕದ ವತಿಯಿಂದ ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಸೇವೆ ನೀಡಬೇಕು ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸಬೇಕು ಹಾಗೂ ಕರ್ನಾಟಕದವರಿಗೆ ಬ್ಯಾಂಕಿನಲ್ಲಿ ಉದ್ಯೋಗಿಗಳನ್ನು ನೇಮಿ ಸಬೇಕುಹಾಗೂ ಕನ್ನಡ ಬಾರದ ಸಿಬ್ಬಂದಿಗಳನ್ನು ಈ ಕೂಡಲೇ ಅವರನ್ನು ತಮ್ಮ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು, ಕರ್ನಾಟಕದ ಉದ್ಯೋಗಗಳು ಕನ್ನಡಿಗರೆಲ್ಲರಿಗೆ ಲಭಿಸಬೇಕು, ಚಾನಲ್ಗಳು,ಖಾತೆ ಪುಸ್ತಕ,ಚೆಕ್, ಎಲ್ಲಾ ಅರ್ಜಿ ನಮೂನೆಗಳು ಕನ್ನಡದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಅದರಂತೆ ಹಿಂದಿ ದಿವಸ, ಹಿಂದಿ ಸಪ್ತಾಹ ಹಿಂದಿ ಪಕ್ವಾಡ ಇತ್ಯಾದಿ ಭಾಷೆ ಒಕ್ಕೂಟ ವಿರೋಧಿ ಆಚರಣೆಗಳನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ತಾಲೂಕು ಘಟಕದ ವತಿಯಿಂದ ಪ್ರತಿಭಟನೆಯ ಮೂಲಕ ತಾಲೂಕಿನ ಎಸ್ ಬಿ ಐ ಬ್ಯಾಂಕ್, ಕೆನರಾ ಬ್ಯಾಂಕ್, ಕೃಷ್ಣ ಗ್ರಾಮೀಣ ಬ್ಯಾಂಕ್, ಹಾಗೂ ಕರ್ನಾಟಕ ಬ್ಯಾಂಕುಗಳಿಗೆ ಭೇಟಿ ನೀಡಿ ಆಗ್ರಹ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಶಿವಲಿಂಗ ಸಾಹುಕಾರ ಪಟ್ಟಣಶೆಟ್ಟಿ, ಹಾಗೂ ಗೌರವಾಧ್ಯಕ್ಷರಾದ ಭೀಮನಗೌಡ ಪೋಲೀಸ್ ಪಾಟೀಲ್ , ಹಾಗೂ ರೈತ ಘಟಕದ ಅಧ್ಯಕ್ಷರಾದ ಶ್ರೀ ಮೌನೇಶ್ ಸಾಹುಕಾರ ಚಿಂಚೋಳಿ, ಹಾಗೂ ಬಸವರಾಜ್ ಚನ್ನೂರ ತಾಲೂಕು ಪ್ರಧಾನ ಕಾರ್ಯದರ್ಶಿ, ನಗರ ಘಟಕದ ಗೌರವಾಧ್ಯಕ್ಷ ನಂದನ ಗೌಡ ಬಿರಾದರ್, ಹಾಗೂ ಯುವ ಘಟಕದ ತಾಲೂಕು ಅಧ್ಯಕ್ಷರು ರಾಜು ಅವರಾದಿ, ತಾಲೂಕು ಉಪಾಧ್ಯಕ್ಷರಾದ ಸಿದ್ದನಗೌಡ ಎಕ್ತಪೂರ್, ಬಸವರಾಜ ಕಟ್ಟಿಮನಿ ಕಾಮನಟಗಿ ತಾಲೂಕು ಸಂಘಟನಾ ಕಾರ್ಯದರ್ಶಿ, ಸಾಯಬಣ್ಣ ಮಲಗಲದಿನ್ನಿ ತಾಲೂಕು ಸಹ ಸಂಘಟನಾ ಕಾರ್ಯದರ್ಶಿ, ಶರಣು ಅಂಗಡಿ ಗೆದ್ದಲಮರಿ, ಜಂಟಿ ಕಾರ್ಯದರ್ಶಿ ಬಂದೇನವಾಜ್ ಯಾತನೂರ್ ಹುಣಸಗಿ, ಖಜಾಂಚಿ ಸುಭಾನ್ ನಬೂಜಿ ಹುಣಸಗಿ, ನಗರ ಘಟಕದ ಉಪಾಧ್ಯಕ್ಷರು ನಿಂಗಣ್ಣ ಗುತ್ತೇದಾರ್, ಗುರು ಸಂಗಟಿ,ರೈತ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಗುತ್ತೇದಾರ್, ರೈತ ಘಟಕದ ಉಪಾಧ್ಯಕ್ಷರು ಶಿವು ದೇಸಾಯಿ, ನಿಂಗಣ್ಣ ಅಲಾಳ, ಹುಲಗಪ್ಪ ದೊಡ್ಡಮನಿ, ಹಲಗಪ್ಪ ಎಸ್ ಪಾಳೇಗಾರ್ ಕಾಮನಟಗಿ, ನಿಂಗಪ್ಪ ದೇವರಮನೆ, ಕಾಮನಟಗಿ ಗ್ರಾಮ ಘಟಕದ ಅಧ್ಯಕ್ಷರು ಮಲ್ಲು ಮಾಳಿ, ಈರಣ್ಣ ಸಜ್ಜನ್, ಪರಶುರಾಮ್ ದ್ಯಾಪುರ, ಹಗರಟಗಿ ಗ್ರಾಮ ಘಟಕದ ಅಧ್ಯಕ್ಷರು ಸಿದ್ದರಾಮಪ್ಪ ಹನುಮರೆಡ್ಡಿ, ಅಲ್ಲಾಸಾಬ ಚನ್ನೂರ ,ತಿರುಪತಿ ದೊರೆ ಶ್ರೀನಿವಾಸಪುರ, ಪ್ರಸನ್ನಕುಮಾರ್ ಕುಲಕರ್ಣಿ, ಅಸ್ಲಾಂ ತಾಳಿಕೋಟೆ, ಸಿದ್ದನಗೌಡ ಹಳ್ಳಿ,ನಂದಪ್ಪ ದೇವರಮನಿ, ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ