ಈರುಳ್ಳಿ ಬೆಳೆಗಾರರ ಬವಣೆಗೆ ಸ್ಪಂದಿಸದ ಸರ್ಕಾರ, ಈರುಳ್ಳಿ ಬೆಳೆಗಾರರ ಒಕ್ಕೂಟ ರಾಜ್ಯಾಧ್ಯಕ್ಷೆ ಎಂ.ಪಿ.ವೀಣಾಮಹಾಂತೇಶ್.-ವಿಜಯನಗರ ಜಿಲ್ಲೆ ಹರಪನಹಳ್ಳಿ,
ರಾಜ್ಯಾದ್ಯಂತ ರೈತರು ಈರುಳ್ಳಿ ಬೆಳೆದು ಯಾವುದೇ ಬೆಂಬಲ ಬೆಲೆ ಸಿಗದೇ, ನಾನಾ ರೀತಿಯ ರೋಗಾಣುಗಳಿಗೆ ನಶಿಸಿಹೋದ ಬೆಳೆಗೆ ಯಾವುದೇ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಸ್ಪಂದಿಸಬೇಕಾದ ಸರ್ಕಾರ ರೈತರ ಬದುಕಿಗೆ ಆಸರೆಯನ್ನು ಒದಗಿಸುವ ಬದಲು ಕಣ್ಮುಚ್ಚಿ ಕುಳಿತಿದೆ. ಆದಷ್ಟು ಬೇಗನೇ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು. ರೈತರಿಗೆ ಸೂಕ್ತ ಬೆಂಬಲ ಬೆಲೆಯ ಜೊತೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಳೆಗಾರರ ಒಕ್ಕೂಟದಿಂದ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷೆ ಶ್ರೀಮತಿ ಎಂ.ಪಿ.ವೀಣಾಮಹಾಂತೇಶ್ ಸರ್ಕಾರಕ್ಕೆ ಚಾಟಿ ಬೀಸಿದರು. ಹರಪನಹಳ್ಳಿಯ ಈರುಳ್ಳಿ ಬೆಳೆಗಾರ ರೈತರೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡು ಮಾನ್ಯ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಈರುಳ್ಳಿ ಬೆಳೆಗಾರರು ರೈತರಾದ ಸಿದ್ದಲಿಂಗನಗೌಡ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ್,ಜೀತಾ ನಾಯ್ಕ್, ಉಮೇಶ್ ನಾಯ್ಕ ಮಾನಸ ಬಸಯ್ಯ , ಕೃಷ್ಣ ,ದಾದಾಪೀರ ಮಕರಬ್ಬಿ ,ಮಂಜುನಾಥ ಸಿ,ಶ್ರೀಮತಿ ಗಾಯತ್ರಿದೇವಿ,ತಳವಾರ್ ಕಾರ್ತಿಕ್ ,ಗುರು ಬಸವರಾಜ್ , ಅರುಣ್ ಕುಮಾರ್ , ಪ್ರಜ್ವಲ್ ಕುಮಾರ್,ಹರ್ಷಿತ್, ಬಳಗನೂರ್ ಕರೀಂ ಸಾಬ್ ಹುಣಸೆಹಳ್ಳಿ ಸುರೇಶ್ ಸಂತೋಷ್ ಗರ್ಭಗುಡಿ ಕೊಟ್ರೇಶ್ ಬಾಗಳಿ ರಮೇಶ್ ಸಾಸ್ವೆಹಳ್ಳಿ ನಾಗರಾಜ್ ಗಂಗಜ್ಜಿ ಗೌರಿಪುರ ಮದನಪ್ಪ ಚಿರಸ್ಥಹಳ್ಳಿ ಟಿ ಮಲ್ಲಿಕಾರ್ಜುನ್ ಬಸವನಾಳ ಪಿ ಸಂತೋಷ್ ಶ್ರೀಮತಿ ರೂಪ ಶೃಂಗಾರ ತೋಟ ರವಿಚಂದ್ರನ್ ನಿಲವಂಜಿ ಬಸವಲಿಂಗಪ್ಪ, ನಾಗರಾಜ್ ಹಲೋ,ರೈತ ಮುಖಂಡರು ಉಪಸ್ಥಿತರಿದ್ದರು. ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-