ತಾವರಗೇರಾ ಪಟ್ಟಣಕ್ಕೆ ಬಾ.ಜ.ಪ. ದ ಪ್ರಮುಖ ಮುಖಂಡರು ಇಂದು ಆಗಮನ..
ರಾಜ್ಯಕ್ಕೆ ಸವಲಾಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಮೊನ್ನೆತ್ತಾನೆ ಆಗಮೀಸಿದ ಕಾಂಗ್ರೆಸಿನ ಪ್ರಮುಖ ಮುಖಂಡರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸಿನ ಪ್ರಮುಖ ಮುಖಂಡರಾದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷರಾದ ಮಾನ್ಯ ಶ್ರೀ ಡಿ.ಕೆ.ಶಿವಕುಮಾರವರು ಜೊತೆಗೆ ಕೊಪ್ಪಳ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರುಗಳು ಆಗಮಿಸಿದ್ದರು. ಇಂದು ತಾವರಗೇರಾ ಪಟ್ಟಣಕ್ಕೆ ಪ್ರಥಮ ಭಾರಿ ಬಾ.ಜ.ಪ. ದ ಪ್ರಮುಖ ಮುಖಂಡರುಗಳಾದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ ಸಿಂಗ್ ಜಿ, ಹಾಗೂ ರಾಜ್ಯ ಉಪ-ಕಾರ್ಯದರ್ಶಿಗಳಾದ ಸಿ.ಟಿ.ರವಿಯವರು ಜೊತೆಗೆ ಬಿ.ಸಿ.ಪಾಟೀಲ್ ಹಾಗೂ ಬಿ.ವೈ.ವಿಜೇಯೆಂದ್ರರವರು ಮತ್ತು ಕೊಪ್ಪಳ ಜಿಲ್ಲೆಯ ಬಾ.ಜ.ಪ.ದ ಪ್ರಮುಖ ಮುಖಂಡರು ಆಗಮಿಸುತ್ತಿದ್ದು. ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ಸೋಲು / ಗೇಲುವಿನ ಕಾಳಗದಲ್ಲಿ ಜಯಬೇರಿಯಾಗುವ ಇನ್ನೆಲೆಯಲ್ಲಿ ಈ ಮಸ್ಕಿ ಕ್ಷೇತ್ರಕ್ಕೆ ರಾಜ್ಯದ ಪ್ರಮುಖ ನಾಯಕರು ದಿನೆ ದಿನೇ ಬರುತ್ತಿದ್ದು, ಈ ಕ್ಷೇತ್ರದ ಉಪ ಚುನಾವಣೆಯ ಪಲಿತಾಂಶ ಯಾರ ಮಡಲಿಗೆ ಸೇರುವುದು ಎಂಬುವುದು ರಾಜ್ಯಕ್ಕೆ ಉಹಿಸಲಾಗದ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಮಸ್ಕಿ ಕ್ಷೇತ್ರದ ಜನತೆ ಸದ್ಯ ಬಾಗ್ಯವಂತರು (ಕುಡಿದು/ಕುಣಿದು/ಕುಪ್ಪಳಿಸುವ ಅವಕಾಶ ದೋರಕಿದೆ) ಯಾಕೆಂದ್ರೆ ಮೊನ್ನೆತ್ತಾನೆ ಒಬ್ಬ ಯುವಕ ಬಿಜೆಪಿ ಮತ್ತು ಕಾಂಗ್ರೆಸ್ ನ ಕಾರ್ಯಕ್ರಮದಲ್ಲಿ ಕುಡಿದು ಕುಪ್ಪಳಿಸಿದ ವಿಡಿಯೋ ಸದ್ದು ಮೋಬೈಲ್ ನಲ್ಲಿ ವೈರಲ್ಲ್ ಆಗಿದೆ. ಇದರ ಜೊತೆಗೆ ಚುನಾವಣೆಯ ಹೆಸರಿನಲ್ಲಿ ಹಣ ಹಂಚಿ ಪ್ರಜಾ ಪ್ರಭುತ್ವವನ್ನು ಕಗ್ಗೊಲೆ ಮಾಡಿದ ಘಟನೆ ಮಾಸುವ ಮುನ್ನವೆ, ಮತ್ತೆ ಮತ್ತೆ ರಾಜಕೀಯದ ಪ್ರಭಾರಿ ನಾಯಕರು ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಸ್ಥಳಿಯ ಕಾಂಗ್ರೆಸಿನ ಹಾಗೂ ಬಿಜೆಪಿಯ ನಾಯಕರಗಳಿಂದ ಮಸ್ಕಿ ಕ್ಷೇತ್ರದ ಜನತೆಗೆ ಹಬ್ಬವೆ ಹಬ್ಬವಾಗಿದ್ದು. ಅಂದರೆ ಹುಚ್ಚನ ಮದುವೆಯಲಿ ಉಂಡವನೆ ಜಾಣ ಅಲ್ವಾ. ಸದ್ಯ ಮಸ್ಕಿ ಕ್ಷೆತ್ರದ ಜನತೆ ಹೇಳುವಾ ಆಗೆ ಈ ಸರಿ ನಡೆಯುವ ಚುನಾವಣೆ ಯಾವ ವರ್ಷದಲ್ಲು ಆಗಿಲ್ಲ, ಈ ರೀತಿ ಚುನಾವಣೆಯ ಸದ್ದು ಕೇಳುತ್ತಿದೆ. ನಾನಾ ನೀನಾ ಅನ್ನುವ ಆಗೆ ಒಬ್ಬರ ಮೇಲೊಬ್ಬರು ಜಿದ್ದಾ ಜಿದ್ದಿನಲ್ಲಿ ಸಾಗುತ್ತಿದ್ದಾರೆ. ಒಟ್ಟಿನಲ್ಲಿ ಮಸ್ಕಿ ಕ್ಷೆತ್ರದ ಅಭಿವೃದ್ದಿಯ ಕಾರ್ಯಗಳಿಗೆ ಪಣತಟ್ಟುವಂತ ನಾಯಕ, ಜನತೆ ನೋವು ನಲೀವುಗಳಿಗೆ ಸ್ಪಂಧಿಸುವ ನಾಯಕರು ಈ ಕ್ಷೆತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು, ಹಣದ ಆಮೀಶಕ್ಕೆ ಹೋಳಗಾಗದೆ, ಭರವಶೇಯ ಮಾತುಗಳಿಗೆ ಬೇರಗಾಗದೆ ಒಳ್ಳೆಯ ನಾಯಕನನ್ನು ಗೆಲ್ಲಿಸಿ, ಮಸ್ಕಿ ಕ್ಷೇತ್ರವು ರಾಜ್ಯಕ್ಕೆ ಮಾಧರಿಯಾಗುವ ಕೈಗನ್ನಡಿಯಾಗಬೇಕು ಅಂತಹ ನಾಯಕನನ್ನ ಆಯ್ದುಕೊಳ್ಳಿ. ಸಂಪಾದಕಿಯ