ಪೊಲೀಸ್ ಕಾರ್ಯಚರಣೆ : ಚಿನ್ನಾಭರಣ, ದ್ವಿಚಕ್ರವಾಹ, ಮೋಬಾಯಿಲ್ ಜೊತೆಗೆ ಕಳ್ಳರಿಬ್ಬರು ಬಂಧನ….
ಬೆಳಗಾವಿ: ಕಳ್ಳರಿಬ್ಬರನ್ನು ಬಂಧಿಸಿರುವ ಮಾಳ ಮಾರುತಿ ಪೊಲೀಸರು ಬಂಧಿತನಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹ, ಮೋಬಾಯಿಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾಳಮಾರುತಿ ಪೊಲೀಸ್ ಇನ್ಸಪೆಕ್ಟರ ಸುನೀಲ ಪಾಟೀಲ ಇವರ ನೇತೃತ್ವದ ತಂಡವು ಬೆಳಗಾವಿ ನಗರದಲ್ಲಿ ಸರಗಳ್ಳತನ, ಕಳ್ಳತನ ಮಾಡುವ ಆರೋಪಿತರನ್ನು ಪತ್ತೆ ಮಾಡಿದ್ದು, ಆತನ ವಶದಲ್ಲಿದ್ದ ಸುಮಾರು 1,00,000 ರೂ ಮೌಲ್ಯದ ಬಂಗಾರದ ಚೈನ್ ಮತ್ತು ಸುಮಾರು 1,50,000 ರೂ ಮೌಲ್ಯದ 6 ಮೊಬೈಲಗಳು ಹಾಗೂ ಸರಗಳ್ಳತನ ಮಾಡಲು ಉಪಯೋಗಿಸಿದ ಸುಮಾರು 60,000 ರೂ ಮೌಲ್ಯದ ಆ್ಯಕ್ಟಿವಾ ಮೋಟಾರ ಸೈಕಲ ಹೀಗೆ ಒಟ್ಟು 3,10,000 ರೂ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅದಂತೆ ಇಬ್ಬರು ಆರೋಪಿತರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ತನಿಖೆ ಮುಂದುವರೆದಿರುತ್ತದೆ. ಈ ಪ್ರಕರಣದಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್‍ಐ ಹೊನ್ನಪ್ಪ ತಳವಾರ, ಎಎಸ್‍ಐ ಎ.ಬಿ.ಕುಂಡೇದ, ಎಂ.ಜೆ ಕುರೇರ, ಕೆ.ಡಿ. ನದಾಫ್, ಜಗನ್ನಾಥ ಭೋಸಲೆ, ಬಸವರಾಜ ಕಲ್ಲಪ್ಪನವರ, ಸಿ.ಐ. ಚಿಗರಿ, ಮುತ್ತಪ್ಪ ಬೊಮ್ಮನಾಳ, ಎಸ್.ಎಂ.ಗುಡದೈಗೋಳ, ಎಲ್.ಎಂ ಮುಶಾಪೂರೆ, ಹಾಗೂ ಸಿಬ್ಬಂದಿಯವರು ಈ ದಾಳಿಯನ್ನು ಮಾಡಿದ್ದಾರೆ.
ಈ ದಾಳಿಯನ್ನು ಮಾಡಿ ಖದೀಮರನ್ನು ಬಂಧಿಸಿ ರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತರು ಹಾಗೂ ಉಪ-ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಇವರು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿರುತ್ತಾರೆ. ವರದಿ – ಮಹೇಶ ಶರ್ಮಾ