ತಾವರಗೇರಾ ಪಟ್ಟಣಕ್ಕೆ ಶ್ರೀ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಿ.ಟಿ.ರವಿ, ಅರುಣಸಿಂಗ್ ಜಿ. ಆಗಮನ

Spread the love

ತಾವರಗೇರಾ ಪಟ್ಟಣಕ್ಕೆ ಶ್ರೀ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಿ.ಟಿ.ರವಿ, ಅರುಣಸಿಂಗ್ ಜಿ. ಆಗಮನ

 

ಕರ್ನಾಟಕದಲ್ಲಿ ನಡೆಯತ್ತಿರುವ ಮಸ್ಕಿ ಕ್ಷೇತ್ರದ ಮರು ಚುನಾವಣೆಯ ಅಂಗವಾಗಿ ಆಗಮಿಸಿದ ಶ್ರೀ ಮಾನ್ಯ ಕರ್ನಾಟಕದ ಮುಖ್ಯಮಂತ್ರಿಯಾದ ಬಿ.ಎಸ್‌.ವೈ.ಯಡಿಯೂರಪ್ಪ ಅವರು ಮುದಗಲ‍್ ಪಟ್ಟಣದಿಂದ ಸುಮಾರು 11 ಘಂಟೆಗೆ ರಾಜ್ಯ ಹೆದ್ದಾರಿ ಮುಖಾಂತರವಾಗಿ ತಾವಾರಗೆರಾ ಅಂಬೇದ್ಕರ ಸರ್ಕಲ್ ದಿಂದ ಸಾವಿರಾರು ಅಭಿಮಾನಿಗಳ ಹಾಗು ಪಕ್ಷ ಕಾರ್ಯಕರ್ತರತ್ತ ಗೆಲುವಿನ ಸಂಕೇತದ ಕೈ ಯನ್ನು ಎತ್ತುತ್ತಾ ಸಿಂದನೂರ ಸರ್ಕಲ್ ಮುಖಾಂತರ ಮಸ್ಕಿ ಕ್ಷೇತ್ರದತ್ತ ಮುಖಮಾಡಿದರು.  ಹಾಗೂ  ಬಿ.ಜೆ.ಪಿ.ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ. ಜೊತೆಗೆ ರಾಜ್ಯ ಉಸ್ತುವಾರಿಯಾದ ಅರುಣಸಿಂಗ್ ಜಿ. ಯವರು ಜೊತೆಗೆ ಕೊಪ್ಪಳ ಜಿಲ್ಲೆಯ ಉಸ್ತುವರಿ ಸಚಿವರಾದ ಮಾನ್ಯ ಬಿ.ಸಿ.ಪಾಟೀಲ್ ರವರು ಬಿ.ಜೆ.ಪಿ.ಯ ರಾಜ್ಯ ಉಪದ್ಯಕ್ಷರಾದ ವೈ ವಿಜೆಯೇಂದ್ರರವುರು ಮತ್ತು ಜಿಲ್ಲೆಯ ಬಿ.ಜೆ.ಪಿ.ಯ ಎಲ್ಲಾ ಮುಖಂಡರು ತಾವರಗೇರಾ ಪಟ್ಟಣದ ಐ.ಬಿ.ಹತ್ತಿರ ಇರುವ ವೀರ ಕಿತ್ತೂರ ರಾಣಿ ಚೆನ್ನಮ್ಮ ವೃತ್ತಕ್ಕೆ ಪೂಜೆಯ ಕಾರ್ಯಕ್ರಮವನ್ನು ಮುಂಗಿಸಿಕೊಂಡು ನೇರವಾಗಿ ತಾವರಗೇರಾ ಪಟ್ಟಣದ ಹಿರಿಯ ಬಿ.ಜೆ.ಪಿ.ಮುಖಂಡರಾದ ಶ್ರೀ ಶೇಖರಗೌಡ ಪೊಲೀಸ್ ಪಾಟೀಲ್ ರವರ ಮನೆಗೆ ಹೋಗಿ ಬೆಳಗಿನ ಉಪ-ವಿಹಾರ ಮುಗಿಸಿಕೊಂಡು ನೇರವಾಗಿ ತಾವರಗೇರಾದ ಮುಖ್ಯ ರಸ್ತೆಯಾದ ಡಾ// ರಾಜಕುಮಾರ ರಸ್ತೆಯಿಂದ ಸಿಂಧನೂರು ರಸ್ತೆಯ ಕಡೆಗೆ ಹೋರಟು ಹೋದರು. ಈ ಮಸ್ಕಿ ಚುನಾವಣೆಯ ಅಂಗವಾಗಿ ದಿನೆ ದಿನೆ ಕಾವು ಏರುತ್ತಿದ್ದು. ತಾವರಗೇರಾ ಪಟ್ಟಣದ ಡಾ॥ ರಾಜಕುಮಾರ್ ಸರ್ಕಲ್ ನಲ್ಲಿ ಖಾಕಿ ಪಡೆಗಳು ಸಾರ್ವಜನಿಕರನ್ನ ರೋಡ ಬದಿಯಿಂದ ಬದಿಗೆ ಸರಿಸುವಲ್ಲಿ ಹರ ಸಹಸ ಮಾಡಲಾಯಿತು. ಈ ಪೊಲೀಸ್ ಪಡೆಗಳ ಹರ ಸಹಸಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗವು ಅಭಿನಂದನೆ ಸಲ್ಲಿಸುವೇವು.

ವಿಶೇಷವಾಗಿ ಈ ಮಸ್ಕಿ ಕ್ಷೇತ್ರದ ಚುನಾವಣೆಯ ಅಂಗವಾಗಿ ಕರ್ನಾಟಕದ ಸರ್ವ ರಾಜಕೀಯ ನಾಯಕರು ಅಂದರೆ (ಬಿ.ಜೆ.ಪಿ. ಹಾಗೂ ಕಾಂಗ್ರೆಸಿ)ನವರು ನಮ್ಮ ತಾವರಗೇರಾ ಪಟ್ಟಣಕ್ಕೆ ಆಗಮಿಸುವುದು ತುಂಬಾ ವಿಶೇಷವಾಗಿದೆ, ಒಟ್ಟಿನಲ್ಲಿ ಕರ್ನಾಟಕದಲ್ಲಿ ತಾವರಗೇರಾ ಪಟ್ಟಣವು ಸರ್ವ ರಾಜಕೀಯ ನಾಯಕರ ಭಾಯಿಯಲ್ಲಿ ಉಳಿದುಕೊಂಡಿದೆ ಎಂಬುವುದೆ ವಿಶೇಷ.

ವರಧಿ – ಅಮಾಜಪ್ಪ ಹೆಚ್.ಜುಮಾಲಪೂರ

Leave a Reply

Your email address will not be published. Required fields are marked *