ಮಾಲವಿ:ಮದ್ಯದಂಗಡಿ ಆರಂಭಿಸದಿರಲು ಆಗ್ರಹ-

Spread the love

ಮಾಲವಿ:ಮದ್ಯದಂಗಡಿ ಆರಂಭಿಸದಿರಲು ಆಗ್ರಹ-

ವಿಜಯನಗರ  ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಲವಿಗ್ರಾಮದಲ್ಲಿ,ನಿರ್ಮಾಣ ಗುತ್ತಿರುವ ಮದ್ಯ ಮಾರಾಟ ಮಳಿಗೆಗೆ ಗ್ರಾಮಸ್ಥರು ಹಾಗೂ ವಿವಿದ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೋರಟಗಾರರ ನೇತೃತ್ವದಲ್ಲಿ ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿದ್ದು ಗ್ರಾಮಸ್ಥರು ಹಾಗೂ ಮಹಿಳೆಯರು ಪ್ರತಿಭಟಿಸಿ ತಮ್ಮ ಹಕ್ಕೊತ್ತಾಯ ಮಾಡಿದ್ದಾರೆ. ಪ್ರಭಾವಿಗಳು ಬಂಡವಳ ಶಾಹಿಗಳ ಒತ್ತಡಕ್ಕೆ ಮಣಿದು ಮದ್ಯದಂಗಡಿ ಪ್ರಾರಂಭಿಸಿದ್ದಲ್ಲಿ,ಹಂತ ಹಂತವಾಗಿ ಕಾನೂನು ನಿಯದಂತೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಹೋರಟಗಾರರು ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಸಂಬಂದಿಸಿದಂತೆ ಹೋರಾಟಗಾರರು  ಕ್ಷೇತ್ರದ ಶಾಸಕರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಪ್ರತಿಭಟನೆಯಲ್ಲಿ ನರೇಗಾ ಕೂಲಿಕಾರ್ಮಿಕರು ಹಾಗೂ ಮಹಿಳ‍ ಸಂಘದ ಪದಾಧಿಕಾರಿಗಳು,ಗ್ರಾಕೂಸ್ ಸಂಸ್ಥೆಯ ಪ್ರಮುಖರು,ವಿವಿದ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನೇತೃತ್ವ ವಹಿಸಿದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

 

Leave a Reply

Your email address will not be published. Required fields are marked *