ಸರ್ಕಾರಿ ಜಾಗದ ಉಳುವಿಗಾಗಿ ಪಾದಯಾತ್ರೆಗೆ ಧುಮುಕಿದ ಕ್ಷೇತ್ರದ ಜನನಾಯಕಿ ಎಂಪಿವೀಣಾ_ಮಹಾಂತೇಶ್!
ಹರಪನಹಳ್ಳಿ ಕ್ಷೇತ್ರ ವ್ಯಾಪ್ತಿಯ #ಕರೆಕಾನಹಳ್ಳಿ ಎಂಬ ಕುಗ್ರಾಮದ ಕೆರೆಯ ಜಾಗವನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಆ ಜಮೀನನ್ನು ಬೇರೆಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಇಂದು #ಕರೆಕಾನಹಳ್ಳಿ ಗ್ರಾಮಸ್ಥರೊಂದಿಗೆ ಕೆರೆಯ ದಡದಿಂದ ಹರಪನಹಳ್ಳಿಯ ತಹಶೀಲ್ದಾರ್ ಅವರ ಕಛೇರಿಯ ವರೆಗೆ ಎರಡು ದಿನದ #ಪ್ರತಿಭಟನಾ_ಪಾದಯಾತ್ರೆ ಕೈಗೊಂಡು #ತೊಗರಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆಯೂ ಈ ಸಂಬಂಧ ಪ್ರತಿಭಟನಾ ಪಾದಯಾತ್ರೆ ಮುಂದುವರೆಸಲಿರುವ ಕ್ಷೇತ್ರದ ನಾಯಕಿ ಎಂ.ಪಿ.ವೀಣಾ ಮಹಾಂತೇಶ್ ಅವರು ಹರಪನಹಳ್ಳಿಯ ತಹಶೀಲ್ದಾರ್ ಅವರ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿ ಕೆರೆಯ ಒತ್ತುವರಿ ಜಾಗವನ್ನು ಉಳಿಸಲು ಮನವಿ ಸಲ್ಲಿಸಲಿದ್ದಾರೆ. ಈ ಕುರಿತು ಮಾತನಾಡಿದ ಎಂ.ಪಿ.ವೀಣಾ ಮಹಾಂತೇಶ್ ಅವರು ಇಂದಿನ ದಿನಮಾನಗಳಲ್ಲಿ ಸರ್ಕಾರಿ ಜಾಗ, ಕಂದಾಯ ಜಮೀನು, ಕೆರೆಯ ಜಾಗದಂತಹ ಸರ್ಕಾರಿ ಸ್ವಾಮ್ಯದ ಜಮೀನುಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಿ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಸರ್ಕಾರದ ಆಸ್ತಿಯನ್ನು ಉಳಿಸುವ ಅಧಿಕಾರಿಗಳು ಎಲ್ಲ ವಿಷಯಗಳು ಗೊತ್ತಿದ್ದರು ಏನೂ ಗೊತ್ತಿಲ್ಲದ ಹಾಗೆ ಕಣ್ಮುಚ್ಚಿ ಕುಳಿತಿರುವುದು ಆಶ್ಚರ್ಯದಾಯಕ. ಇಂದು ಗ್ರಾಮದ ಜನರೊಟ್ಟಿಗೆ ಎರಡು ದಿನಗಳ ಪಾದಯಾತ್ರೆ ಕೈಗೊಂಡು ಮೊದಲ ದಿನ ತೊಗರಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿ ನಾಳೆ ಬೆಳಗ್ಗೆ ಹರಪನಹಳ್ಳಿಗೆ ಪಾದಯಾತ್ರೆ ಮುಂದುವರೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಹಿಂದೆಯೂ ಈ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಗಿದ್ದರು ಅದನ್ನು ಅದರ ಬಗ್ಗೆ ಚಕಾರವೆತ್ತದ ಅಧಿಕಾರಿಗಳಿಗೆ ಪಾದಯಾತ್ರೆಯ ಮೂಲಕ ಮನವಿ ಸಲ್ಲಿಸಲು ಅಣಿಯಾಗಿದ್ದೇವೆ. ನಮ್ಮ ಈ ಮನವಿಗೂ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯ ಜನತೆಯೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಗ್ರಾಮಪಂಚಾಯತ್ ಸದಸ್ಯರಾದ ಹೂಮಾಲಿ ಬಾಯಿ,ಪೂಜಾರಿ ನಾಗರಾಜ್ ನಾಯ್ಕ್ ಮಾಜಿ ಗ್ರಾಮ್ ಪಂಚಾಯತ್ ಸದಸ್ಯರಾದ ರಮೇಶ್ ಊರಿನ ಮುಖಂಡಾರದ ತುಮನಪ್ಪ,ಅಂಜಿನಪ್ಪ,ಮಲ್ಲೇಶ್ ನಾಯ್ಕ್,ಲಾಲು ನಾಯ್ಕ್,ಕಸಂಜಿ ನಾಯ್ಕ್,ಕರಿಯಪ್ಪ ಸಿತ್ಯನಾಯ್ಕ್.ದರ್ಮನಾಯ್ಕ್, ಪೂಜಾರಿ ಯೋಗೆಂದ್ರ ನಾಯ್ಕ್,ಮಂಜುನಾಥ್.ಸಂತೋಷ ಪ್ರಕಾಶ್ ನಾಯ್ಕ್, ಚಂದ್ರಪ್ಪ ,ಶಿವರಾಜ್ ಇನ್ನು ಮುಂತಾದವರು ಭಾಗಿಯಾಗಿದ್ದರು.
ವರದಿ – ಸಂಪಾದಕೀಯ