ತಾವರಗೇರಾದ ಮಹೇಶ್ವರ ಶ್ರೀಗಳಿಗೆ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಒಂದಲ್ಲಾ ಒಂದು ರೀತಿಯಲ್ಲಿ ತಾವರಗೇರಾದ ವ್ಯಕ್ತಿಗಳು ನಾಡಿನಾದ್ಯಾಂತ ಸುದ್ದಿಯಲ್ಲಿ ಇರುತ್ತಾರೆ, ಅದುವೆ ನಮ್ಮ ತಾವರಗೇರಾದ ವಿಶೇಷತೆ ಅಂದರೆ ತಪ್ಪಾಗದು, ಮೊನ್ನೇತ್ತಾನೆ ಸಿ.ಎಮ್. ಪದಕ ಸ್ವೀಕರಿಸಿದ ತಾವರಗೇರಾ ಪಟ್ಟಣದ ಪೊಲೀಸ್ ಇಲಾಖೆಯ ಪಿ.ಎಸ್.ಐ. ಆದ ಮಾನ್ಯ ಗೀತಾಂಜಲಿ ಶಿಂಧೆಯವರು, :ಸುದ್ದಿಯ ಹಿನ್ನೆಲೆಯಲ್ಲಿಯೇ ತಾವರಗೇರಾ ಪಟ್ಟಣದ ರುದ್ರಯ್ಯ ತಾತನವರ ಹಿರೇಮಠದ ಮಹೇಶ್ವರ ಶ್ರೀ ಗಳು 2021ನೇ ಸಾಲಿನ ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ ಮಹೇಶ್ವರ ಶ್ರೀ ಗಳು ಕಿರಿಯ ವಯಸ್ಸಿನಲ್ಲಿ ಯೆ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ದರ್ಶನ ಮಾಸ ಪತ್ರಿಕೆ ಮತ್ತು ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಕೊಡಮಾಡುವ 2021ನೇ ಸಾಲಿನ ರಾಷ್ಟ್ರೀಯ ಬಸವ ರತ್ನ ಪ್ರಶಸ್ತಿಯನ್ನು ನೀಡುವುದರ ಮೂಲಕ ಶ್ರೀಗಳನ್ನು ಗೌರವಿಸಲಾಗುತ್ತಿದೆ ಸದರಿ ಪ್ರಶಸ್ತಿಯನ್ನು ದಿ,25ರಂದು ರವಿವಾರ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ಹಾಗೂ ರಾಜಕೀಯ ಧುರಿಣರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ ಎಂದು ಕಾರ್ಯಕ್ರಮ ದ ಆಯೋಜಕರಾದ ಎಸ್ ಎಸ್ ಪಾಟೀಲ್ ಭೈರಿದೇವರಕೊಪ್ಪ ಹುಬ್ಬಳ್ಳಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮಹೇಶ್ವರ ಶ್ರೀ ಗಳಿಗೆ ಪ್ರಶಸ್ತಿ ದೊರಕಿರುವುದರಿಂದ ಅವರ ಅಪಾರ ಭಕ್ತವೃಂದಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಜೊತೆಗೆ ತಾವರಗೇರಾ ಪಟ್ಟಣವು ದಿನದಿಂದ ದಿನಕ್ಕೆ ಅಭಿವೃದ್ದಿಯತ್ತ ಸಾಗುತ್ತಿರುವುದು ಹೆಮ್ಮೆಯ ವಿಶೆಯವಾಗಿದೆ.ಇಂತಹ ದಿನಮಾನಗಳಲ್ಲಿ ರುದ್ರಯ್ಯ ತಾತನವರ ಹಿರೇಮಠದ ಮಹೇಶ್ವರ ಶ್ರೀ ಗಳು 2021ನೇ ಸಾಲಿನ ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ಶ್ವೀಕರಿಸಲೆಂದು ಹಾಗೂ ಈ ಶ್ರೀಗಳು ನಾಡಿನ ತುಂಬಾ ಹೆಸರು ಉಳಿಸುವಂತ ಕಿರ್ತಿಗೆ ಪಾತ್ರರಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಆರೈಸುತ್ತಿದ್ದೆವೆ. ವರಧಿ – ಅಮಾಜಪ್ಪ ಹೆಚ್.ಜುಮಲಾಪೂರ