ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾಡುತ್ತಿದೆ ಹಸಿರು ಸಂಸ್ಕೃತಿಯನ್ನು ಬೆಳೆಸಲು ತನ್ನದೇ ಆದ ರೀತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಬಂಜಾರಾ ಬಂಧುಗಳು ಎಲ್ಲರಿಗೂ ಪ್ರೇರಕರಾಗುತ್ತಿದ್ದಾರೆ…..

Spread the love

ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾಡುತ್ತಿದೆ ಹಸಿರು ಸಂಸ್ಕೃತಿಯನ್ನು ಬೆಳೆಸಲು ತನ್ನದೇ ಆದ ರೀತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಬಂಜಾರಾ ಬಂಧುಗಳು ಎಲ್ಲರಿಗೂ ಪ್ರೇರಕರಾಗುತ್ತಿದ್ದಾರೆ…..

ಬಾಗಲಕೋಟ್ ಜಿಲ್ಲೆಯ ದುರ್ಗಾ ವಿಹಾರ ಹತ್ತಿರ ಬಂಜಾರ ಕಾಲೋನಿ  ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾಡುತ್ತಿದೆ ಹಸಿರು ಸಂಸ್ಕೃತಿಯನ್ನು ಬೆಳೆಸಲು ತನ್ನದೇ ಆದ ರೀತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಬಂಜಾರಾ ಬಂಧುಗಳು ಎಲ್ಲರಿಗೂ ಪ್ರೇರಕರಾಗುತ್ತಿದ್ದಾರೆ.ಬಂಜಾರ ಕಾಲೋನಿ ತಾಂಡಾದಲ್ಲಿ ಈ ವಿಶಿಷ್ಟ ಗೋದಿ ಸಸಿ ಹಬ್ಬ ನಡೆಯುತ್ತದೆ. ಇದನ್ನು ತೀಜ್ ಹಬ್ಬ ಎಂದು ಇವರು ಕರೆಯುತ್ತಾರೆ. ಮೂಲತಃ ರಾಜಸ್ಥಾನ, ಗುಜರಾತ್, ಉತ್ತರ ಭಾರತದಿಂದ ವಲಸೆ ಬಂದ ಬಂಜಾರರು ( ಲಂಬಾಣಿಗಳು) ಹಸುಗಳನ್ನೇ ಅವಲಂಭಿಸಿ ತಮ್ಮ ವ್ಯಾಪಾರ , ಜೀವನ ನಡೆಸುತ್ತಾ ವಲಸೆ ಬಂದಿರುವುದು ಇತಿಹಾಸ. ಬಾಗಲಕೋಟೆ ಜಿಲ್ಲೆಯ ಬಂಜಾರ ಕಾಲೋನಿ ತಾಂಡಾದಲ್ಲಿ  ವಿಶಿಷ್ಟ ಬಂಜಾರ ಸಂಸ್ಕೃತಿ : ದೇಶದಲ್ಲಿಯೇ ಉಡುಗೆ ತೊಡುಗೆಗಳಿಂದ ತಟ್ಟಂತ ಗಮನ ಸೆಳೆಯುವ ಬಂಜಾರ ಜನಾಂಗದವರು ಹಿಂದಿನ ಕಾಲದ ತಮ್ಮ ಉಡುಗೆಯ ರೀತಿಯನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಇತ್ತೀಚಿನ ಯುವಪೀಳಿಗೆ ಅಧುನೀಕತೆಗೆ ಒಳಗಾಗಿದ್ದರೂ ಸಾಂಪ್ರದಾಯಿಕ ಉಡುಗೆ ಮುಂದುವರೆದೇ ಇದೆ. ಅದೇ ರೀತಿ ಬಂಜಾರ ಭಾಷೆ ಇಡೀ ಭಾರತದಲ್ಲಿ ಬಂಜಾರ ಭಾಷೆ ಒಂದೇ ತೆರನಾಗಿ ಕಾಣುತ್ತದೆ. ಆಯಾ ರಾಜ್ಯಗಳ ಭಾಷೆಗಳ ಶಬ್ದಗಳನ್ನು ಸೇರಿಸಿಕೊಂಡು ಲಂಬಾಣಿಗರು ಮಾತನಾಡುತ್ತಾರೆ. ತಮ್ಮದೇ ಆದ ವಿಶಿಷ್ಟ ಹಬ್ಬಗಳನ್ನು ಆಚರಿಸುವ ಬಂಜಾರರು (ಲಂಬಾಣಿ) ವಿಶೇಷವಾಗಿ ಸಿತಲಾ, ಹೋಳಿ, ದವಾಳಿ ( ದೀಪಾವಳಿ) ,ದಸರಾ, ತೀಜ್ ( ಸಸಿ ಹಬ್ಬ)ಗಳನ್ನು ಆಚರಿಸುತ್ತಾರೆ. ವಿಶಿಷ್ಟ ತೀಜ್ ಹಬ್ಬ ( ಗೋದಿ ಸಸಿ ಹಬ್ಬ) ತೀಜ್ (ಗೋದಿ ಸಸಿ ಹಬ್ಬ ) ಇದನ್ನು ಸಾಮಾನ್ಯವಾಗಿ ಎಲ್ಲ ಬಂಜಾರರು ಶ್ರಾವಣ ಮಾಸದಲ್ಲಿ ಮಾಡುತ್ತಾರೆ. ಕೆಲವೆಡೆ ಸ್ಥಳೀಯ ಹಬ್ಬಗಳ ಜೊತೆ ಈ ಹಬ್ಬವನ್ನು ಆಚರಿಸುತ್ತಾರೆ. ಸಸಿ ಹಬ್ಬದ ಆಚರಣೆಯು ವಿಶಿಷ್ಟವಾಗಿದೆ. ಕೊನೆಯ ಶ್ರಾವಣ ಸೋಮವಾರಕ್ಕೆ ೯ ದಿನ ಮುಂಚೆ ಹೊಸ ಬಿದರಿನ ಪುಟ್ಟಿಯನ್ನು ಖರೀದಿಸುತ್ತಾರೆ. ಕೃಷ್ಣ ಪರಮಾತ್ಮನ ಗುಡಿಯ ಪೂಜಾರಿಯು ಗುಡಿಗೆ ಬಂದ ಪ್ರತಿಯೊಬ್ಬರಿಗೂ ೯ ಗೋದಿಕಾಳುಗಳನ್ನು ನೀಡುತ್ತಾನೆ. ಹೀಗೆ ದೊರೆತ ೯ ಗೋದಿಕಾಳುಗಳನ್ನು ಮತ್ತೊಂದಿಷ್ಟು ಕಾಳುಗಳನ್ನು ಹುತ್ತದ ಮಣ್ಣಿನ ಜೊತೆ ಸೇರಿಸಿ ಮೊಳಕೆ ಬಿಡಲು ಹದಮಾಡಿ ಬಿದಿರಿನ ಪುಟ್ಟಿಯನ್ನು ಅವರವರ ಮನೆಯ ದೇವರ ಜಗುಲಿಯ ಹತ್ತಿರವಿಡುತ್ತಾರೆ. ಈ ಪುಟ್ಟಿಗೆ ೯ ದಿವಸದ ತನಕ ಬೆಳಿಗ್ಗೆ ಮತ್ತು ಸಂಜೆ ಬಹಳ ಮಡಿಯಿಂದ ತುಂಬಿದ ಬಿಂದಿಗೆಯ ನೀರನ್ನು ಹಾಕುತ್ತಾರೆ. ಈ ಕ್ರಿಯೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಭಾಗವಹಿಸುವವರು ಕುವಾರಿ ಕನ್ಯೆಯರು ( ಮದುವೆ ಆಗದೇ ಇರುವವರು). ತೀಜ್ ಹಬ್ಬದ ಮುಖ್ಯ ಘಟ್ಟ ಆರಂಭವಾಗುವುದು ಕಡೇ ಸೋಮವಾರದಂದು. ಅಂದು ಕೃಷ್ಣ ಗುಡಿಯ ಪೂಜಾರಿ ಗುಡಿಯ ಮುಂದೆ ಕಾಟಿ ಧ್ವಜವನ್ನು ಪ್ರತಿಷ್ಠಾಪಿಸುತ್ತಾರೆ.ಸುಮಾರು ೪ ಗಂಟೆಯ ಹೊತ್ತಿಗೆ ಇಡೀ ಊರಿನ ತೀಜ್ ಬುಟ್ಟಿಗಳು ಗುಡಿಯ ಅಂಗಳಕ್ಕೆ ಬಂದಿರುತ್ತದೆ. ನಂತರ ಕೃಷ್ಣ ಪೂಜಾರಿ ಜೊತೆಯಲ್ಲಿ ಊರಿನ ನಾಯಕ್, ಕಾರಬಾರಿ, ಡಾವೋ ಹಿರಿಯರೆಲ್ಲರೂ ಸೇರಿ ೯ ಬುಟ್ಟಿಗಳಿಂದ ತೀಜ್ ಸ್ವಲ್ಪ ಸ್ವಲ್ಪ ತೆಗೆದುಕೊಂಡು ದೇವರಿಗೆ ಅರ್ಪಿಸಿ ನಂತರ ಎಲ್ಲ ಹೆಂಗಸರು ಮತ್ತು ಕನ್ಯಾಮಣಿಗಳ ತೀಜ್ ಗಳನ್ನು ಬುಟ್ಟಿಯಿಂದ ಬೇರ್ಪಡಿಸುತ್ತಾರೆ . ನಂತರ ಗುಡಿಯ ಮುಂದೆ ಸೇರಿರುವ ಎಲ್ಲಾ ಹಿರಿಯ ಕಿರಿಯರಿಗೆ ಒಬ್ಬರಿಗೊಬ್ಬರು ತೀಜ್ ಹಂಚಿಕೊಂಡು ನಮಸ್ಕರಿಸುತ್ತಾ ವಿಜೃಂಭಣೆಯಿಂದ ರಾತ್ರಿ ೧೦ ಗಂಟೆಯವರೆಗೂ ಹಾಡುತ್ತಾ ಕುಣಿಯುತ್ತಾ ತೀಜ್ ಹಬ್ಬ ಆಚರಿಸುತ್ತಾರೆ. ಬನ್ನಿ ಹಬ್ಬದಂತೆ ಈ ಹಬ್ಬದ ಆಚರಣೆಯಲ್ಲೀಯೂ ಪರಸ್ಪರರಿಗೆ ತೀಜ್ ಹಂಚಿಕೊಂಡು ಬಾಳು ಯಾವತ್ತೂ ಹಸಿರಾಗಲಿ, ಒಳ್ಳೆಯದಾಗಲಿ ಎಂದು ಹಾರೈಸಲಾಗುತ್ತದೆ. ತೀಜ್ ಹಬ್ಬದ ಮುಕ್ತಾಯ : ಹುಲುಸಾಗಿ ಬೆಳೆಸಿದ ೯ ದಿವಸದ ಗೋದಿ ಸಸಿಗಳನ್ನು ಬನ್ನಿ ಹಂಚಿಕೊಳ್ಳುವಂತೆ ಹಂಚಿಕೊಂಡ ಸಸಿಗಳನ್ನು ಭಕ್ತಿಪೂರ್ವಕವಾಗಿ ಮತ್ತು ಜ್ಞಾಪಕಾರ್ಥವಾಗಿ ಸಾಧ್ಯವಾದಷ್ಟು ದಿನ ಮಡಿವಂತಿಕೆಯಿಂದ ಇಟ್ಟುಕೊಳ್ಳುತ್ತಾರೆ.  ಪೃಕೃತಿ ದೇವತೆಗೆ ಎಲ್ಲರ ಬಾಳನ್ನು ಹಸನು ಮಾಡು ಎಂದು ಬೇಡಿಕೊಳ್ಳುವುದಕ್ಕಾಗಿ ಈ ಹಬ್ಬ ಆಚರಿಸಲಾಗುತ್ತದೆ. ಎಲ್ಲೆಡೆ ಒಳ್ಳೆಯ ಮಳೆಯಾಗಿ ಒಳ್ಳೆಯ ಬೆಳೆ ಬರಲಿ ಇಡೀ ಮನುಕುಲಕ್ಕೆ ಒಳ್ಳೆಯದಾಗಲಿ ಎಲ್ಲೆಡೆ ಹಸಿರು ಹರಡಲಿ , ಹಸಿರೇ ಉಸಿರು ಎಂದು ಈ ವಿಶಿಷ್ಟ ಹಬ್ಬದಂದು ಇಡೀ ಜಿಲ್ಲೆಯ ಸುತ್ತಮುತ್ತಲಿನ ತಾಂಡಾದವರು ಹಾಗು ಪ್ರಿಯಾ..ಸೃಷ್ಠಿ ..ದೀಪಾ ..ಧನರಾಜ್ ಚೌವಾಣ್  ಮುಂತಾದವರು ಭಾಗವಹಿಸಿದರು…

ವರದಿ~ಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *