ಜುಮಲಾಪೂರ ಗ್ರಾಮಕ್ಕೆ ಭೇಟಿ ಕೊಟ್ಟು ಜಲ ಜೀವನ ಮಿಶನ್ ಯೋಜನೆಯ ವಂತಿಗೆ ಹಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ ಸಹಾಯಕ ಕುಷ್ಟಗಿ ಕಾರ್ಯನಿರ್ವಾಹಕ ಅಭಿಯಂತರರು Aee ಶ್ರೀ ಶಾಮಣ್ಣ ನಾರಿನಾಳ..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮಕ್ಕೆ ಬೇಟಿ ನೀಡಿದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗಾಧಿಕಾರಿ ಯಾದ ಶ್ರೀ aee ಶಾಮಣ್ಣ ಬಾಂಬೆ ಇವರು ಜಲ ಜೀವನ ಮಿಶನ್ ಯೋಜನೆಯಡಿಯಲ್ಲಿ ಅಂತಿಮ ಹಂತದತ್ತ ಸಾಗುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಗ್ರಾಮದ ಸಾರ್ವಜನಿಕರಿಗೆ ಈ ಯೋಜನೆಯ ವಂತಿಗೆ ಹಣದ ಬಗ್ಗೆ ವಿವರವಾಗಿ. ತಿಳುಸುತ್ತಾ ಪ್ರತಿಯೊಬ್ಬರೂ ಕೂಡ ವಂತಿಗೆ ಹಣವನ್ನೂ ಕಟ್ಟಬೇಕು ಹಾಗೆ ಎಲ್ಲವನ್ನು ಸರ್ಕಾರ ಮಾಡುತ್ತದೆ ಎಂದರೆ ತಪ್ಪಾಗುತ್ತದೆ ಸರ್ಕಾರ ಮಾಡುತ್ತಿರುವ ಈ ಯೋಜನೆಗೆ ಸಾರ್ವಜನಿಕರಿಂದ ವಂತಿಗೆ ಹಣ ಸಂದಾಯವಾಗಬೇಕಾಗಿದೆ ಹಾಗಾಗಿ ಎಲ್ಲರೂ ಈ ಯೋಜನೆಯ ನಿಯಮವನ್ನು ಪಾಲಿಸಿಬೇಕಾಗಿದೆ ಹಾಗೆ ಪ್ರತಿಯೊಬ್ಬರು ಮನೆ ಮನೆಗೆ ನಳ (ನಲ್ಲಿ) ಹಾಕುತ್ತಾರೆ ಹಾಕುವ ಮುನ್ನ ಪ್ರತಿ ಮನೆಯವರು ಸರಿಯಾದ ಪ್ರಮಾಣದಲ್ಲಿ ನಳ ಹಾಕಿಸಿಕೊಂಡು ಸೂತ್ತಲೂ ಕಾಂಕ್ರೀಟ್ ಹಾಕಿಸಿಕೊಳ್ಳಬೇಕು ನಿರು ತುಂಬುವ ಬಿಂದಿಗೆ ಕೂಡುವಷ್ಟು ಕಾಂಕ್ರೀಟ್ ಹಾಕಿಸಿಕೊಳ್ಳಬೇಕು ಯಾವುದೇ ರೀತಿಯಿಂದ ಗುತ್ತಿಗೆದಾರರು ಬೇಕಾ ಬಿಟ್ಟಿಯಾಗಿ ಕೆಲಸ ಮಾಡಿದರೆ ತಕ್ಷಣ ನನ್ನನ್ನು ಸಂಪರ್ಕಿಸಿ ಸರಿಯಾದ ಪ್ರಮಾಣದಲ್ಲಿ ಕೆಲಸ ಮಾಡಿಸಿ ಕೊಡುವೆ. ಹಾಗೆ ಗುತ್ತಿಗೆದಾರರು ಕೆಲಸ ಮಾಡಿ ಹೋದ ಮೇಲೆ ಹೇಳುವದಕ್ಕಿಂಥ. ಮಾಡುವ ಮುನ್ನವೆ ಜಾಗೃತಿಯಿಂದ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಪ್ರತಿ ಯೊಂದು ಮನೆ ಮನೆಗೆ ನಳ (ನಲ್ಲಿ) ಹಾಕಿಸಿಕೊಂಡು, ವಂತಿಗೆ ಹಣ ತುಂಬಿ ಸರಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದರು.
ವರದಿ – ಉಪ-ಸಂಪಾದಕೀಯ