ಅವಹೇಳನಕಾರಿ ಹೇಳಿಕೆಗೆ ಖಂಡನೆ : ತಹಶೀಲ್ದಾರ ಅವರಿಗೆ ಮನವಿ…..
ಜಮಖಂಡಿ : ನಗರದಲ್ಲಿ ಸೋಮವಾರ ಹಿಂದೂಪರ ಸಂಘಟನೆಯ ಮುಖಂಡರೊಬ್ಬರೂ ಪ್ರತಿಭಟನೆಯ ವೇಳೆಯಲ್ಲಿ ದಲಿತ ಅಧಿಕಾರಿಗೆ ಅವಹೇಳನಕಾರಿಯಾಗಿ ಮಾತನಾಡಿ ದಲಿತ ಸಮೂದಾಯಕ್ಕೆ ದಕ್ಕೆ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಎಸ್.ಸಿ/ಎಸ್.ಟಿ ನೌಕರರ ಸಂಘಟನೆಯ ಪ್ರಮುಖರು ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು.
ನಗರದ ಮಿನಿ ವಿಧಾನಸೌದ ಆವರಣದಲ್ಲಿ ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಚಲವಾದಿ ನೌಕರರ ಸಂಘದ ತಾಲೂಕಾದ್ಯಕ್ಷರಾದ ಸಂತೋಷ ತಳಕೇರಿ ಮಾತನಾಡಿ ಉಮೇಶ ಆಲಮೇಲಕರ ಎಂಬ ವ್ಯಕ್ತಿ ಪ್ರತಿಭಟನೆ ಮಾಡುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ದಲಿತ ನೌಕರನನ್ನು ನಿಂದನೆ ಮಾಡಿರುವುದು ದಲಿತ ಸಮೂದಾಯದ ನೌಕರರಿಗೆ ಅವಮಾನವಾಗಿರುವಂತಹ ಸಂಗತಿಯಾಗಿದೆ.
ಮೇಲಾಧಿಕಾರಿಗಳ ಆದೇಶ ಪಾಲಿಸುವುದು ಪ್ರತಿಯೊಬ್ಬ ನೌಕರನ ಆದ್ಯ ಕರ್ತವ್ಯ. ಯಾವುದೇ ಒಂದು ದುರುದ್ದೇಶದಿಂದ ಕೇವಲ ದಲಿತ ನೌಕರರನ್ನು ಅವಮಾನಿಸುವುದು ಸರಿಯಲ್ಲ. ತಾಲೂಕಿನಲ್ಲಿ ದಲಿತ ನೌಕರರು ಸರ್ಕಾರಿ ಕೆಲಸ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಉಲ್ಬಣಗೊಂಡಿದೆ. ಪ್ರತಿಯೊಬ್ಬ ಸಾರ್ವಜನಿಕರ ಸೇವಕ ಎಂಬ ಮನೋಬಾವದಿಂದ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ದಲಿತ ನೌಕರರನ್ನು ಹಾಗು ದಲಿತ ಸಮೂದಾಯವನ್ನು ಹಿಯಾಳಿಸಿರುವ ವ್ಯಕ್ತಿಯ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ದಲಿತ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡರು. ಮನವಿ ಸ್ವೀಕರಿಸಿ ತಹಶೀಲ್ದಾರ ಪ್ರಶಾಂತ ಚನಗೊಂಡ ಮಾತನಾಡಿ ದಲಿತ ಸಮೂದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುರಿತು ನೀಡಿರುವ ಮನವಿ ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೆನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್.ಸಿ/ಎಸ್.ಟಿ ನೌಕರರ ಸಂಘಟನೆಯ ಮುಖಂಡರಾದ ತಮ್ಮಣ್ಣ ನಾಗರಾಳ, ಬಿ.ಎ.ಕಾಂಬಳೆ, ದಿಲೀಪ ದೊಡಮನಿ, ಸುರೇಶ ಭೋಸಲೆ, ರಾಜಕುಮಾರ ತಳಕೇರಿ, ಎಸ್.ಬಿ.ಬಜಂತ್ರಿ, ಪರಶೂರಾಮ ಮೇಲ್ಗಡೆ, ಪ್ರಶಾಂತ ಜಂಬಗಿ ಸೇರಿದಂತೆ ಹಲವರು ಇದ್ದರು. ಪೋಟೊ ವಿವರ : ಜಮಖಂಡಿ ನಗರದ ಮಿನಿ ವಿಧಾನಸೌದ ಆವರಣದಲ್ಲಿ ಎಸ್ಸಿ/ಎಸ್.ಟಿ ನೌಕರರ ಸಂಘಟನೆಯ ಪ್ರಮುಖರು ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು.
ವರದಿ – ಮಹೇಶ ಶರ್ಮ