ಬೆಳಗಾವಿ ಜಿಲ್ಲೆಯ ಎಲ್ಲಾ ರೈತರು ಸೇರಿ ಅಥಣಿ ತಹಸೀಲ್ದಾರ ಕಚೇರಿ ಮುತ್ತಿಗೆ 27 ದಿನಾಂಕರಂದು…..

Spread the love

ಬೆಳಗಾವಿ ಜಿಲ್ಲೆಯ ಎಲ್ಲಾ ರೈತರು ಸೇರಿ ಅಥಣಿ ತಹಸೀಲ್ದಾರ ಕಚೇರಿ ಮುತ್ತಿಗೆ 27 ದಿನಾಂಕರಂದು…..

ಹಸಿರು ಸೇನೆ ಚಿಕ್ಕೋಡಿ ತಾಲೂಕು ವತಿಯಿಂದ ಕೇರೂರ ಗ್ರಾಮದ ಮಹಾದೇವ ಮಂದಿರದಲ್ಲಿ ತಾಲೂಕು ಅಧ್ಯಕ್ಷರು ಮಂಜುನಾಥ ಪರಗೌಡರ ನೇತೃತ್ವದಲ್ಲಿ 27 ಭಾರತ ಬಂದ ಮತ್ತು ರೈತರ ವಿವಿಧ ಸಮಸ್ಯೆಗಳ ಬಗ್ಗೆ ಸಭೆ ನಡೆಸಲಾಯಿತು.ರೈತರು ಸಭೆಯಲ್ಲಿ ರೈತರಿಗೆ ಬಡವರಿಗೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಇಲ್ಲದೆ ಕೆಲಸ ಮಾಡುತ್ತಿಲ್ಲಾ. ಬೆಳೆಹಾನಿ ಪರಿಹಾರ ಸರಿಯಾಗಿ ರೈತರಿಗೆ ಬಂದು ಮುತ್ತುತ್ತಿಲ್ಲಾ.ಕೆಇಬಿ ಅಧಿಕಾರಿಗಳು ಸುಟ್ಟ ಟಿಸಿ ಸರಿಯಾದ ವೇಳೆಗೆ ಬರುತ್ತಿಲ್ಲ ಸುಟ್ಟ ಟಿಸಿಗೆ ಹಣ ವಸೂಲಿ ಮಾಡುತ್ತಿದ್ದಾರೆ.ನೆರೆಸಂತ್ರಸ್ಥರ ಪರಿಹಾರ ಮತ್ತು ಕಬ್ಬಿನ ಎಸ ಎ ಪೀ ಬಾಕಿ ಬಿಲ್ಲಿನ ಬಗ್ಗೆ .ಸಾಲಮನ್ನಾ ಬಗ್ಗೆ ರೈತರು  ಸಭೆಯಲ್ಲಿ ತಿಳಿಸದರು.  ನಂತರ ಚಿಕ್ಕೋಡಿ ತಾಲೂಕು ಹಸಿರು ಸೇನೆ ಅಧ್ಯಕ್ಷರು ಮಂಜುನಾಥ ಪರಗೌಡರು ಮಾತನಾಡಿ 27 ಭಾರತ ಬಂದ ಕರೆ ಚಳುವಳಿಯನ್ನು ಅಥಣಿ ತಹಸೀಲ್ದಾರ ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.ಮತ್ತು ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಲಂಚ ಮತ್ತು ನೇರೆಸಂತ್ರಸ್ಥರ ಪರಿಹಾರ.ಸಾಲಮನ್ನಾ. ಕಬ್ಬಿನ ಬಾಕಿ ಬಿಲ್ಲು .ಟಿಸಿ ಇನ್ನಿತರ ಸಮಸ್ಯೆಗಳ ಬಗ್ಗೆ 27 ತಾರೀಕು ನಂತರ ಚಿಕ್ಕೋಡಿ ತಹಸೀಲ್ದಾರ ಅವರ ಮೂಲಕ ಎಲ್ಲಾ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡೋಣ ಎಂದು ತಾಲೂಕ ಅಧ್ಯಕ್ಷರು ಮಂಜುನಾಥ ಪರಗೌಡರು ತಿಳಿಸಿದ್ದಾರೆ.ಜೈ ಜವಾನ್ ಜೈ ಕಿಸಾನ್ ಎಂಬ ಮಾತು ಹೇಳುತ್ತಾ ಸಭೆಗೆ ವಿರಾಮ ನೀಡಿದರು…

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *