ಕೈವಲ್ಯಾಪುರ:ಮನೆಗಳಿಗೆ ನುಗ್ಗಿದ ಚರಂಡಿ ನೀರು,ಕೈಲಾಗದ ಪಿಡಿಓ ವಿರುದ್ಧ ಜನ ಜನಪ್ರತಿನಿಧಿಗಳ ಆಕ್ರೋಶ…..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೈವಲ್ಯಾಪುರ ಗ್ರಾಮದಲ್ಲಿ,ಸೆ22ರಂದು ಸಾಯಂಕಾಲ ಸುರಿದ ಮಳೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿವೆ. ಕೈವಲ್ಯಾಪುರ ಗ್ರಾಮದಲ್ಲಿ ಹಲವು ವರ್ಷಗಳ ಸಮಸ್ಯೆಯಾಗಿದ್ದು,ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮನೆಯಂಗಳದ ಚರಂಡಿಗಳು ಹೂಳು ತುಂಬಿ ವರ್ಷವಾಗಿದ್ದು ಪರಿಣಾಮ ಮಳೆ ನೀರು ರಭಸವಾಗಿ ಮೆನೆಗಳಿಗೆ ನುಗ್ಗಿದೆ. ಕೆಲ ಮನೆಗಳ ಸುತ್ತ ನೀರು ನಿಂತು ನೀರಿನ ಗುಂಡಿಗಳು ನಿರ್ಮಾಣವಾಗಿವೆ. ಗ್ರಾಮದಲ್ಲೆಡೆ ಚರಂಡಿಗಳು ನೀರಿನೊಂದಿಗೆ ಕಸ ಕೊಳೆತು ದುರ್ನಾಥ ಬೀರಿತ್ತಿವೆ, ಸಂಬಂದಿಸಿದಂತೆ ಜನಪ್ರತಿನಿಧಿಗಳು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೇವಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸೇವಕರಂತೆ ವರ್ತಿಸುತ್ತಿದ್ದಾರೆಂದು, ಶಿವಪುರ ಗ್ರಾಪಂ ಸದಸ್ಯರಾದ ಕೈವಲ್ಯಾಪುರದ ಹನುಮಂತಪ್ಪ, ಹುಸೇನ್ ಸಾಬ್ ಹಾಗೂ ಶಾರದಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಲ್ಲಿ ಕುಡಿಯೋ ನೀರಿನ ಪೈಪ್ ಹೊಡೆದಿದ್ದು ಅವು ಚರಂಡಿ ನೀರನ್ನು ಹೀರಿಕೊಳ್ಳುತ್ತಿವೆ,ಪರಿಣಾಮ ಕುಡಿಯೋ ನೀರಲ್ಲಿ ಚರಂಡಿ ಹಾಗೂ ಮಳೆಯ ನೀರು ಸೇರುತ್ತಿದೆ ಪರಿಣಾಮ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮಕ್ಕೆ ಹಲವು ತಿಂಗಳುಗಳಿಂದ ಕಲುಷಿತ ನಿುರು ಪೂರೈಕೆಯಾಗುತ್ತಿದ್ದು, ಬಹುತೇಕ ಗ್ರಾಮಸ್ಥರು ಅನೇಕ ಸಾಂಕ್ರಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೈವಲ್ಯಾಪುರ ಗ್ರಾಮದ ಗಲ್ಲಿ ಗಲ್ಲಿಗಳು ಕಸದ ರಾಶಿಗಳಿಂದ ಕೊಳೆತು ನಾರತ್ತಿವೆ,ಚರಂಡಿಗಳು ದುರ್ನಾಥ ಬೀರುತ್ತಿವೆ ಸೊಳ್ಳೆ ಹಾಗೂ ಕ್ರಿಮಿಕೀಟಗಳ ಭಾದೆ ಹೇಳತೀರದ್ದಾಗಿದೆ ಎಂದು ಗ್ರಾಮದ ಹಿರಿಯರು ಅಳಲು ತೋಡಿಕೊಂಡಿದ್ದಾರೆ.ನೀರು ಸರಬರಾಜು ಪೈಪ್ ಗಳು ಹೊಡೆದಿದ್ದು ಚರಂಡಿಯ ಕಲುಷಿತ ನೀರು ಮಿಶ್ರಣವಾಗುತ್ತಿದ್ದು,ಹಲವು ತಿಂಗಳುಗಳಿಂದ ಗ್ರಾಮಕ್ಕೆಲ್ಲ ಚರಂಡಿ ನೀರು ಮಿಶ್ರಣವಾದ ಕಲುಷಿತ ನೀರು ಸರಬರಾಜಾಗುತ್ತಿದೆ. ಇದರ ಪರಿವೆ ಇದ್ದರೂ ಪಿಡಿಓ ಮಾತ್ರ ಸ್ಥಳಕ್ಕೆ ಬೆಟ್ಟಿನೀಡಿಲ್ಲ ಕೇವಲ ಅಧ್ಯಕ್ಷರ ಉಪಾಧ್ಯಕ್ಷರ ಸೇವಕರಂತೆ ವರ್ತಿಸುತ್ತಿದ್ದಾರೆ, ಸರ್ಕಾರಿ ಸಂಬಳ ಪಡೆದು ಜನರ ಸೇವೆ ಮಾಡದೇ ಕೇವಲ ರಾಜಕಾರಣಿಗಳ ಸೇವಕರಂತೆ ವರ್ತಿಸುತ್ತಿದ್ದಾರೆಂದು ಸದಸ್ಯ ಹನುಮಂತಪ್ಪ ದೂರಿದ್ದಾರೆ. ಸಂಬಂದಿಸಿದಂತೆ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಜರುಗಿಸಬೇಕಿದೆ, ಗ್ರಾಮದಲ್ಲಿ ನೈರ್ಮಲ್ಯತೆ ಕಾಣೆಯಾಗಿದ್ದು ನೈರ್ಮಲ್ಯತೆ ಕಾಪಾಡಬೇಕಿದೆ.ಕಲುಷಿತ ಕುಡಿಯೋ ನೀರು ಸರಬರಾಜಾಗುತ್ತಿದ್ದು ಶುದ್ಧ ಕುಡಿಯೋ ನೀರು ಸರಬರಾಜಿಗೆ ಅಗತ್ಯ ಕ್ರಮ ಜರುಗಿಸಬೇಕಿದೆ, ಚರಂಡಿಗಳು ತುಂಬಿ ಕೊಳತು ನಾರುತ್ತಿವೆ ಶೀಘ್ರವೇ ಸ್ವಚ್ಚಗೊಳಿಸಬೇಕು.ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ಕಾರಣ,ಶೀಘ್ರವೇ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕೆಂದು ಗ್ರಾಮಸ್ಥರು ಈ ಮೂಲಕ ತಾಪಂ ಅಧಿಕಾರಿಗೆ ಒತ್ತಾಯಿಸಿದ್ದಾರೆ.ಶಿವಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ಧೋರಣೆ ತಾಳುತಿದ್ದು ತಮ್ಮ ಯಾವೊಂದು ಜನಪರ ಅಹಾಲಿಗೆ ಸ್ಪಂದಿಸುತ್ತಿಲ್ಲ ಎಂದು, ಶಿವಪುರ ಗ್ರಾಮ ಪಂಚಾಯ್ತಿ ಸದಸ್ಯರಾದ ಕೈವಲ್ಯಾಪುರ ಗ್ರಾಮದ ಶಾರದಮ್ಮ,ಹುಸೇನ್ ಸಾಬ್ ಹಾಗೂ ಹನುಮಂತಪ್ಪ ದೂರಿದ್ದಾರೆ.ತಾಪಂ ಅಧಿಕಾರಿಗಳು ಸ್ಥಳಪರಿಶೀಲಿಸಿ ಶೀಘ್ರವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಪಿಡಿಓ ಹಾಗೂ ತಾಪಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ.ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ದೂರು ನೀಡಲಾಗುವುದು,ಮತ್ತು ಗ್ರಾಮದ ಜನರೊಂದಿಗೆ ಗ್ರಾಪಂ ಮುತ್ತಿಗೆ ಹಾಕಿ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಸದಸ್ಯರು ಈ ಮೂಲಕ ಎಚ್ಚರಿಸಿದ್ದಾರೆ.ಕೈವಲ್ಯಾಪುರ ಗ್ರಾಮಸ್ಥರು ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮದ ಹಿರಿಯರು ಜನಪ್ರತಿನಿಧಿಗಳು ಮುಖಂಡರು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ