ವಿಜಯನಗರ ಜಿಲ್ಲೆ ಕೂಡ್ಲಿಗಿ:ಸೆ27ರಂದು ಬಂದ್ ಕರೆ….
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿವಿದ ಸಂಘಟನೆಗಳ ಸಹಯೋಗದಲ್ಲಿ,ಸೆ27ರಂದು ನಡೆಯುವ ಭಾರತ್ ಬಂದ್ ಹಿನ್ನಲೆಯಲ್ಲಿ ವಿವಿದ ಸಂಘಟನೆಗಳಿಂದ ಕೂಡ್ಲಿಗಿ ಬಂದ್ ಕರೆ ನೀಡಲಾಗಿದೆ. ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಬಂದ್ ಕರೆ ಯಶಸ್ವಿಗೊಳಿಸಲು,ವಿವಿದ ಸಂಘಟನೆಗಳ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ. ಸೆ22ರಂದು ಪೂರ್ವಭಾವಿ ಸಭೆ ಜರುಗಿಸಲಾಯಿತು,ಸಭೆಯಲ್ಲಿ ಕನ್ನಡಪರ ಸಂಘಟನೆ ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು. ಈ ಮೂಲಕ ಬಂದ್ ಯಶಸ್ಸುಗೊಳಿಸಲು ಸರ್ವರು ಒಮ್ಮತದ ನಿರ್ಣಯ ಕೈಗೊಂಡರು, ರೈತ ಸಂಘದ ಮುಖಂಡರಾದ ಕೆಕೆ ಹಟ್ಟಿ ದೇವರಮನೆ ಮಹೇಶ್ ಮಾತನಾಡಿ, ಜನ ವಿರೋಧಿ ನೀತಿಯ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಜರುಗುತ್ತಿರುವ ಪ್ರತಿಭಟನೆಗೆ.ಬೆಂಬಲ ವ್ಯಕ್ತಪಡಿಸಿ ಕರೆ ನೀಡಿರುವ ಭಾರತ ಬಂದ್ ಕರೆ ಯಿನ್ನಲೆಯಲ್ಲಿ,ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿದ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಕೂಡ್ಲಿಗಿ ಬಂದ್ ಗೆ.ಸಾರ್ವಜನಿಕರು ಸಹಕರಿಸಬೇಕು ಹಾಗೂ ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ ಮಾಲೀಕರು ವಾಹನಗಳ ಕಾರ್ಮಿಕರು,ಬಂದ್ ನಲ್ಲಿ ಭಾಗವಹಿಸಿ ಯಷಸ್ಸು ಗೊಳಿಸಬೇಕೆಂದು ಅವರು ಕರೆ ನೀಡಿದರು.ಎಮ್. ಬಸವರಾಜ, ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ. ರೈತ ಸಂಘದ ಮುಖಂಡರಾದ ವಿ ನಾಗರಾಜ,ರೈತ ಮುಖಂಡರಾದ ಎಸ್.ಭಾಷಾಸಾಬ್, ಕಾರ್ಯಾಧ್ಯಕ್ಷ ಕೆ.ಕೃಷ್ಣ,ಬಿ.ಚನ್ನಬಸಪ್ಪ ಹಾಗೂ ಹಾಲಸ್ವಾಮಿ ಮತ್ತು ಕಾರ್ಮಿಕ ಮುಖಂಡರಾದ ಗುನ್ನಳ್ಳಿರಾಘವೇಂದ್ರ.ದೇವದಾಸಿ ವಿಮೋಚನ ಸಂಘದ ಅಧ್ಯಕ್ಷೆ ಶ್ರೀಮತಿ ಕೆ.ವೆಂಕಮ್ಮ,ರೈತ ಸಂಘದ ಕಾರ್ಯಕರ್ತರಾದ ಭಾಷಾಸಾಬ್,ಕೆ. ಶೇಷಪ್ಪ,ಉಲುವತ್ತಿ ಸೋಮಣ್ಣ ಹಾಗೂ ಮತ್ತಿತರರು ಭಾಗವಹಿಸಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ–