ಕಾರಟಗಿಯಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಲಸಿಕಾ ಅಭಿಯಾನ ಕಾರ್ಯ, ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು….
ದಿನಾಂಕ :- 23-09-2021 ರಂದು ಕಾರಟಗಿ ಮಂಡಲದ ಕೋಟೆ ಆಂಜನೇಯ ಮತ್ತು ದ್ಯಾವಮ್ಮದೇವಿ ದೇವಸ್ಥಾನದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಲಸಿಕಾ ಅಭಿಯಾನ ಕಾರ್ಯ, ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಮಾನ್ಯ ಕನಕಗಿರಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ದಡೇಸೂಗೂರು ರವರ ಸುಪುತ್ರರು ಹಾಗೂ ಕೊಪ್ಪಳ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮೌನೇಶ್ ದಡೇಸೂಗೂರವರು ಲಸಿಕಾ ಹಾಕಿಸುವುದು, ರಕ್ತದಾನ ಮಾಡಿಸುವುದು, ಆರೋಗ್ಯ ತಪಾಸಣಾ ಕಾರ್ಯಕ್ರಮದ ಮುಖಾಂತರ ಕಾರ್ಯಕ್ರಮ ನೆರೆವೇರಿಸಿದರು ಈ ಸಂದರ್ಭದಲ್ಲಿ ಕಾರಟಗಿ ಮಂಡಲ ಕಾರಟಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಹಾಗೂ ಆರೋಗ್ಯ ಅಭಿಯಾನದ ಸಂಚಾಲಕರು ಶರಣಪ್ಪ ಗದ್ದಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಸ್ಕಿ, ರಮೇಶ ನಾಯಕ ಜಂಗಮರ ಕಲ್ಗುಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಶಿವಶರಣೆಗೌಡರು, ಅಯ್ಯನಗೌಡ, ಮುದುಕನಗೌಡ, ಯುವ ಮೋರ್ಚಾ ಸದಸ್ಯರು, ಮಂಡಲದ ಪಧಾದಿಕಾರಿಗಳು, ಶ್ರೀಮತಿ ರತ್ನಕುಮಾರಿ, ಅಂಜನಾದ್ರಿ ರಕ್ತ ಭಂಢಾರದ ಸಿಬ್ಬಂದಿ ವರ್ಗದವರು, ಆಸ್ಪತ್ರೆ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಂಜುನಾಥ ನಾಯಕ ಮಂಡಲ ವಕ್ತಾರರು, ಜಗದೀಶ್ ಯರಡೋಣ ಆರೋಗ್ಯ ಅಭಿಯಾನದ ಸಹಸಂಚಾಲಕರು, ಮಧು ಗುಂಡೂರು, ದುಗ್ಗೇಶ ಗುಂಡೂರು ಹಾಗೂ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ವಿವಿಧ ಮೋರ್ಚಾ ಪದಾಧಿಕಾರಿಗಳು ಮತ್ತು ಇಲಾಖಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ……
ವರದಿ – ಸಂಪಾದಕೀಯ.