ಹಬ್ಬಳ್ಳಿಯ ಆನಂದ ನಗರದಲ್ಲಿ ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಯೋಗ ಶಿಬಿರ….
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಬ್ಬಳ್ಳಿಯ ಆನಂದ ನಗರದಲ್ಲಿ ಇಂದು ಯೋಗ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು, ನಾವು ವಾಸ ಮಾಡುವ ಪ್ರದೇಶದ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಇರಲಿದೆ.ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಈ ವೇಳೆ ಮಾತನಾಡಿದ ಡಾ. ಶ್ರೀಧರ ಹೊಸಮನಿ, ನಾವು ಸಹ ಸ್ವಚ್ಛತೆ ಕಾಪಾಡಲು ಕೈಕೋಡಿಸಿದರೆ ಪೌರ ಕಾರ್ಮಿಕರ ಕೆಲಸದ ಒತ್ತಡವು ಕಡಿಮೆಯಾಗಲಿದೆ, ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಇಡೀ ನಗರವನ್ನು ಸ್ವಚ್ಛ ಮಾಡುತ್ತಾರೆ ಎಂದರು.ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದುದು, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅದಕ್ಕೆ ಇಂದು ಬೆಳಿಗ್ಗೆ ಯೋಗಾಸನ ಪ್ರಾಣಾಯಾಮಗಳು ಪೌರ ಕಾರ್ಮಿಕರೆಗೆ ಹೇಳಿಕೊಡಲಾಯಿತು, ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಅವರಂತೆಯೇ ಶ್ರಮಿಸುತ್ತಿದ್ದಾರೆ. .✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ