ತಾಳಿಕೋಟಿ ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ಡೋಣಿ ನದಿಯಲ್ಲಿ ಕೊಚ್ಚಿಕೊಂಡ ವ್ಯಕ್ತಿಗಾಗಿ ತಾಲೂಕಾಡಳಿತದಿಂದ ಶೋಧ ಕಾರ್ಯ ಮುಂದುವರೆದಿದ್ದು ಯಾವುದೇ ಸುಳಿವು ಲಭ್ಯವಾಗಿಲ್ಲ.
ಹಿಗಾಗಿ ವಿವಿಧ ಆದುನಿಕ ಉಪಕರಣಗಳನ್ನು ಬಳಸಿ ಶೋಧ ನಡೆಸಲಾಗುತ್ತಿದೆ. ಪಟ್ಟಣದ ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಯ ಸೇತುವೆ ದಾಟುವಾಗ ಪ್ರವಾಹದಲ್ಲಿ ಸಿಲುಕಿ ತಾಳಿಕೋಟೆ ಪಟ್ಟಣದ ನಿವಾಸಿ ಇಬ್ರಾಹಿಂ ಬೇಪಾರಿ(56) ಕೊಚ್ಚಿಕೊಂಡು ಹೋಗಿದಾನೆ. ವ್ಯಕ್ತಿ ಕೊಚ್ಚಿಕೊಂಡು ಹೋಗಿ 24 ಗಂಟೆಗಳಾದರೂ ಸಹಿತ ಯಾವುದೇ ಸುಳಿವು ಸಿಕ್ಕಿಲ್ಲ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳನ್ನು ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇದಲ್ಲದೇ ದ್ರೋಣ ಕ್ಯಾಮರಾ ಬಳಸಿದರೂ ಮಾಹಿತಿ ಸಿಕ್ಕಿಲ್ಲ. ಸ್ಥಳಿಯ 10 ಕ್ಕೂ ಹೆಚ್ಚು ನುರಿತ ಮಿನುಗಾರರನ್ನು ಬಳಸಿಕೊಂಡು ಹುಡುಕಾಟ ನಡೆಸಲಾಗುತ್ತಿದೆ. ಶೋಧ ಕಾರ್ಯದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ ತಹಶಿಲ್ದಾರ ಅನೀಲಕುಮಾರ ಢವಳಗಿ ಶೋಧ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಚ್ಚಿಕೊಂಡ ಹೋದ ವ್ಯಕ್ತಿಯ ಸುಳಿವು ಸಿಕ್ಕಿಲ್ಲ. ಆದ ಕಾರಣ ಶೋಧ ಕಾರ್ಯ ಮುಂದುವರೆದಿದೆ. ವಿಜಯಪುರ ದಿಂದ ಡ್ರೋನ್ ಕ್ಯಾಮೆರಾ ತರಿಸಲಾಗಿದೆ ಆದರೂ ಕೂಡ ಯಾವುದೇ ಸುಳಿವು ಸಿಕ್ಕಿಲ್ಲ ಸ್ಥಳೀಯ ಮೀನುಗಾರರನ್ನು ಕರೆತರಲಾಗಿದೆ.24 ಗಂಟೆಗಳ ನಂತರ ಶವ ಮೇಲೆ ಬರುವ ಸಾಧ್ಯತೆ ಇದೆ ಎಂದು ತಾಲೂಕ ದಂಡಾಧಿಕಾರಿಗಳಾದ ಅನಿಲ್ ಕುಮಾರ್ ಡವಳಗಿ ಮಾಧ್ಯಮದ ಮುಂದೆ ಹೇಳಿದರು. ಶೋಧ ಕಾರ್ಯ ಮುಂದುವರಿಸಲಾಗಿದೆ. ತಾಲೂಕು ಆಡಳಿತದಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಅನಿಲ್ ಕುಮಾರ್ ಡವಳಗಿ ಅವರು ತಿಳಿಸಿದರು. ಶೋಧ ಕಾರ್ಯದಲ್ಲಿ ಅಗ್ನಿಶಾಮಕ ಠಾಣೆ ಅಧಿಕಾರಿ ಪ್ರಮೋದ್ ಕುಮಾರ, ಪೊಲೀಸ್ ಇಲಾಖೆ ಯಿಂದ ಎ.ಎಸ್.ಐ ಆರ್.ಎಸ್.ಭಂಗಿ, ಅಶೋಕ ನಾಯ್ಕೋಡಿ ಸೇರಿದಂತೆ ಇತರರು ಇದ್ದರು.
ವರದಿ – ಉಪ-ಸಂಪಾದಕೀಯ