ಕುಷ್ಟಗಿ ಬಾಜಪ ಯುವ ಮೋರ್ಚಾ ವತಿಯಿಂದ ನರೇಂದ್ರ ಮೋದಿ 71 ನೇ ಜನ್ಮದಿನಾಚರಣೆ ಪ್ರಯುಕ್ತ ಲಸಿಕಾ ಅಭಿಯಾನ ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಸನ್ಮಾನ..
ಈ ಸಂದರ್ಭದಲ್ಲಿ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದ ಕುಷ್ಟಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ್ ಅವರು ಈ ಕಾರ್ಯಕ್ರಮ ನರೇಂದ್ರ ಮೋದಿ 71 ನೇ ಜನ್ಮದಿನಾಚರಣೆ ಪ್ರಯುಕ್ತ ಹಾಗೂ ಸೇವೆ ಮತ್ತು ಸಮರ್ಪಣಾ ಅಭಿಯಾನದ ಮುಖೇನ ವಾಗಿ ಇಡೀ ದೇಶಾದ್ಯಂತ ಸಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ಸತತವಾಗಿ ಈ ಅಭಿಯಾನ ಚಾಲ್ತಿಯಲ್ಲಿರುತ್ತದೆ ನರೇಂದ್ರ ಮೋದಿಜಿಯವರು ಪ್ರಥಮ ಬಾರಿಗೆ ಗುಜರಾತ್ ಮುಖ್ಯಮಂತ್ರಿ ಯಾಗಿ ಅಕ್ಟೋಬರ್ 7 /2001 ರಂದು ಪ್ರಮಾಣ ವಚನ ಸ್ವೀಕರಿಸಿ ಹಾಗೆ 7 ವರ್ಷ ಗಳ ಕಾಲ ಪ್ರಧಾನಮಂತ್ರಿ ಯಾಗಿ ಸಲ್ಲಿಸುತ್ತಿರುವ ಅವರು 20 ವರ್ಷಗಳ ರಾಜಕೀಯ ಸೇವೆಗೆ ಬಾಜಪ ಪಕ್ಷದ ವತಿಯಿಂದ ದೇಶಾದ್ಯಂತ ಇಪ್ಪತ್ತು ದಿನಗಳ ಕಾಲ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಹಾಗಾಗಿ ಗ್ರಾಮದ ಎಲ್ಲರೂ ವ್ಯಾಕ್ಸಿನ್ ಬಗ್ಗೆ ಅಸಂಬದ್ಧವಾಗಿ ಕೆಳಿ ಬರುತ್ತಿರುವ ಗಾಳಿ ಸುದ್ದಿಗೆ ಯಾರು ಕಿವಿ ಕೊಡದೆ ಎಲ್ಲರೂ ವ್ಯಾಕ್ಸಿನ್ ಪಡೆದು ಕೊಳ್ಳಬೇಕು ದೇಶದಲ್ಲಿ 71 ಕೋಟಿ ವ್ಯಾಕ್ಸಿನ್ ಹಾಕಲಾಗಿದೆ ಅದರಿಂದ ಯಾರಿಗೂ ಕೂಡ ಅಡ್ಡಪರಿಣಾಮಗಳು ಆಗಿರುವದಿಲ್ಲ ನರೇಂದ್ರ ಮೋದಿಜಿಯವರು ಕೋರೋನ್ ಮುಕ್ತ ಭಾರತ ಮಾಡಬೇಕು ಎಂದು ಪ್ರಯತ್ನ ಪಡುತ್ತಿದ್ದಾರೆ. ಅವರ ಪ್ರಯತ್ನ ಕ್ಕೆ ನಾವೆಲ್ಲರೂ ಕೈ ಜೋಡಿಸಿಬೇಕಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು ತದನಂತರ ಕೋರೋನ್ ಫ್ರಂಟ್ ಲೈನ್ ವಾರಿಯರ್ಸ್ ಆರೋಗ್ಯ ಇಲಾಖೆಯ ಸಿಬ್ಬಂದಿ ಗಳಿಗೆ ಸನ್ಮಾನ ಮಾಡಿ ಗ್ರಾಮದ ಓಣಿ ಓಣಿಗಳಲ್ಲಿ ಸಂಚಾರ ಮಾಡಿ ಸಾರ್ವಜನಿಕರಿಗೆ ಕೋರೋನ್ ಲಸಿಕೆ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯ ದೇಸಾಯಿ,ನಾಗರಾಜ ದಂಡಿನ, ಪಕ್ಷದ ಮುಖಂಡರಾದ ಲಕ್ಷ್ಮಣ್ ಕಟ್ಟಿಹೊಲ ಮಾರುತಿ ತರಲಕಟ್ಟಿ ವೀರೇಶ್ ಗುಡ್ಸೆ ದೇವು ಆರ್ ಹಾಗೂ ಸ್ಥಳೀಯ ಗ್ರಾಮ ಪಂ ಸದಸ್ಯ ನಿಂಗಪ್ಪ ಕುರಿ ಮುಖಂಡರಾದ ಅಯ್ಯನಗೌಡ ಮಲೇಶಿಗೌಡ್ರು ಶಾಮಣ್ಣ ಕಿಲಾರಹಟ್ಟಿ ದುರುಗೇಶ ಇದ್ಲಾಪುರ ಬಸವರಾಜ ರಾಟಿ ಶಂಕರಪ್ಪ ನಾಯಕ ಶಂಕರಪ್ಪ ಬೋದುರು ಯಂಕಣ್ಣ ನಾಯಕ ಪಾಂಡಪ್ಪ ಚಲುವಾದಿ ಇನ್ನಿತರರು ಕಾರ್ಯಕರ್ತರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ – ಉಪ-ಸಂಪಾದಕೀಯ