ತಾವರಗೇರಾ ಪಟ್ಟಣದ 16ನೇ ವಾರ್ಡಿನಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರಿಗೆ ಅವರ 105ನೇ ಜನ್ಮ ದಿನದ ಜಯಂತಿಯನ್ನು ಬಾಜಪ ಕಾರ್ಯಕರ್ತರಿಂದ ಸರಳವಾಗಿ ಆಚರಿಸಲಾಯಿತು……
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ 16ನೇಯ ವಾರ್ಡಿನಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರಿಗೆ 105ನೇ ಜನ್ಮದಿನದ ಜಯಂತಿಯನ್ನು ಸರಳವಾಗಿ ಬಾಜಪ ಕಾರ್ಯಕರ್ತರಿಂದ ಆಚರಿಸಲಾಯಿತು. ಭಾರತೀಯ ರಾಜಕಾರಣಿ, ಬಲಪಂಥೀಯ ಚಿಂತಕರು ಹಾಗೂ ಭಾರತೀಯ ಜನಸಂಘದ ನೇತಾರರು. ಭಾರತೀಯ ಜನಸಂಘವು ಬಳಿಕ ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಂಡಿತು. ದೀನ್‍ದಯಾಳ್ ಉಪಾಧ್ಯಾಯರು ಏಕಾತ್ಮ ಮಾನವ ವಾದದ ಪ್ರವರ್ತಕರು. ದೀನ್ ದಯಾಳ್ ಉಪಾಧ್ಯಾಯರು ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದು, ಬಳಿಕ ಭಾರತೀಯ ಜನಸಂಘದ ಸದಸ್ಯರಾಗಿ ನಿಯುಕ್ತರಾದರು. ೧೯೬೭-೧೯೬೮ರ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ‘ಸಮಗ್ರ ಮಾನವೀಯತೆ’ ಮತ್ತು ‘ಅಂತ್ಯೋದಯ’ ಮಂತ್ರಗಳನ್ನು ನಮಗೆ ಸ್ಪೂರ್ತಿ , ಈ ಕಾರ್ಯಕ್ರಮದಲ್ಲಿ ಲಕ್ಮಣ್ಣ ಮುಖೀಯಾಜಿ, ಬಸವರಾಜಪ್ಪ ಸಿದ್ದರು, ಶ್ಯಾಮೂರ್ತಿ ಅಂಚಿ, ಬಾಲಪ್ಪ ಬಂಗಿ, ನಾಗಪ್ಪ ದಾಸನೂರು, ಯಮನೂರಪ್ಪ ಬಿಳೆಗುಡ್ಡ, ರಮೇಶ ಗದ್ದಿ, ಹನುಮಂತ ಮೂಳ್ಳೂರು, ಶ್ಯಾಮ ದಾಸನೂರು, ಚಂದ್ರು ಮೇಣೆದಾಳ, ಅಂಬಾಜಿ ಕಲಾಲ, ವೆಂಕಿ ಯಾದವ್, ಇತರರು ಉಪಸ್ಥಿತರಿದ್ದರು.
ವರದಿ – ಉಪ-ಸಂಪಾದಕೀಯ