ಶನಿವಾರಸಂತೆ ಕಂದಾಯ ಇಲಾಖೆಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮೇಲೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕರವೇ ಕಾರ್ಯಕರ್ತರು ಮತ್ತು ರಾಮನಲ್ಲಿ ಗ್ರಾಮಸ್ಥರು ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಯಿತು…
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಶನಿವಾರಸಂತೆ ಕಂದಾಯ ಇಲಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಪರಿವೀಕ್ಷಕರಾದ ನಂದ ಕುಮಾರ್ ರವರು ಮತ್ತು ಗ್ರಾಮ ಲೆಕ್ಕಿಗರಾದ ಜಟ್ಟಪ್ಪ ಇವರುಗಳು ಕೆಲಸ ಮಾಡುವ ಸಂದರ್ಭದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತುಂಬಾ ಜನರಿಗೆ ಕೊಟ್ಟಿರುವ ಬಗ್ಗೆ ಮಾಹಿತಿ ಕರವೇ ಬಂದಿರುವ ಹಿನ್ನೆಲೆ ನಾವುಗಳು ಪರಿಶೀಲಿಸಿದಾಗ ಆರ್ ಎಚ್ ಪುಟ್ಟಸ್ವಾಮಿ ರಾಮನಳ್ಳಿ ಇವರಿಗೂ ಸಹ ಪರಿಶಿಷ್ಟ ಪಂಗಡ (ಕುರುಬ )ಜಾತಿಯ ಪ್ರಮಾಣ ಪತ್ರ ನೀಡಿರುತ್ತಾರೆ ಆದರೆ ಆರ್ ಎಚ್ ಪುಟ್ಟಸ್ವಾಮಿ ಇವರು ರಾಮನಳ್ಳಿ ಗ್ರಾಮದವರಾಗಿದ್ದು ಇವರು ಹಿಂದು ಹೆಗ್ಗಡಿಗೌಡ ಪಂಗಡಕ್ಕೆ ಸೇರಿದ್ದು ಇವರ ಶಾಲಾ ದಾಖಲಾತಿ ನೋಡದೆ ಮತ್ತು ಶಾಲಾ ದಾಖಲಾತಿ ಗಳನ್ನು ತೆಗೆದುಕೊಳ್ಳದೆ ಪರಿಶಿಷ್ಟ ಪಂಗಡ (ಕುರುಬ )ಜಾತಿ ಪ್ರಮಾಣ ಪತ್ರವನ್ನು ಪಡೆದು ಕೊಂಡಿರುತ್ತಾರೆ ಹಾಗಾಗಿ ಜಾತಿ ಪ್ರಮಾಣಪತ್ರ ಪಡೆದು ಕೊಂಡವರು ಮೇಲೆ ಮತ್ತು ಜಾತಿ ಪ್ರಮಾಣ ಪತ್ರ ಕೊಡುವಾಗ ಸರಿಯಾಗಿ ದಾಖಲಾತಿ ನೋಡದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ಪಡೆದುಕೊಂಡಿರುವ ಜಾತಿ ಪ್ರಮಾಣಪತ್ರವನ್ನು ಅಮಾನ್ಯ ಮಾಡಿ ಕೊಡಬೇಕು ಕರವೇ ಕಾರ್ಯಕರ್ತರು ಮತ್ತು ರಾಮನಲ್ಲಿ ಗ್ರಾಮಸ್ಥರು ಮನವಿಯನ್ನು ಕೊಡಗು ಜಿಲ್ಲಾಧಿಕಾರಿ ರವರಿಗೆ ಕೊಡಲಾಯಿತು ಹಾಗೆಯೇ ಈ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜಾ ತಾಲ್ಲೂಕು ಅಧ್ಯಕ್ಷರು ಸೋಮವಾರಪೇಟೆ ಇವರು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರು ಮೇಲೆ ಮತ್ತು ಈ ಸಮಯದಲ್ಲಿ ಕೊಟ್ಟ ಅಧಿಕಾರಿಗಳ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು ಮತ್ತು ಈ ಜಾತಿ ಪ್ರಮಾಣಪತ್ರ ಪಡೆದು ನಿಜವಾದ ಫಲಾನುಭವಿಗಳಿಗೆ ಮೋಸ ಆಗುತ್ತಿದೆ ಎಂದು ತಿಳಿಸಿದರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಬೇಗನೆ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ಕೊಟ್ಟಿದ್ದಾರೆ .ಈ ಸಂದರ್ಭದಲ್ಲಿ ರಾಮನಹಳ್ಳಿ ಗ್ರಾಮಸ್ಥರಾದ ಅರುಣ್ ರವರು ಮಾತನಾಡಿ ನಾನು ಹಿಂದು ಹೆಗ್ಗಡಿಗೌಡ ಜಾತಿಗೆ ಸೇರುತ್ತೇನೆ ಆದರೆ ನನಗೆ ಶನಿವಾರಸಂತೆ ಕಂದಾಯ ಇಲಾಖೆಯಿಂದ 3 ಬಿ ಎಂದು ಜಾತಿ ದೃಢೀಕರಣ ಪತ್ರ ಕೊಟ್ಟಿರುತ್ತಾರೆ. ನಮ್ಮ ಗ್ರಾಮಸ್ಥರಾದ ಆರ್ ಎಚ್ ಪುಟ್ಟಸ್ವಾಮಿ ಇವರು ಸಹ ಹಿಂದೂ ಹೆಗ್ಗಡಿ ಗೌಡ ಜಾತಿಗೆ ಸೇರಿರುವುದರಿಂದ ಇವರಿಗೆ ಪರಿಶಿಷ್ಟ ಪಂಗಡ (ಕುರುಬ )ಎಂಬ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಹಾಗಾಗಿ ನಮಗೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿ ಎಂದುಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದೇನೆ ಎಂದು ತಿಳಿಸಿದರು .ಇದೇ ಸಂದರ್ಭದಲ್ಲಿ ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಲ್ಲಿ ಪ್ರವೀಣ್ ರವರು ಮಾತನಾಡಿ ಸುಳ್ಳು ಪಡೆದುಕೊಂಡವರು ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ .ಇದೇ ಸಂದರ್ಭದಲ್ಲಿ ರಾಮನಲ್ಲಿ ಕರವೇ ಘಟಕದ ಅಧ್ಯಕ್ಷರಾದ ಹರೀಶ್ ರವರು ಮಾತನಾಡಿ ಇವರು ಸಹ ನಮ್ಮ ಗ್ರಾಮದವರೇ ಆದರೆ ಇವರು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿಗೆ ಸೇರುವುದಿಲ್ಲ ಇವರು ಇವರು ಇಂದು ಹೆಗ್ಗಡಿ ಗೌಡ ಜಾತಿಗೆ ಸೇರುತ್ತಾರೆ ಇವರ ಶಾಲಾ ದಾಖಲಾತಿಯು ಸಹ ಹಾಗೇ ಇರುತ್ತದೆ ಹಾಗಾಗಿ ಇವರ ಮೇಲೆ ಸರಿಯಾದ ಕ್ರಮ ಆಗಬೇಕು ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳು ಮೇಲು ಸರಿಯಾದ ಕ್ರಮ ಆಗಬೇಕೆಂದು ತಿಳಿಸುತ್ತಾರೆ..ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿಸೋಜಾ ಮತ್ತು ಕರವೇ ತಾಲ್ಲೂಕು ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಮತ್ತು ಗ್ರಾಮದಲ್ಲಿ ಕರವೇ ಘಟಕದ ಅಧ್ಯಕ್ಷರಾದ ಹರೀಶ್ ಮತ್ತು ರಾಮನಲ್ಲಿ ಗ್ರಾಮಸ್ಥರಾದ ಅರುಣ್. ರಾಜಣ್ಣ. ಮೋಹನ್ . ಶರತ್ . ಸಂದೀಪ್ .ರಂಜಿತ್ . ಸೋಮೇಶ್ .ಮಂಜುನಾಥ ಈ ಸಂದರ್ಭದಲ್ಲಿದ್ದರು
ವರದಿ – ಮಹೇಶ ಶರ್ಮಾ