ತಾವರಗೇರಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ನಮ್ಮ ಹೋರಾಟಕ್ಕೆ ಸ್ಫಂಧಿಸಿ ಹಿಂಬರಹ ನೀಡುವ ಮೂಲಕ ನಮ್ಮ ಹೋರಾಟದ ಹೇಜ್ಜೆಗೆ ದಾರಿ ದೀಪವಾಯಿತು.
W.P.I ಮತ್ತ A.A.P. ವತಿಯಿಂದ ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಇದೆ ದಿನಾಂಕ 28/09/2021 ರಂದು ತಾವರಗೇರಾ ಪಟ್ಟಣದ ಹಲವು ಸಮಸ್ಯಗಳ ಕುರಿತು ಅಂದರೆ ಮೂಲಭೂತ ಸಮಸ್ಯಗಳಾದ 1) ಕುಡಿಯುವ ನೀರಿನ ಸಮಸ್ಯ ,2) ಚರಂಡಿ ಸಮಸ್ಯ,3) ಬೀದಿ ದೀಪಗಳ ಸಮಸ್ಯ, 4) ನೀರಿನ ಗುಮ್ಮಿನ ಸಮಸ್ಯ, 5) ಸಿ.ಸಿ.ರಸ್ತೆಯ ಸಮಸ್ಯ, ಇತರೆ ಸಮಸ್ಯಗಳಾದ ಸರ್ಕಾರಿ ಜಮೀನಿನಿನಲ್ಲಿ ಅಕ್ರಮವಾಗಿ ಶೇಡ್ಡು ಹಾಗೂ ಕಟ್ಡಡಗಳನ್ನು ಕೂಡಲೇ ತೆರವುಗೊಳಿಸಬೇಕು, ಜೊತೆಗೆ ಸರ್ಕಾರಿ ಜಮೀನು ಆದ ಸರ್ವೇ ನಂಬರ 54 ರಲ್ಲಿ ಸುಮಾರು 18 ಎಕರೆ 34 ಗುಂಟೆ ಜಮೀನು ಸರ್ವೇ ಮಾಡಿ ಹದ್ದುಬಸ್ತು ಮಾಡುವ ಕುರಿತು ನಾವುಗಳು ಹೋರಾಟ ಹಮ್ಮಿಕೊಂಡಿದ್ದು, ಈ ನಮ್ಮ ಹೋರಾಟದ ಮನವಿಗೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಸ್ಫಂಧಿಸುತ್ತೇವೆ ಎಂದು ದಿನಾಂಕ 25/09/2021 ರಂದು ಲೀಖಿತವಾಗಿ ನಮ್ಮ ಮನವಿ ಪತ್ರಕ್ಕೆ ಹಿಂಬರಹ ನೀಡಿದ್ದು ಇರುತ್ತದೆ. ಈ ಹಿಂಬರಹ ಪತ್ರದಲ್ಲಿ ತುರ್ತ್ತಾಗಿ ಕೇಲವೆ ದಿನಗಳಲ್ಲಿ ಮೂಲಭೂತ ಸಮಸ್ಯಗಳಾದ ಕುಡಿಯುವ ನೀರಿನ ಸಮಸ್ಯ ಹಾಗೂ ಚರಂಡಿ ವ್ಯವಸ್ತೆ ಜೊತೆಗೆ ಹಲವು ವರ್ಷಗಳಿಂದ ಕೇಲವು ವಾರ್ಡಗಳಲ್ಲಿ ನೇಮಕ್ಕೆ ಮಾತ್ರ ನೀರಿನ ಗುಮ್ಮಿ ಕಟ್ಟಿಸಿ, ಬಿಲ್ಲು ಎತ್ತುವಳಿ ಮಾಡಿದ ಪ್ರತಿಯೊಂದು ಗುಮ್ಮಿಗಳಿಗೆ ಕೂಡಲೇ ನೀರಿನ ಸಂಪರ್ಕ ಕಲ್ಪಿಸುವುದು, ಬೀದಿ ದೀಪದ ವ್ಯವಸ್ಥೆ ಕಲ್ಪಿಸುವುದು, ತದ ನಂತರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೇಡ್ಡು ಹಾಕಿರುವುದನ್ನು ಜಿಲ್ಲಾಧಿಕಾರಿಗಳ ಮುಖಾಂತರ ಪರಿಹಾರ ಕಲ್ಪಿಸುತ್ತೆವೆ, ಜೊತೆಗೆ ಪ್ರತಿಯೊಂದು ಇಲಾಖೆಗೆ ಪತ್ರ ಕಳಿಸುತ್ತೆವೆ ಎಂದರು. W.P.I ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಹಾಗೂ A.A.P. ಕಾರ್ಯಕರ್ತರಾದ ಶ್ಯಾಮ್ ದಾಸನೂರ, ಮಂಜುನಾಥ ಎಸ್.ಕೆ. ಆರ್.ಬಿ.ಅಲಿಆದಿಲ್, ಚಂದ್ರು ಮೆಣೇದಾಳ, ಉಪಸ್ಥಿತರಿದ್ದರು.
ವರದಿ – ಉಪ-ಸಂಪಾದಕೀಯ