ಜೀವನ ಕಷ್ಟ ಆತ್ಮಕಥನ ಬಿಚ್ಚಿಟ್ಟ ಪದ್ಮಶ್ರೀ ಪುರಸ್ಕೃತ ಕಲಾವಿದೆ: ಮಂಜಮ್ಮ..
ಹುಮನಾಬಾದ: ಬದುಕು ಬಹಳ ಸಂಘರ್ಷ ಮಯ ಬದುಕು ನಡೆಸಿ,ಹೆಣ್ಣು ಆಗಬೇಕೆಂಬ ನಿಟ್ಟಿನಲ್ಲಿ ಜೋಗತಿಯಾಗಿ ಕಲಾ ಪ್ರತಿಭೆಯಾದೆ.ಹೆ ಣ್ಣು ಗಂಡುಗಳ ಮಧ್ಯ ಜೀವನ ನಡೆಸುವುದು ಕಷ್ಟವಾಯಿತು.ಮನೆಯಿಂದ ಹೊರಹೋಗರೆಂದರು.ಹೆಣ್ಣು ಅಲ್ಲ; ಗಂಡು ಅಲ್ಲ ನನಗೆ ಬಹಳ ಯಾತನೆ ಅನುಭವ ಅನುಭವಿಸಿ ಜೀವನ ವಿವರಿಸಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪ ಡಿಸಿದ ಅನುಭವ ಕಥನ ವಿಶೇಷ ಉಪನ್ಯಾಸದಲ್ಲಿ ತಮ್ಮ ಆತ್ಮ ಕಥನವನ್ನು ಬಿಚ್ಚಿಟ್ಟರು.ಬಾವುಕರಾಗಿ ನಾನು ಕಾಲೇಜು ಮೆಟ್ಟಿಲು ಏರಿಲ್ಲ,ನನ್ನ ಕಲೆ ಕಾಲೇಜು ವೇದಿಕೆ ಹತ್ತಿಸಿತು ಎಂದು ನುಡಿದರು ಪ್ರಾಂಶುಪಾಲ ಡಾ.ವೀರಣ್ಣ ತುಪ್ಪದ ಅವರು ಸನ್ಮಾನಿಸಿ ಗೌರವ ಧನ ನೀಡಿ ನಮ್ಮ ಮಕ್ಕಳ ಮೊಯಿನುದ್ದಿನ್, ಆದರ್ಶವಾಗಲು ಇಂತಹ ಸಾಧಕರ ಸಾಧನೆ ನಮಗೆ ಸ್ಫೂರ್ತಿ ಗಂಡು ಹೆಣ್ಣುಗಳ ನಡುವೆ ಸುಳಿವ ಆತ್ಮ ಒಂದೆ ಎಂಬ ಮಾತು ನಾವು ಕಲಿಯಬೇಕೆಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಜನಪದ ಕಲಾ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ರಾಮ ಡಿ.ವಾಘ ಮಾರೆ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ನಾವು ಯಾರನ್ನೋ ಅದರ್ಶ ಇಟ್ಟುಕೊಳ್ಳುತ್ತವೆ,ನೈಜ ಸಾಧಕರ ಕಲೆ ಬದುಕು ಮುಖ್ಯವೆಂದ ಜೋಗತಿಯ ಪರಿಚಯಿಸಿದರು. ಡಾ.ಜಯದೇವಿ ಗಾಯಕವಾಡ ಸ್ವಾಗತಿಸಿದರು ಡಾ.ರೂತಾ ನಿರೂಪಿಸಿದರು.ಡಾ.ಶಾಂತಕುಮಾರ ಬನಗುಂಡಿ ವಂದಿಸಿದರು.ಡಾ.ಜಯಶ್ರೀ ಶೆಟ್ಟಿ,ಸಾಹಿತಿಗಳಾದ ಬಿ.ಎಸ್.ಖೂಬಾಬಸವರಾಜ ದಯಾಸಾಗರ,ಶಿವರಾಜ ಮೇತ್ರೆ,ಉಮೇಶ ಮಠದ,ವೀರಶೆಟ್ಟಿ ಇದಲ್ಲಾಪುರ,ಸಿದ್ಧರ್ಥಾ ಮಿತ್ರಾ,ಕಂಟೆಪ್ಪ ಹಲಬರ್ಗೆ, ಅಂಬರಿಷ್ ಕನೇರಿ,ವೀರೇಶ ಹಳೆಮನಿ ಇತರರು ವಿದ್ಯಾರ್ಥಿಗಳು ಭಾಗವಹಿಸಿದರು.
ವರದಿ – ಸಂಗಮೇಶ ಎನ್ ಜವಾದಿ.