ನೀರಿನ ಅರವಟ್ಟಿಗೆ: ಸಹೃದಯಿ ಸ್ಹೇಹ ಬಳಗದ ಕಾರ್ಯ ಶ್ಲಾಘನೀಯ.

Spread the love

ನೀರಿನ ಅರವಟ್ಟಿಗೆ: ಸಹೃದಯಿ ಸ್ಹೇಹ ಬಳಗದ ಕಾರ್ಯ ಶ್ಲಾಘನೀಯ.

ಬಿಸಿಲು ನಾಡು ಎಂದೇ ಖ್ಯಾತಿ ಪಡೆದ ನಮ್ಮ ಕೊಪ್ಪಳ ಜಿಲ್ಲೆಯು ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದ್ದು ಬೆಸಿಗೆ ಕಾಲದಲ್ಲಿ ಅನ್ನ ನೀಡುವುದುಕ್ಕಿಂತ ಒಂದು ಗ್ಲಾಸ್ (ಲೋಟಾ) ನೀರು ನೀಡುವುದೇ ಲೇಸು ಎಂಬ ನುಡಿಯಂತೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ  ಹುಲಿಹೈಧರ ಗ್ರಾಮದ ಬಸ್ ನಿಲ್ದಾಣದಲ್ಲಿ ಬಿಸಿಲಿನ ಬೆಗೆಯನ್ನು ನೀಗಿಸಲು ಸಹೃದಯಿ ಸ್ಹೇಹ ಬಳಗದವತಿಯಿಂದ ಶುದ್ದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ,  ಬಿಸಿಲಿಗೆ ನೀರು ಕಾಯದಿರಲೆಂದು ಅರವಟ್ಟಿಗೆಯ ಮೇಲೆ ಟೆಂಟ್ ಹಾಕಲಾಗಿದೆ. ಪಟ್ಟಣದಿಂದ ಬರುವ ಸಾರ್ವಜನಿಕರು ನೀರಿನ ದಾಹ ನಿಗಿಸೋಕೆ ಈ ಅರವಟ್ಟಿಗೆಗೆ ಬಂದು ತಂಪಾದ ನೀರು ಸೇವಿಸಿ, ಜನರು ಅರವಟ್ಟಿಗೆ ಸ್ಥಾಪಿಸಿದವರಿಗೆ ಆ ಭಗವಂತ ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಸಮಾಜಮುಖಿ ಕೆಲಸ ಕಾರ್ಯದಲ್ಲಿ ಪಾಲುಗೊಳ್ಳಲಿಯೆಂದು ಆಶಿಸುತ್ತಾರೆ.. ಈ ಸಂದರ್ಬದಲ್ಲಿ ಸ್ಹೇಹ ಹೃದಯಿ ಪದಾಧಿಕಾರಿಗಳಾದ ಪ್ರಕಾಶ ಹಿರೇಮಠ್, ಎಮ್.ನಾಗೇಶ ನಾಯಕ, ರಾಮಣ್ಣ ಕುರಿ, ಯಂಕಣ್ಣ ಕುಷ್ಟಗಿ, ಆನಂದ್ ನಾಯಕ್, ಆದಪ್ಪ ನಾಯಕ್, ಪರಶುರಾಮ ಭೋವಿ ಮತ್ತಿತರರು ಹಾಜರಿದ್ದರು. ವರಧಿ :- ಅಮಾಜಪ್ಪ ಹೆಚ್.ಜುಮಲಾಪೂರ್ 

Leave a Reply

Your email address will not be published. Required fields are marked *