ಕೊಪ್ಪಳ ಜಿಲ್ಲೆಗೆ ಮಾದರಿಯಂತೆ ಜುಮಲಾಪೂರ ಗ್ರಾಮದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ..
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ. ಶಿಶು ಅಭಿವೃದ್ಧಿ ಯೋಜನೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ. ಎಲ್ಲಾ ಇಲಾಖೆಯ(ಗ್ರಾಮ ಪಂಚಾಯತ್, ಅರೋಗ್ಯ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ,)ಸಹಯೋಗದೊಂದಿಗೆ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಜರುಗಿತು. ಪ್ರಥಮದಲ್ಲಿ ಶಾಲೆಯ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ವೈದ್ಯಾಧಿಕಾರಿ ಶ್ರೀ ಡಾ ಮುಖೇಶ. ಹಾಗೂ ಪಂಚಾಯತ್ ಅಧಿಕಾರಿಗಳು. ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು. ಕೊಠಡಿ ಒಳಗಡೆ ವಿವಿಧ ರೀತಿಯ ಬಗೆ ಬಗೆಯ ಬಣ್ಣ ಬಣ್ಣದ ರಂಗೋಲಿ ಬಸವರಾಜ ಬಡಿಗೇರ ಕೈ ಚಳಕದಲ್ಲಿ ಮೂಡಿ ಬಂದ
ಗರ್ಭಿಣಿ ಮಹಿಳೆ. ಹಾಗೂ ಮಗು ಹೆತ್ತ ಮಹಿಳ ಭಾವಚಿತ್ರ. ಹಾಗೂ ಮಕ್ಕಳ ಕಲಿಕೆಗೆ ಅನುಗುಣವಾಗಿ ಬಿಡಿಸಿರುವ ಚಿತ್ರಗಳು. ಎಲ್ಲರ ಮನ ಸೆಳೆಯಿತು. ಹಾಗೆ ಎಲ್ಲ ಬಗೆ ಬಗೆಯ ಸಿರಿದಾನ್ಯದಿಂದ ತಯಾರಿಸಿದ ಅಡುಗೆ ಪದಾರ್ಥಗಳು ಎಲ್ಲ ಊರಿನ ಸಾರ್ವಜನಿಕರ ಗಮನ ಸೆಳೆಯಿತು. ತದನಂತರದಲ್ಲಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಘಾಟಿಸಿದ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಕ್ಕಮ್ಮ ದಂಡಿನ. ಹಾಗೂ ಪ್ರಬಾರ ಪಿ ಎಸ್ ಐ ಮಲ್ಲಪ್ಪ ವಜ್ರದ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದೊಡ್ಡಪ್ಪ ಚವ್ಹಾಣ. ಹಾಗೂ ಮುಖ್ಯ ವೈದ್ಯಾಧಿಕಾರಿ ಶ್ರೀ ಮುಖೇಶ. ಶಾಲೆಯ ಮುಖ್ಯ ಶಿಕ್ಷಕಿ ಶ್ರೀ ಮತಿ ಗುರುಪಾದಮ್ಮ. ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪೋಷಣ್ ಅಭಿಯಾನದ ತಾಲೂಕು ಸಂಯೋಜಕರಾದ ಶ್ರೀ ಮತಿ ಭಾಗ್ಯ ಶ್ರೀ ವಿ ಹೊಸಮನಿ ಮಾತನಾಡುತ್ತ. ಈ ಯೋಜನೆಯ ಉದ್ದೇಶ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು. ದೆಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಯಿಂದ ಯಾವುದೇ ಮಕ್ಕಳು ಇರಕೂಡದು. ಎನ್ನುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ. ಈ ಪೋಷಣ್ ಅಭಿಯಾನ ಗುರಿ ಏನೆಂದರೆ ಹುಟ್ಟಿದ ಮಗುವಿನಿಂದ 6 ವರ್ಷ ದ ಮಕ್ಕಳು ಯಾವುದೇ ರಿತಿಯಿಂದ ಅಪೌಷ್ಟಿಕತೆಯಿಂದ ಬಳಲುಬಾರದು. ಹಾಗೆ ಬಾಣಂತಿಯರ ಕೂಡ ಅಪೌಷ್ಟಿಕತೆ ಬಳಲುಬಾರದು ಎಂದರು. ತದನಂತರದಲ್ಲಿ ಮಾತನಾಡಿದ ಠಾಣೆಯ ಪ್ರಭಾರ ಪಿ ಎಸ್ ಐ ಶ್ರೀ ಮಲ್ಲಪ್ಪ ವಜ್ರದ ಅವರು. ಈ ಪೋಷಣ್ ಅಭಿಯಾನ. ಈ ಯೋಜನೆ ಹಳ್ಳಿಗಳಲ್ಲಿ ಬಡ ಮಹಿಳೆಯರಿಗೆ. ಕೂಲಿಕಾರರರಿಗೆ. ನೆರವಾಗಲಿದೆ ಹಾಗೆ ಕೊಠಡಿಯಲ್ಲಿ ಬಿಡಿಸಿರುವ ಚಿತ್ರಗಳನ್ನು ನೋಡಿದರೆ. ನಾವು ಹೇಗೆ ಇರಬೇಕು ಎನ್ನುವುದು ಆ ಚಿತ್ರದಿಂದಲೆ ನೋಡಿ ಕಲಿಯ ಬೇಕಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಇನ್ನೂಳಿದ ಗಣ್ಯರು ಮಾತನಾಡಿದರು. (ವಿಶೇಷ ವಾಗಿ ಸಂಪ್ರದಾಯದಂತೆ ಬಾಣಂತಿಯರಿಗೆ ಸಿಮಂತ ಕಾರ್ಯಕ್ರಮ ವನ್ನು ಮಹಿಳಾ ಅಧಿಕಾರಿಗಳು. ಹಾಗೂ ಕಾರ್ಯಕರ್ತೆಯರು ಪದ ಹಾಡುವ ಮುಖಾಂತರ ವಿಶೇಷವಾಗಿ ಕಾರ್ಯಕ್ರಮ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಪಂಚಾಯಿತಿ ಅಧ್ಯಕ್ಷರು. ಹಾಗೂ ಅಭಿವೃದ್ಧಿ ಅಧಿಕಾರಿಗಳು. ಪೊಲೀಸ್ ಪ್ರಭಾರ ಠಾಣಾಧಿಕಾರಿಗಳು. ವೈದ್ಯಾಧಿಕಾರಿಗಳು. ಹಾಗೂ ಜುಮಲಾಪೂರ ಗ್ರಾಮದ ಪಂಚಾಯಿತಿ ಕಾರ್ಯದರ್ಶಿಗಳಾದ ಹನುಮಂತರಾಯ. ಸದಸ್ಯರಾದ ಶ್ರೀ ಬಾಳಪ್ಪ ಕೊಡಗಲಿ. ಶ್ರೀ ಮತಿ ಲಕ್ಷ್ಮಮ್ಮ ಕನಕಪ್ಪ. ಶ್ರೀ ಮತಿ ಖಾಜಾಭೀ ಹುಸೆನಸಾಬ. ಶ್ರೀ ಬಾಳಪ್ಪ ಇದ್ಲಾಪುರ. ಹಾಗೂ ಊರಿನ ಮುಖಂಡರಾದ ಕನಕಪ್ಪ ಹುಡೇಜಾಲಿ. ಶಂಕರಪ್ಪ ನಾಯಕ. ನಿಂಗಪ್ಪ ನಾಯಕ. ತಿಪ್ಪಣ್ಣ ಮಡ್ಡೆರ. ಶಿವುಪುತ್ರ ಬಪ್ಪೂರ. ಬಡನೆಸಾಬ ಕಲಾಲ್. ಶಂಕರಪ್ಪ ಡಿ ಎಸ್ ಎಸ್. ಕನಕಪ್ಪ ಗಂಗನಾಳ. ಪಾಂಡಪ್ಪ ಚಲುವಾದಿ. ಪಂಚಾಯಿತಿ ಸಿಬ್ಬಂದಿ ಲಕ್ಷ್ಮಣ್ ನಾಯಕ. ರಮೇಶ್ ದಂಡಿನ. ಕನಕರಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾಕ್ಟರ್ ಮುಕೇಶ್ ಆಡಳಿತ ವೈದ್ಯಾಧಿಕಾರಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರ ಮುದೇನೂರು ಚಿದಂಬರ್ ಜೋಶಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರ ಶ್ರೀಮತಿ ಸುಶೀಲ ತಾಲೂಕ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ಸರೋಜಾ ಹಿರಿಯ ಆರೋಗ್ಯ ಸುರಕ್ಷತಾಧಿಕಾರಿಗಳು. ಪ್ರಾಥಮಿಕ ಆರೋಗ್ಯ ಕೇಂದ್ರ ಮುದೇನೂರು ಜಗನ್ನಾಥ್ ನಾಯ್ಕೋಡಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಯುತ ಅಮರೇಶ್ ಹಾವಿನ್ ಸರ್,ಮತ್ತು ಮುದೇನೂರ ವಲಯದ ಮೇಲ್ವಿಚಾರಕರು. ಶ್ರೀ ಮತಿ ದುರ್ಗಮ್ಮ ಪೊಲೀಸ್ ಪಾಟೀಲ್,ಮತ್ತು ಹಾಗೂ ಮುದೇನೂರ ವಲಯದ ಕಾರ್ಯಕರ್ತೆಯರು. ಮತ್ತು ಜುಮಲಾಪೂರ ಗ್ರಾಮದ ಕಾರ್ಯಕರ್ತೆಯರು ಸಹಾಯಕಿಯರು ಭಾಗವಹಿಸಿದ್ದರು.
ವರದಿ – ಉಪ-ಸಂಪಾದಕೀಯ