ನನ್ನ ಚಿಕಿತ್ಸೆಗೆ ಸಹಾಯ ಮಾಡಿದವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆ ಅರ್ಪಿಸುತ್ತೇನೆ…..
ನನ್ನ ಚಿಕಿತ್ಸೆ ಖರ್ಚಿನ ವಿವರ
ನಾನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದವನು .ನನ್ನ ಹೆಸರು ಜೀವನ್ ನಾನು ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ .ನನಗೆ ಅಪ್ಪ ಅಮ್ಮ ಯಾರು ಇಲ್ಲದ ಕಾರಣ ನಾನು ಹೊನ್ನವಳ್ಳಿ ಗ್ರಾಮದ ಅಜ್ಜಿ ಮನೆಯಲ್ಲಿ ವಾಸವಾಗಿದ್ದೇನೆ . ನನ್ನನ್ನು ಅಜ್ಜಿ ಕೂಲಿ ಕೆಲಸ ಮಾಡಿ ನೋಡಿಕೊಳ್ಳುತ್ತಿದ್ದರು .ಕಳೆದ ದಿನಾಂಕ 9/6/2020 ರಂದು ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಹೊಟ್ಟೆ ಕೈ ಕಾಲು ಸೇರಿದಂತೆ ನನ್ನ ಮೈಯೆಲ್ಲ ಊದಿಕೊಂಡಿತ್ತು ನಡೆದಾಡಲು ಸಹ ಆಗುತ್ತಿರಲಿಲ್ಲ ಈ ಸಮಯದಲ್ಲಿ ನಾವು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ತೋರಿಸಿದಾಗ ಆಸ್ಪತ್ರೆಯ ವೈದ್ಯರು ಮಡಿಕೇರಿಗೆ ತೋರಿಸಿ ಎಂದು ತಿಳಿಸಿದರು .ಆ ಸಮಯದಲ್ಲಿ ನಮಗೆ ಹಣ ಇಲ್ಲದ ಕಾರಣ ನನ್ನ ಅಜ್ಜಿ ನನ್ನನ್ನು 1ವಾರ ಕಳೆದ ನಂತರ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ತೋರಿಸಿದಾಗ ಮಡಿಕೇರಿ ಸರ್ಕಾರಿ ಆಸ್ಪತ್ರೆ ವೈದ್ಯರು ನನಗೆ 2ಕಿಡ್ನಿಯಲ್ಲಿ ನೀರು ತುಂಬಿರುವ ವಿಷಯ ತಿಳಿಸಿದರು .ಮತ್ತು ನನ್ನನ್ನು ಮೈಸೂರು ಆಸ್ಪತ್ರೆಗೆ ತೋರಿಸಲು ಹೇಳಿದರು .ನನ್ನ ಅಜ್ಜಿಯ ಕೈಯಲ್ಲಿ ಹಣವಿಲ್ಲದ ಕಾರಣ ನಾವು ಮನೆಗೆ ವಾಪಸ್ ಬಂದೆವು ಆದರೆ ದಿನ ದಿನವೂ ನನ್ನ ಆರೋಗ್ಯವು ಉಲ್ಬಣವಾಗುತ್ತಿತ್ತು .ಹಾಸಿಗೆಯಿಂದ ಏಳಲು ಮತ್ತು ನಡೆದಾಡಲು ಕಷ್ಟವಾಗುತ್ತಿತ್ತು.
ಈ ಸಮಯದಲ್ಲಿ ನನ್ನ ಪರಿಸ್ಥಿತಿ ನೋಡಿ ನಮ್ಮ ಮನೆಯ ಕೆಳಗೆ ಅಂಗಡಿಯನ್ನು ಇಟ್ಟುಕೊಂಡಿರುವ ವೀರೇಶ್ ಅಣ್ಣಾ ರವರಿಗೆ ನನ್ನ ಬಗ್ಗೆ ತಿಳಿದು ಅವರು ನಮ್ಮ ಮನೆಗೆ ಬಂದು ನನ್ನ ಪರಿಸ್ಥಿತಿಯನ್ನು ನೋಡಿ ಮರುಕಪಟ್ಟು ಕರವೇಯ ಫ್ರಾನ್ಸಿಸ್ ಡಿಸೋಜಾ ರವರಿಗೆ ತಿಳಿಸಿದ ಮೇರೆಗೆ ಕರವೇ ಫ್ರಾನ್ಸಿಸ್ ಡಿಸೋಜಾ ರವರು ನನ್ನದು 1ಫೋಟೋ ಮತ್ತು ವಿಡಿಯೋ ಹಾಗೂ ಪಾಸ್ ಬುಕ್ಕನ್ನು ತೆಗೆದುಕೊಂಡು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕೆಯಲ್ಲಿ ಹಾಕಿ ಮತ್ತು ವೀರೇಶ್ ಅಣ್ಣನ ಸ್ನೇಹಿತರಿಗೆ ಮತ್ತು ಕರವೇ ಫ್ರಾನ್ಸಿಸ್ ಡಿಸೋಜಾ ಅವರ ಸ್ನೇಹಿತರಿಗೂ ಕಳಿಸಿ ಎಲ್ಲಾ ಕಡೆಯಿಂದ ಒಟ್ಟು ರೂ 2 ಲಕ್ಷ ಹಣ ಸಂಗ್ರಹಿಸಿದರು ..ನಂತರ ಮೊದಲು ನನ್ನನ್ನು ಸೋಮವಾರಪೇಟೆ ಆಸ್ಪತ್ರೆಗೆ ಸೇರಿಸಿ ಮತ್ತೆ ಆಂಬುಲೆನ್ಸ್ ನಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಿದರು .ಈ ಎಲ್ಲಾ ಚಿಕಿತ್ಸೆಗೆ ದಾನಿಗಳು ಕೊಟ್ಟ ಹಣದಿಂದಲೇ ನನ್ನ ಚಿಕಿತ್ಸೆ ನಡೆದಿದೆ .ದಾನಿಗಳು ಕೊಟ್ಟ ಒಟ್ಟು ಹಣ ರೂ 2 ಲಕ್ಷ ಆಗಿದೆ ಈ ಹಣದಿಂದಲೇ ನನಗೆ ಚಿಕಿತ್ಸೆಗೆ ಬಳಸಲಾಗಿದೆ .ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 1ಶಸ್ತ್ರಚಿಕಿತ್ಸೆ ಆಗಿದೆ ಈ ಶಸ್ತ್ರಚಿಕಿತ್ಸೆಗೆ ತುಂಬಾ ಹಣ ಆಗುತ್ತಿತ್ತು ಇದಕ್ಕೆ ಗೋಪಾಲಪುರ ಚರ್ಚ್ ನ ಫಾದರ್ ಲೆಟರ್ ಕೊಟ್ಟ ಮೇರೆಗೆ ಶಸ್ತ್ರಚಿಕಿತ್ಸೆಗೆ ತುಂಬಾ ಕಡಿಮೆ ಹಣದಲ್ಲಿ ನನ್ನ ಶಸ್ತ್ರಚಿಕಿತ್ಸೆಯಾಗಿರುತ್ತದೆ . ಇವತ್ತು ನಾನು ಸಾಯುವ ಹಂತದಲ್ಲಿದ್ದಾಗ ನನ್ನ ಬೆಂಬಲಕ್ಕೆ ನಿಂತು ಸಹಾಯ ಮಾಡಿದ ಹೊನ್ನವಳ್ಳಿ ವಿರೇಶ್ ಅಣ್ಣಾ ಮತ್ತು ಕರವೇ ಫ್ರಾನ್ಸಿಸ್ ಡಿಸೋಜಾ ಮತ್ತು ಮಹೇಶ್ ಇವರುಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ .ಹಾಗೆಯೇ ನನ್ನ ಚಿಕಿತ್ಸೆಗೆ ಹಣ ನೀಡಿದ ಎಲ್ಲಾ ದಾನಿಗಳಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ .ಹಾಗೆಯೇ ನನ್ನಆರೋಗ್ಯ ಸರಿಯಿಲ್ಲದ ಸುದ್ದಿಯನು ಪತ್ರಿಕೆಯಲ್ಲಿ ವರದಿ ಮಾಡಿದ ಪತ್ರಕರ್ತರಿಗೆ ಮತ್ತು ವರದಿಗಾರರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ . ಹಾಗೆಯೇ ನನ್ನ ಶಸ್ತ್ರಚಿಕಿತ್ಸೆಗೆ ಲೆಟರ್ ಕೊಟ್ಟಂತಹ ಫಾದರ್ ರವರೆಗೂ ಧನ್ಯವಾದ ಅರ್ಪಿಸುತ್ತೇನೆ ಹಾಗೆಯೇ ಸೋಮವಾರಪೇಟೆ ವೈದ್ಯಾಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಮತ್ತು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಲು ಉಚಿತ ಆಂಬುಲೆನ್ಸ್ ಕೊಟ್ಟ ಸೋಮವಾರಪೇಟೆ ವೈದ್ಯಾಧಿಕಾರಿಗಳಾದ ಡಾಕ್ಟರ್ ಶಿವಪ್ರಸಾದ್ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೆಯೇ ನನಗೆ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ನಾನು ಈ ದಿನ ಜೀವಂತವಾಗಿ ನಿಮ್ಮ ಮುಂದೆ ಇದ್ದೇನೆ ಅಂದರೆ ತಾವುಗಳು ಎಲ್ಲಾ ರೀತಿಯ ಸಹಕಾರ ನೀಡಿದ್ದರಿಂದ .ಹಣದ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಮತ್ತು ನನ್ನ ಆರೋಗ್ಯ ಸರಿ ಹೊಂದಲು ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ..ನನ್ನ ಚಿಕಿತ್ಸೆಗೆ ಬಂದ ಹಣ 2ಲಕ್ಷ ರೂ ಈವರೆಗೂ ಆಸ್ಪತ್ರೆಗೆ ಖರ್ಚಾದ ಹಣ 1.60000 ಸಾವಿರ ಆಗಿರುತ್ತದೆ .ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ರೂ 40000 ಸಾವಿರ ಹಣ ಇದೆ ಈ ಹಣವನ್ನು ಮುಂದಿನ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಭರಿಸುತ್ತೇನೆ .ಮತ್ತೊಮ್ಮೆ ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ ..ಫೋನ್ ನಂಬರ್ ಕರವೇ ಫ್ರಾನ್ಸಿಸ್ ಡಿಸೋಜಾ 9449255831ಮತ್ತು 9686095831 ಇಂತಿ ತಮ್ಮ ವಿಶ್ವಾಸಿ ಜೀವನ್..
ವರದಿ – ಸಂಪಾದಕೀಯ