ಗ್ರಾಮಸ್ಥರು ಭಯಭೀತರಾಗಬೇಡಿ : ಮೊಹಮ್ಮದ್ ಜಿಯಾವುದ್ದಿನ್.
ಚಿಟಗುಪ್ಪಾ : ಶಾಮತಾಬಾದ ಗ್ರಾಮದ ಭೊಮಿಯಲ್ಲಿ ಆಗುತ್ತಿರುವ ಶಬ್ದಗಳ ಕಂಪನಗಳನ್ನು ಕೇಳಿ ಗ್ರಾಮದ ಜನರು ಭಯಭೀತರಾಗಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯದಿಂದ ಆಗಮಿಸಿದ ಮೂರು ಜನರ ತಜ್ಞರ ಸಮಿತಿಯು ಗ್ರಾಮಕ್ಕೆ ಬಂದು. ಗ್ರಾಮದ ವಿವಿಧ ಸ್ಥಳಗಳ ಪರಿಶೀಲನೆ ಮಾಡಿ, ಅಂಕಿ – ಅಂಶಗಳ, ಸಂಪೂರ್ಣ ಮಾಹಿತಿ ಕಲೆಹಾಕಿ ಭಯಭೀತರಾಗಿರುವ ಗ್ರಾಮಸ್ಥರಿಗೆ ಅಭಯ ನೀಡಿ, ಯಾವುದೇ ಕಾರಣಕ್ಕೂ ಭೊಕಂಪ ಆಗುವುದಿಲ್ಲ ಎಂದು ಸ್ವಷ್ಟವಾಗಿ ಭರವಸೆ ನೀಡಿದ್ದಾರೆ. ಆದಕಾರಣ ಈ ಹಿನ್ನೆಲೆಯಲ್ಲಿ ಗ್ರಾಮದ ಜನರು ಭಯಭೀತರಾಗಬಾರದೆಂದು ಚಿಟಗುಪ್ಪಾ ತಾಲೂಕಿನ ತಹಸೀಲ್ದಾರರಾದ ಮೊಹಮ್ಮದ್ ಜಿಯಾವುದ್ದಿನ್ ರವರು ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಕನಕ, ತಾಲೂಕಿನ ನೋಡಲ್ ಅಧಿಕಾರಿ ಡಾ.ಗೋವಿಂದ ರವರು ಸೇರಿದಂತೆ ಅಧಿಕಾರಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ – ಸಂಗಮೇಶ ಜವಾಧಿ