ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿಯ ಕರೆಯ ಮೆರೆಗೆ ತಾವರಗೇರ ಪಟ್ಟಣದಲ್ಲಿ ವಾರ್ಷಿಕ ಸ್ಥಾಯಿ ನಿಧಿ ಆಂದೋಲನ ಕಾರ್ಯಕ್ರಮ ನಡೆಯಿತು. ಸಿಂಧನೂರ ಸರ್ಕಲ್ ಕಾರ್ಯಕ್ರಮ ನಡಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಡಿ.ಹೆಚ್. ಪೂಜಾರ್ ಮಾತನಾಡಿ; ಆಳುವ ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳು ನೂರಾರು ಕೋಟಿ ದೇಣಿಗೆ ಕೊಟ್ಟು ದೇಶವನ್ನು ಲೂಟಿ ಮಾಡುತ್ತಿವೆ. ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟ 4 ತಿಂಗಳ ಕಳೆದಿದೆ. 294 ರೈತರು ಪ್ರಾಣವನ್ನು ಹೋರಾಟಕ್ಕೆ ಸಮರ್ಪಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ (MSP) ಯನ್ನು ಕಾಯ್ದೆ ವ್ಯಾಪ್ತಿಗೊಳಪಡಲು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕಾಂಟ್ರಾಕ್ಟ್ ಫಾರ್ಮಿಂಗ್ ಕಾಯ್ದೆ ಗೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವರೆಗೆ ಹೋರಾಟದಿಂದ ಸರಿಯುವ ಮಾತೆ ಇಲ್ಲ ಎಂದು ರೈತರು ದೃಢವಾದ ನಿರ್ಧಾರ ಮಾಡಿದ್ದಾರೆ. ಕಮ್ಯೂನಿಸ್ಟ್ ಪಕ್ಷ; ಸಣ್ಣ ವ್ಯಾಪಾರಿಗಳ ಮತ್ತು ರೈತ ಕಾರ್ಮಿಕರಿಂದ ಹಣ ಸಂಗ್ರಹಿ ವಾರ್ಷದೂದಕ್ಕೂ ಕಾರ್ಯಚಟುಕೆಗಳನ್ನು ನಡೆಸಲಾಗುತ್ತದೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪ ಚುನಾವಣೆಯಲ್ಲಿ ಎರಡು ಪಾರ್ಟಿಗಳು ಹಣದ ಹೊಳೆ ಹರಿಸಿ ಪ್ರಜಾತಾಂತ್ರಕ ವ್ಯವಸ್ಥೆಯನ್ನು ಕಗ್ಗೋಲೆ ಮಾಡುತ್ತಿದೆ. ಭ್ರಷ್ಟ ಶೋಷಕ ವ್ಯವಸ್ಥೆಯನ್ನು ಬದಲಾಯಿಸುವ ಸಿದ್ದಾಂತ ಗುರಿ ಹೊಂದಿರುವ ಪಕ್ಷ ಸಂಘಟನೆಗಳು ಸಾಮಾನ್ಯ ದುಡಿಯುವ ಜನರ ಮೇಲೆ ಅವಲಂಬನೆ ಆಗಿರಬೇಕು. ಈ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, ಬಿ.ಎನ್. ಯರದಿಹಾಳ ಚಿಟ್ಟಿ ಬಾಬು, ಪರಶುರಾಮ, ಮಲ್ಲೇಶ ಗೌಡ, ,ಎಂ.ಏಸಪ್ಪ ಶ್ಯಾಮಿದ್ ಸಾಬ್ ,, ಇತರರು ಇದ್ದರು. ಬೆಲೆ ಹೇರಿಕೆ, ನಿರುದ್ಯೋಗ, ಬಡತನಕ್ಕೆ ಕಾರಣವಾಗಿರುವ ಕೇಂದ್ರ ರಾಜ್ಯ ಸರ್ಕಾರ ನೀತಿಗಳನ್ನು ಅಧ್ಯಾಯನ ಮಾಡಿರಿ. ಅಜ್ಞಾನ ಮೂಢನಂಬಿಕೆಯಲ್ಲಿರುವ ಜನರಿಗೆ ಸರಿಯಾದ ತಿಳುವಳಿಕೆ ಕೊಡಲು ಮುಂದಾಗಿರಿ. ಸರ್ಕಾರಗಳ ನೀತಿಗಳು ಬರಲಾಗದಿದ್ದರೆ ಮತ್ತು ಇನ್ನು 10 ವರ್ಷ ಇದೆ ಪರಸ್ಥಿ ಮುಂದುವರೆದರೆ ದೇಶ ಬೀಕರ ಅಪಾಯಕ್ಕೆ ಸಿಲುಕಲಿದೆ. ನಿರುದ್ಯೋಗ ಬಡತನ ಹಸಿವಿನಿಂದ ಕೋಟಿ ಕೋಟಿ ಜೀವಗಳು ನೆಲಕುರಳಲಿವೆ. ವರಧಿ – ಅಮಾಜಪ್ಪ ಹೆಚ್.ಜುಮಲಾಪೂರ