(ಗೌಂವಠಾಣ) ಸರಕಾರಿ ಜಮೀನು ಉಳಿವಿಗಾಗಿ ತಾವರಗೇರಾ ಪ್ರಗತಿಪರ ಸಂಘಟನೆಗಳಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ…
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ (ಗೌಂವಠಾಣ) ಸರಕಾರಿ ಜಮೀನು ಮುಂದಿನ ಪೀಳಿಗೆಗಾಗಿ (ಉಳಿವಿಗಾಗಿ) ತಾವರಗೇರಾ ಪಟ್ಟಣದ ಪ್ರಗತಿಪರ ಸಂಘಟನೆಗಳಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೇ ಹಾಗೂ ಯೋಜನಾ ನಿರ್ದೇಶಕರಾದ ನಗರಾಭಿವೃದ್ದಿ ಕೋಶ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ವಿವರಣೆ :- ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಮೀನು ಸರ್ವೆ ನಂಬರ್ 54 * ರಲ್ಲಿ ಸುಮಾರು 18 ಎಕರೆ 36 ಗುಂಟೆ ಜಮೀನು ಇದ್ದು, ಜೊತೆಗೆ ಈ ಜಮೀನಿಗೆ ಹತ್ತಿಕೊಂಡಿರುವ ಗೌಂವಠಾಣ ಜಮೀನು ಇದ್ದು, ಈ ಎರಡು ಸರಕಾರಿ ಜಮೀನಿನಲ್ಲಿ ರಾಜಕೀಯ ಪ್ರಭಾರಿಗಳು, ಊರಿನ ಗಣ್ಯರು, ಅತೀ ಕ್ರಮಿಸಿದ್ದು, ಖಂಡನೀಯವಾಗಿರುತ್ತದೆ. ಜೊತೆಗೆ ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಹಲವು ಭಾರಿ ಸ್ಥಳಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಕ್ಯಾರೇ ಎನ್ನದೇ ಬಲಿಷ್ಠ ಸದಸ್ಯರ ಜೊತೆ ಶಾಮೀಲು ಆಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ವೆಲ್ಫರ್ ಪಾರ್ಟಿ ಆಪ್ ಇಂಡಿಯಾ ತಾವರಗೇರಾ ಹೋಬಳಿ ಘಟಕ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ರಾಜಾನಾಯಕ, ಆನಂದ್ ಬಂಡಾರಿ, ಹಾಗೂ ಕ.ನ.ಸೇ ತಾಲೂಕಾ ಅಧ್ಯಕ್ಷರಾದ ಶ್ಯಾಮೂರ್ತಿ ಅಂಚಿ, ಶ್ಯಾಮ ದಾಸನೂರ, ಮಂಜುನಾಥ ಎಸ್.ಕೆ. ಆರ್.ಬಿ.ಅಲಿಆದಿಲ್, ಚಂದ್ರು ಸಿ.ಎಮ್, ಅಂಬಣ್ಣ ಕಲಾಲ್, ರಮೇಶ ಗದ್ದಿ, ಸಂಗಪ್ಪ ಸುಣಗಾರ, ನಾಗೇಶ ಹುನಗುಂದ್, ಶರಣಪ್ಪ ಕಲಾಲ್ ಇತರರು ಭಾಗಿಯಾಗಿದ್ದರು. ಜೊತೆಗೆ ತಾವರಗೇರಾ ಪಟ್ಟಣದ ನಾಡ ಕಚೇರಿಯ ಅಧಿಕಾರಿಗಳಿಗೂ ಈ ಮನವಿ ಪತ್ರ ಸಲ್ಲಿಸಿದರು. ಹಕ್ಕೋತ್ತಾಯಗಳು :- 1) ಮುಂದಿನ ದಿನಮಾನಗಳಲ್ಲಿ ಈ ವಿಷಯಕ್ಕೆ ಅಧಿಕಾರಿಗಳು ಸ್ಪಂಧಿಸದೆ ಹೋದರೆ (ಗೌಂವಠಾಣ) ಸರಕಾರಿ ಜಮೀನು ಉಳಿವಿಗಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು.2) ಅಧಿಕಾರದ ದುರುಫಯೋಗದಿಂದ ಬೇನಾಮಿ ಆಸ್ಥಿ ಮಾಡುವಲ್ಲಿ ಮುಂದಾದ ಸದಸ್ಯರ ವಿರುದ್ದ ದಂಗೆ ಹೇಳುವುದು, 3) ಸದಸ್ಯರಿಗೆ ಸಾತ್ ನೀಡುವ ಪ.ಪಂ ಅಧಿಕಾರಿಗಳು ಜೊತೆಗೆ ನಾಡ ಕಚೇರಿಯ ಸಂಬಂಧಪಟ್ಟ ಅಧೀಕಾರಿಗಳನ್ನ ಕೂಡಲೇ ವರ್ಗಾವಣೆ ಗೋಳಿಸಬೇಕು, 4) ಸರಕಾರಿಯ ಜಮೀನಿನಲ್ಲಿ ಹಾಕಿರುವ ಶೇಡ್ಡುಗಳನ್ನೂ ಈ ಕೂಡಲೇ ತೇರವುಗೊಳಿಬೇಕು, ಈ ಎಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗನೇ ಇಡೇರಿಸದಿದ್ದರೆ ಸಂಬಂದಪಟ್ಟ ಇಲಾಖೆಯ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ – ಅಮಾಜಪ್ಪ ಹೆಚ್.ಜುಮಲಾಪೂರ