ಪೌರ ಕಾರ್ಮಿಕರ ಬೇಡಿಕೆಗಳಿಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ — ರಾಘವೇಂದ್ರ ಹಿಟ್ನಾಳ.
ಕೊಪ್ಪಳ:ಸೆ:30. ಪೌರ ಕಾರ್ಮಿಕರ ಬೇಡಿಕೆಗಳ ಇಡೇರಿಕೆಗಾಗಿ ಮುಖ್ಯಮಂತ್ರಿಯವರ ಗಮನ ಸೆಳೆಯುತ್ತೇನೆ ಎಂದು ಶಾಸಕ ಕೆ. ರಾಘವೇಂದ್ರ ಬಿ. ಹಿಟ್ನಾಳ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಕೊಪ್ಪಳ ಶಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮುಂದುವರೆದು ಮಾತನಾಡಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕೊಪ್ಪಳದ ಪೌರಕಾರ್ಮಿಕರಿಗೆ ಗುಂಪು ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ. ಇನ್ನು ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಹಾಗೂ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವದು ಸೇರಿದಂತೆ ಹಲವಾರು ವಿಷಯಗಳ ಕುರಿತು ಈಗಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಕೊಪ್ಪಳ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಟ್ಟು. ಸ್ವಚ್ಛ ನಗರ ಪ್ರಶಸ್ತಿ ಪಡೆಯಲು ಪೌರಕಾರ್ಮಿಕರು ಪಣತೊಡಬೇಕು ಎಂದು ಕರೆ ನೀಡಿದರು.ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ ಪೌರಕಾರ್ಮಿಕರು ಸಮಾಜಕ್ಕೆ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರು ಪೌರಕಾರ್ಮಿಕರಿಗೆ ಗೌರವಿಸಬೇಕು. ಜಿಲ್ಲಾಮಟ್ಟದ ವ್ಯಾಪ್ತಿಯಲ್ಲಿ ಬರುವ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ನಗರಸಭೆ ಅಧ್ಯಕ್ಷೆ ಶ್ರೀಮತಿ ಲತಾ ಗವಿಸಿದ್ದಪ್ಪ ಚಿನ್ನೂರ ಮಾತನಾಡಿ ಪೌರಕಾರ್ಮಿಕರು ಕೊರೋನಾ ಕಾಲದಲ್ಲಿ ಹಗಲು ರಾತ್ರಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಪೌರಕಾರ್ಮಿಕರು ಹಲವು ಸಲಕರಣೆಗಳನ್ನು ಬಳಸಿಕೊಂಡು. ಕಾಲಿಗೆ ಶೂ ಹಾಕಿಕೊಂಡು ಕೆಲಸ ಮಾಡಬೇಕು. ತಮ್ಮ ಮಕ್ಕಳಿಗೆ ತಮ್ಮ ರೀತಿ ಪೌರಕಾರ್ಮಿಕರಾಗಿ ಕೆಲಸ ಮಾಡುವ ಬದಲಿಗೆ ಅವರಿಗೆ ಅತ್ಯುತ್ತಮ ಉನ್ನತ ಶಿಕ್ಷಣ ನೀಡಿ. ನಗರಸಭೆಗೆ ಪೌರಾಯುಕ್ತ. ಅಭಿಯಂತರರಾಗಿ ಬರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಉಪಾಧ್ಯಕ್ಷೆ ಶ್ರೀಮತಿ ಝರೀನಾ ಬೇಗಂ ಖಾಜಾಸಾಬ್ ಅರಗಂಜಿ. ಮಾಜಿ ಅಧ್ಯಕ್ಷ. ಹಾಲಿ ಸದಸ್ಯ ಮಹೇಂದ್ರಕುಮಾರ್ ಚೋಪ್ರಾ. ಅಮ್ಜದ್ ಪಟೇಲ್. ಮುತ್ತು ಕುಷ್ಟಗಿ. ಅಝೀಮುದ್ದೀನ್ ಅತ್ತಾರ್. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ. ಗಂಗಪ್ಪ. ಪೌರಾಯುಕ್ತ ರಮೇಶ್ ಬಡಿಗೇರ್. ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಲಾಲ್ ಸಾಬ್ ಮನಿಯಾರ. ಕೊಪ್ಪಳ ಶಾಖೆ ಅಧ್ಯಕ್ಷ ಶಿವಪ್ಪ ಗಿಣಿಗೇರಾ. ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಅಳ್ಳಳ್ಳಿ. ಸಂಘದ ಸಲಹೆಗಾರ ದುರ್ಗಪ್ಪ ಕಂದಾರಿ ಮುಂತಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ದಿಂದ ಸಂಜೆವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದುರ್ಗಪ್ಪ ಕಂದಾರಿ ಅವರ ಸಂಗಡಿಗರೊಂದಿಗೆ ಜರಗಿತು.
ವರದಿ – ಎಸ್.ಎ. ಗಫಾರ್.