ಸರ್ಕಾರದ ಚಲ್ಲಾಟ. ರೈತರ ಗೋಳಾಟ. ನಾಟಕದ ಖ್ಯಾತ ಕವಿ ಹಾಗೂ ಪತ್ರಕರ್ತ ಬಿ ಎನ್ ಹಿತ್ತಲಮನಿಗೆ ಕನ್ನಡ ಮಾಣಿಕ್ಯ ಪ್ರಶಸ್ತಿ……
ದಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ರೈತಾಪಿ ವರ್ಗದ ನಿಂಗಪ್ಪ ಬಸವ್ವ ಬಡ ಕುಟುಂಬದಲ್ಲಿ. ಹಿರಿಯ ಮಗನಾಗಿ ಜನಿಸಿದ ಬಸಪ್ಪ ನಿಂಗಪ್ಪ ಹಿತ್ತಲಮನಿ. ಪ್ರಾಥಮಿಕ ಶಿಕ್ಷಣವನ್ನು ಹೂಟ್ಟುರಾದ ಬ್ಯಾಲ್ಯಾಳ ಗ್ರಾಮದಲ್ಲಿ ಮುಗಿಸಿ. ನಂತರದಲ್ಲಿ ಪ್ರೌಢ ಶಿಕ್ಷಣವನ್ನು ಆರ್. ಇ. ಎಸ್ ಇನಾಹೊಂಗಲ ಹಾಗೂ ಕಾಲೇಜು ಶಿಕ್ಷಣ ಮತ್ತು ಪದವಿ ವ್ಯಾಸಂಗವನ್ನು ಶ್ರೀ ಎಸ್. ಜೆ. ಎಂ. ವ್ಹಿ. ಮಹಾಂತ ಕಾಲೇಜು ರಾಯಪುರ ದಾರವಾಡ ದಲ್ಲಿ ಮುಗಿಸಿ. ಪದವಿ ಶಿಕ್ಷಣ ಮುಗಿದ ನಂತರ ಯಾವುದಾದರೂ ಸರ್ಕಾರಿ ಉದ್ಯೋಗ ಹುಡುಕಲು ಪ್ರಯತ್ನ ಪಡುತ್ತಿರುವಾಗ. ಮನೆತನದ ಜವಾಬ್ದಾರಿಗೆ ಹೆಗಲು ಕೊಡುವ ಸಂದರ್ಭ ಬಂದಿತ್ತು. ಮನೆತನದ ಜವಾಬ್ದಾರಿ ಸಾಗಿಸುವದಕ್ಕೊಸ್ಕರ ಕಿಂಚಿತ್ತೂ ಎದೆಗುಂದದೆ. ತಂದೆ ತಾಯಿ ತಂಗಿಗೊಸ್ಕರ ಕೂಲಿ ನಾಲಿ ಗಾರೆ ಕೆಲಸ ಮಾಡುತ್ತಾ ಕಷ್ಟ ಜೀವನ ಸಾಗಿಸುತ್ತಾ. ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಮುದಾಯ ಬಾನುಲಿ ಕೇಂದ್ರದಲ್ಲಿ ಕ್ಷೇತ್ರ ವರದಿಗಾರರಾಗಿ ಅನೇಕ ರೈತರೂಡನೆ ಬೆರೇತು ಅವರ ಕಾರ್ಯಕ್ರಮ ಧ್ವನಿಮುದ್ರಣ ಮಾಡುವಲ್ಲಿ ಕೃಷಿ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥರ ಹಾಗೂ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕನ್ನಡದ ಬಗ್ಗೆ ಕವಿಗೂಷ್ಠಿ 150 ಹೆಚ್ಚು ರೈತರ ಬಗ್ಗೆ ಕಿರುರೂಪಕಗಳು 200 ಕ್ಕೂ ಹೆಚ್ಚು ಬರೆದಿದ್ದಾರೆ. ಅದು ಅಲ್ಲದೇ ಮಹಾದಾಯಿ ಕಳಸ ಬಂಡೂರಿ ಹೋರಾಟದ ಕುರಿತು ಅವರೆ ಸ್ವತಃ ರಚಿಸಿರುವ ಸರ್ಕಾರದ ಚೆಲ್ಲಾಟ ರೈತರ ಗೊಳಾಟ ನಾಟಕದ ಮೂಲಕ ಮೂಲೆ ಮೂಲೆಗೆ ಗ್ರಾಮಿಣ ಪ್ರದೇಶ ರಂಗಭೂಮಿಗೆ ಚಿರಪರಿಚಿತರಾಗಿದ್ದಾರೆ. ಕನ್ನಡದ ಕವಿಗೂಷ್ಠಿ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ರೈತರ ಬಗ್ಗೆ ಕಿರುರೂಪಕಗಳು 200 ಕ್ಕೂ ಹೆಚ್ಚು ಬರೆದಿದ್ದಾರೆ ಹಾಗೆ 1)ಸರ್ಕಾರದ ಚಲ್ಲಾಟ ರೈತರ ಗೋಳಾಟ 2) ದರ್ಪದ ಶ್ರಿಮಂತರಿಗೆ ದೂಳೆಬ್ಬಿಸಿದ ಹುಲಿ 3) ಮುತ್ತೈದೆಗೆ ಬಂತು ಮಾಂಗಲ್ಯದ ಕುತ್ತು ಎಂಬ ಕಲಾ ಕುಸುಮ ರಚಿಸಿದ ಹೈಬ್ರಿಡ್ ನ್ಯೂಸ್ ಎರಡನೆ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಕನ್ನಡ ಮಾಣಿಕ್ಯ ಪ್ರಶಸ್ತಿ ಬಾಜನರಾಗಿದ್ದಾರೆ ಹಾಗೆ ಅವರು ರಚಿಸಿರುವ “ಸರ್ಕಾರದ ಚೆಲ್ಲಾಟ ರೈತರ ಗೊಳಾಟ” ನಾಟಕವನ್ನು ಕುಷ್ಟಗಿ ತಾಲ್ಲೂಕಿನ ಜುಮಲಾಪೂರ ಗ್ರಾಮದ ಶ್ರೀ ಪಾಂಡುರಂಗ ನಾಟ್ಯ ಕಲಾ ಸಂಘದ ಸದಸ್ಯರು ಪ್ರದರ್ಶನ ಮಾಡಿ ರಂಜಿಸಿದ್ದಾರೆ ಇನ್ನೂ ಹಲವಾರು ಪ್ರಶಸ್ತಿ ರತ್ನಗಳು ಅವರಿಗೆ ಲಬಿಸಲಿ ಎಂದು ಜುಮಲಾಪೂರ ಗ್ರಾಮದ ಶ್ರೀ ಪಾಂಡುರಂಗ ನಾಟ್ಯ ಕಲಾ ಸಂಘದ ಸರ್ವ ಸದಸ್ಯರ ಆಶಯವಾಗಿದೆ.
ಉಪ – ಸಂಪಾದಕೀಯ