ಗ್ರಾಮದ ಅಭಿವೃದ್ಧಿಗೆ ಬದ್ಧ : ರಾಜಶೇಖರ ಬಿ.ಪಾಟೀಲ.

Spread the love

ಗ್ರಾಮದ ಅಭಿವೃದ್ಧಿಗೆ ಬದ್ಧ : ರಾಜಶೇಖರ ಬಿ.ಪಾಟೀಲ.

ಹುಮನಾಬಾದ : ಹಿಲಾಲಪೂರ ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧರಾಗಿರುತೇವೆ.ಅದೇ ರೀತಿ ಗ್ರಾಮದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸರಿ ತಕ್ಷಣವೇ ಸ್ವಂದಿಸುವ ಕೆಲಸ ಮಾಡುತ್ತೇವೆ. ಜನಸಾಮಾನ್ಯರ ಬವಣೆಗಳನ್ನು ನಿವಾರಣೆ ಮಾಡುವ ಮೂಲಕ ಎಲ್ಲರ ಪ್ರೀತಿ – ವಿಶ್ವಾಸಕ್ಕೆ ಸಾಕ್ಷಿಯಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿದ್ದೇವೆ ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಾಜಶೇಖರ ಬಿ ಪಾಟೀಲರು ನುಡಿದರು. ಕ್ಷೇತ್ರದ ಹಿಲಾಲಪುರ ಗ್ರಾಮದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿರುವ ಆಹಾರದ ಕಿಟ್ ವಿತರಣಾ ಸಮಾರಂಭದಲ್ಲಿ 130 ಅರ್ಹ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಆಹಾರದ ಕಿಟ್ ಗಳು ವಿತರಿಸಿ, ಮಾತನಾಡಿದ ಅವರು  ಹಿಲಾಲಪೂರ ಗ್ರಾಮದವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಮತ್ತು ನಮ್ಮ ಕುಟುಂಬ ಸದಾ ಚೀರ ಋಣಿಯಾಗಿರುತೇವೆ. ಗ್ರಾಮದ ಅಭಿವೃದ್ಧಿ ಹಾಗೂ ಜನರ ನೋವಿಗೆ ಸದಾ ಸ್ವಂದಿಸುತ್ತೇವೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹಳ್ಳಿಖೇಡ ಬಿ ಪುರಸಭೆ ಅಧ್ಯಕ್ಷರಾದ ಶ್ರೀ ಮಹಂತಯ್ಶಾ ತೀರ್ಥ, ಶ್ರೀ ಯೂಸುಫ್ ಸೌದಾಗರ, ಸಂದೀಪ ಪ್ರಭಾ, ಸ್ಥಳೀಯ ಮುಖಂಡರಾದ ಶ್ರೀ ರಾಜು ರಾಯಪಳ್ಳಿ,  ಪಾಟೀಲ್, ಬಸವರಾಜ ಕರಜೋಳಗಿ ರಾಜಕುಮಾರ ಕರಜೋಳಗಿ, ಆನಂದ ಶಿವಮುರ್ತಿ, ರಾಜಕುಮಾರ ಶಿವಮೂರ್ತಿ, ರಮೇಶ ಮಾಳಗೆ, ಶಾಮರಾವ ಬಿರಾದಾರ, ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಶ್ರೀ ಸೋಮನಾಥ ಪಾಂಚಾಳ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ವರದಿ : ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *