ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕಠಿಣ ಕಾನೂನನ್ನು ಜಾರಿಗೊಳಿಸಬೇಕೆಂದು ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಒತ್ತಾಯದ ಮನವಿ,”
ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿ ಮಹಿಳಾ ಮತ್ತು ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಮಟ್ಟದಿಂದ ಗ್ರಾಮ ಮಟ್ಟದವರೆಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತಾ ಸಮಿತಿಗಳನ್ನು ರಚಿಸಿ ತಪ್ಪಿತಸ್ಥರಿಗೆ ಗಲ್ಲಿಗೇರಿಸುವಂತ ಕಠಿಣ ಕಾನೂನನ್ನು ಜಾರಿಗೊಳಿಸಬೇಕೆಂದು ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಒತ್ತಾಯದ ಮನವಿ,”ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಆಲೋಚನೆಯೊಂದಿಗೆ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಸ್ವಾಭಿಮಾನ ಕಾರ್ಯಕರ್ತರ ಜೊತೆಯಲ್ಲಿ ಯುವ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀಯುತ ಸುರೇಶ್ ಗೋಕಾಕ್ ನೇತೃತ್ವದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದಿಂದ ಕಳೆದ ಹಲವಾರು ವರ್ಷಗಳಿಂದ ಜಾತಿಭೇದವಿಲ್ಲದೆ ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಾಡಿನ ಜನತೆಗೆ ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳ ವಿಚಾರವಾಗಿ ಸರ್ಕಾರ ಮತ್ತು ಜನರ ನಡುವೆ ಪಾರದರ್ಶಕ ಸೇತುವೆಯಾಗಿ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಲು ಭ್ರಷ್ಟಚಾರ ಮುಕ್ತ, ಸಮಸಮಾಜ ನಿರ್ಮಾಣದ ಗುರಿಯ ಆಶಯವನ್ನು ಇಟ್ಟುಕೊಂಡು ಸಮಾಜದಲ್ಲಿ ಇಂದು ನಡೆಯುತ್ತಿರುವ ಅರಾಜಕತೆ, ಮೋಸ, ವಂಚನೆಗಳನ್ನು ಹತ್ತಿಕ್ಕಲು ಹಲವಾರು ಹೋರಾಟ ಮತ್ತು ಸಮಾಜಮುಖಿ ಕೆಲಸಗಳಾದ ನೂರಾರು ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ನಡೆಸಿರುವುದಷ್ಟೇ ಅಲ್ಲದೆ ನಾಡು ನುಡಿಗೆ ಧಕ್ಕೆ ಬಂದಾಗ ಹೋರಾಟ ಕಟ್ಟಿ ಕನ್ನಡಿಗನ ಬದುಕು ಹಸನಾಗಿಸುವ ಪ್ರಾಮಾಣಿಕ ಬಂದಿದೆ. ಜೊತೆ ರಾಜಿರಹಿತ ಹೋರಾಟಗಳನ್ನು ಮಾಡಿಕೊಂಡು ಪ್ರಯತ್ನಗಳ ಮಾಡಿಕೊಂಡು ಬಂದಿದ್ದೆ. ನಮ್ಮ ದೇಶ ಮತ್ತು ಭಾಷೆಗಳನ್ನು ಹೆಣ್ಣಿಗೆ ಹೋಲಿಸಿ ತಾಯಿ ಭಾಷೆ ಮತ್ತು ತಾಯಿ ನೆಲ ಎಂದು ಕರೆಯುವ ವಾಡಿಕೆಯ ಸಂಸ್ಕೃತಿ ನಮ್ದು. ದೇಶ ಎಂದ ಕೂಡಲೆ “ತಾಯಿ ಭಾರತಾಂಬೆ” ರಾಜ್ಯ ಎಂದ ಕೂಡಲೇ ರಾಜ್ಯ ಎಂದಕೂಡಲೇ “ತಾಯಿ”. ವಂದನೆಗಳು ಗಣೇಶ್ ಕೆ ಯಡಿಹಳ್ಳಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ದಾವಣಗೆರೆ,.
ವರದಿ – ಸಂಪಾದಕೀಯ